ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ-10 ಸಾಧಕರಿಗೆ ಸನ್ಮಾನ

0

ಸರಕಾರದಿಂದ ಕನ್ನಡದ ಬಗ್ಗೆ ಪೂರಕ ಕಾರ್ಯಕ್ರಮ – ಅಶೋಕ್ ಕುಮಾರ್ ರೈ

ದರ್ಬೆಯಿಂದ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆ
ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ 8 ಮಂದಿಯ ಭಾವಚಿತ್ರ ಪ್ರದರ್ಶನ,
8 ಶಾಲೆಯ 400 ವಿದ್ಯಾರ್ಥಿಗಳ ಜೊತೆಗೆ ಪುತ್ತೂರಿನ ಪ್ರತಿಷ್ಠಿತ 50 ಸಂಘ ಸಂಸ್ಥೆಗಳು ಮೆರವಣಿಗೆಯಲ್ಲಿ ಭಾಗಿ

ಪುತ್ತೂರು: ಕರ್ನಾಟಕ ರಾಜ್ಯವೆಂದು ಮರು ನಾಮಕರಣವಾದ 50 ನೇ ವರ್ಷದ ಸುವರ್ಣ ಸಂಭ್ರಮ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಧ್ಯೇಯ ವಾಕ್ಯದೊಂದಿಗೆ ದರ್ಬೆ ವೃತ್ತದಿಂದ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆಯೊಂದಿಗೆ ವೈಭವದಿಂದ ನಡೆಯಿತು.


ಶಾಸಕ ಅಶೋಕ್ ಕುಮಾರ್ ರೈ ಅವರು ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಮುಖ್ಯರಸ್ತೆಯಾಗಿ ಕೋರ್ಟ್ ರಸ್ತೆ ಮೂಲಕ ನಗರ ಸಭೆಯ ಮುಂಭಾಗದ ಪುರಭವನದಲ್ಲಿ ತಾಲೂಕು ಆಡಳಿತದಿಂದ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಯಿತು.ಕಿಲ್ಲೆ ಮೈದಾನದಲ್ಲಿರುವ ಮಂಗಲ್ ಪಾಂಡೆ ಚೌಕದಲ್ಲಿ ಸಹಾಯಕ ಕಮೀಷನರ್ ಗಿರೀಶ್ ನಂದನ್ ರಾಷ್ಟ್ರಧ್ವಜಾರೋಹಣ ಮಾಡಿದರು. ಪುರಭವನದ ಮುಂದೆ ಶಾಸಕ ಅಶೋಕ್ ಕುಮಾರ್ ರೈ ಅವರು ಕನ್ನಡ ಧ್ವಜಾರೋಹಣ ಮಾಡಿದರು. ಬಳಿಕ ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಕನ್ನಡ ಭುವನೇಶ್ವರಿ ದೇವಿಯ ಪ್ರತಿಮೆ ಮುಂದೆ ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆ ಮಾಡಿದರು.


ಸಾಧಕರಿಗೆ ಸನ್ಮಾನ:
ಕರ್ನಾಟಕ ಸುವರ್ಣ ಸಂಭ್ರದ ಹಿನ್ನಲೆಯಲ್ಲಿ 10 ಮಂದಿ ಸಾಧಕರಾದ ವೈದ್ಯಕೀಯ ಕ್ಷೇತ್ರದಲ್ಲಿ ಹಿರಿಯ ಪ್ರಸೂತಿ ತಜ್ಞ ಡಾ.ಸುಬ್ರಾಯ ಭಟ್, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಎ.ಪಿ ಸದಾಶಿವ ಮರಿಕೆ, ಸಾಹಿತ್ಯ ಕ್ಷೇತ್ರದಲ್ಲಿ ನಿರ್ಮಲಾ ಸುರತ್ಕಲ್, ಶಿಕ್ಷಣ ಕ್ಷೇತ್ರದಲ್ಲಿ ನಿವೃತ್ತ ಶಿಕ್ಷಕ ನಾರಾಯಣ ಕೆ, ಕ್ರೀಡಾ ಕ್ಷೇತ್ರದಲ್ಲಿ ದಯಾನಂದ ರೈ ಕೋರ್ಮಂಡ, ರಂಗಭೂಮಿಯಲ್ಲಿ ಸುಂದರ ರೈ ಮಂದಾರ, ಶಿಕ್ಷಣ ಸಮನ್ವಯದಲ್ಲಿ ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವಿನ್, ಸಮಾಜ ಸೇವೆಯಲ್ಲಿ ಸರಕಾರಿ ಆಸ್ಪತ್ರೆಯ ಡಾ.ಅಜಯ್, ಸಾಹಿತ್ಯ ಸಂಘಟನೆಯಲ್ಲಿ ನಾರಾಯಣ ಕುಂಬ್ರ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಸಿದ್ದಿಕ್ ನಿರಾಜೆ ಅವರನ್ನು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶಾಸಕರ ಮೂಲಕ ಸನ್ಮಾನಿಸಲಾಯಿತು.


ಸರಕಾರದಿಂದ ಕನ್ನಡದ ಬಗ್ಗೆ ಪೂರಕ ಕಾರ್ಯಕ್ರಮ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಕನ್ನಡ ನಮ್ಮ ಇತಿಹಾಸ ಮೌಲ್ಯದ ಭಂಡಾರವಾಗಿದೆ. ಕನ್ನಡಕ್ಕಾಗಿ ಪೂರ್ವಜರ ಕೊಡುಗೆಗಳನ್ನು ರಾಜ್ಯೋತ್ಸವದಂದು ನೆನಪಿಸುವುದು ಅಗತ್ಯ. ಮುಂದಿನ ಪೀಳಿಗೆಗೆ ಕನ್ನಡ ಭಾಷೆಯ ಅರಿವು, ಪ್ರೀತಿಯನ್ನು ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕನ್ನಡದ ಬಗ್ಗೆ ಪೂರಕ ಕಾರ್ಯಕ್ರಮ ಸರಕಾರ ಹಮ್ಮಿಕೊಂಡಿದೆ ಎಂದರು.


ಸಭಾಕಾರ್ಯಕ್ರಮದ ಆರಂಭದಲ್ಲಿ ಕಿಲ್ಲೆ ಮೈದಾನದಲ್ಲಿರುವ ಮಂಗಲ್ ಪಾಂಡೆ ಚೌಕದಲ್ಲಿ ಸಹಾಯಕ ಕಮೀಷನರ್ ಗಿರೀಶ್ ನಂದನ್ ಸಂದೇಶ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ, ಸಾಧಕರ ಆಯ್ಕೆ ಸಮಿತಿ ಪ್ರಮುಖ್ ಬೆಟ್ಟ ಈಶ್ವರ ಭಟ್, ದಯಾನಂದ, ಕೊಂಬೆಟ್ಟು ಶಾಲಾ ಚಿತ್ರಕಲಾ ಶಿಕ್ಚಕ ಜಗನ್ನಾಥ ಅರಿಯಡ್ಕ ಅತಿಥಿಗಳನ್ನು ಗೌರವಿಸಿದರು.


ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಜೆ ಶಿವಶಂಕರ್, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಚಾಲಕರಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಸುವರ್ಣ ಕನ್ನಡ ಸಂಭ್ರದ ಹಿನ್ನಲೆಯಲ್ಲಿ 5 ಕನ್ನಡ ಹಾಡುಗಳನ್ನು ಸಂಗೀತ ಶಿಕ್ಷಕರು ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಶಿಕ್ಷಣ ಸಂಯೋಜಕ ಹರಿಪ್ರಸಾದ್, ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಸುಚಿತ್ರ ಹೊಳ್ಳ ಕಾಣಿಯೂರು ಸರಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಶುಭರಾವ್, ಸವಣೂರು ಸ.ಹಿ.ಪ್ರಾಥಮಿಕ‌ ಶಾಲೆಯ ಸಂಗೀತ ಶಿಕ್ಷಕಿ ಪವಿತ್ರ ರೂಪೇಶ್, ನೆಟ್ಟಣಿಗೆಮುಡ್ನೂರು ಹಿ.ಪ್ರಾಥಮಿಕ‌ ಶಾಲೆಯ ಶಿಕ್ಷಕ ರಮೇಶ್ ಶೀರ್ಲಾಲು ಕನ್ನಡದ 5 ಹಾಡುಗಳನ್ನು ಹಾಡಿದರು.

LEAVE A REPLY

Please enter your comment!
Please enter your name here