ಚಿಕ್ಕೋಡಿ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಕ್ರಿಕೆಟ್ – ಏಂಜಲಿಕಾ ಮೆಲಾನಿ, ಶ್ರೀಶ ಆರ್.ಎಸ್ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಪುತ್ತೂರು: ಚಿಕ್ಕೋಡಿ ಜಿಲ್ಲೆಯಲ್ಲಿ ಅಂಡರ್ 17ರ ವಯೋಮಿತಿ ವಿಭಾಗದಲ್ಲಿ ನಡೆದ ರಾಜ್ಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಅಲೌರೌಂಡ್ ಪ್ರದರ್ಶನ ನೀಡಿದ ದರ್ಬೆ-ಪಾಂಗ್ಲಾಯಿ ಬೆಥನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಏಂಜಲಿಕಾ ಮೆಲಾನಿ ಪಿಂಟೋ ಹಾಗೂ ಫಿಲೋಮಿನಾ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಶ ಎಸ್.ಆರ್ ರವರು ರಾಷ್ಟ್ರಮಟ್ಟದ ಸ್ಕೂಲ್ ಟೂರ್ನಮೆಂಟಿಗೆ ಆಯ್ಕೆಯಾಗಿದ್ದಾರೆ‌.
ಮೊದಲಿಗೆ ಬೆಂಗಳೂರು ತಂಡದ ವಿರುದ್ಧ ಪಂದ್ಯದಲ್ಲಿ ಮೈಸೂರು ವಿಭಾಗೀಯ ತಂಡವನ್ನು ಪ್ರತಿನಿಧಿಸಿದ ಏಂಜಲಿಕಾ ಮೆಲಾನಿ ಹಾಗೂ ಶ್ರೀಶ ಆರ್.ಎಸ್ ರವರು ಅಮೋಘ ಪ್ರದರ್ಶನದಿಂದ ತಂಡವು ಜಯಗಳಿಸಿತ್ತು. ಬಳಿಕ ಬೆಳಗಾವಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಪಂದ್ಯವು ಅಂತಿಮ ಎಸೆತದವರೆಗೆ ರೋಚಕತೆಯನ್ನು ಕಂಡರೂ ಕೊನೆಗೆ ಮೈಸೂರು ತಂಡ ಸೋಲೊಪ್ಪಿಕೊಂಡಿತು. ಈ ಎರಡೂ ಪಂದ್ಯಗಳಲ್ಲಿ ಏಂಜಲಿಕಾ ಮೆಲಾನಿ ಹಾಗೂ ಶ್ರೀಶ ಆರ್.ಎಸ್ ರವರು ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಅಮೋಘ ಸಾಧನೆ ಮೆರೆದಿದ್ದರು.


ಈ ಮೊದಲು ಬ್ರಹ್ಮಾವರದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ತಂಡವನ್ನು ಮುನ್ನೆಡೆಸಿದ ಏಂಜಲಿಕಾ ಮೆಲಾನಿರವರು ದಕ್ಷಿಣ ಕನ್ನಡ ತಂಡ ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು ಮಾತ್ರವಲ್ಲ ತಂಡವನ್ನು ಪ್ರತಿನಿಧಿಸಿದ ಏಂಜಲಿಕಾ ಮೆಲಾನಿ ಹಾಗೂ ಶ್ರೀಶ ಆರ್.ಎಸ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಇವರೀರ್ವರಿಗೂ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ತರಬೇತಿ ನೀಡಿದ್ದರು ಹಾಗೂ ಏಂಜಲಿಕಾ ಮೆಲಾನಿ ಪಿಂಟೋರವರು ಕೊಂಬೆಟ್ಟು ನಿವಾಸಿ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ಹಾಗೂ ಫಿಲೋಮಿನಾ ಪ್ರೌಢಶಾಲೆಯ ಶಿಕ್ಷಕಿ ಮೋಲಿ ಫೆರ್ನಾಂಡೀಸ್ ಮತ್ತು ಶ್ರೀಶ ಆರ್.ಎಸ್ ರವರು ಎಪಿಎಂಸಿ ರಸ್ತೆ ನಿವಾಸಿ, ರವಿ ಪ್ರೋವಿಷನ್ ಸ್ಟೋರ್ ನ ಮಾಲಕ ರವಿಚಂದ್ರ ಹಾಗೂ ಶ್ವೇತಾ ಎಂ.ಆರ್ ರವರ ಪುತ್ರಿ.

LEAVE A REPLY

Please enter your comment!
Please enter your name here