ಪುತ್ತೂರು :ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ವತಿಯಿಂದ ವಿಕಲಚೇತನರಿಗೆ ಗಾಲಿ ಕುರ್ಚಿ ವಿತರಣಾ ಕಾರ್ಯಕ್ರಮ ಈಶ್ವರಮಂಗಲ ಶಾಖೆಯಲ್ಲಿ ನಡೆಯಿತು.ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ನಿರ್ದೇಶಕ ಶ್ರೀರಾಮ ಪಕ್ಕಳ ಮಾತನಾಡಿ ಸಂಘವು ಬೆಳೆಗಾರರ ಅಶೋತ್ತರಗಳಿಗೆ ಸ್ಪಂದಿಸಿದ್ದು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಸಂಘ ಆರ್ಥಿಕವಾಗಿ ಸದೃಢವಾಗಿದ್ದು ಸಂಘದ ಸದಸ್ಯರು ಮತ್ತು ಬೆಳೆಗಾರರು ಇದಕ್ಕೆ ಕಾರಣರಾಗಿದ್ದಾರೆ. ರಬ್ಬರ್ ಬೆಲೆ ಸ್ಥಿರತೆ ಕಾಪಾಡಲು ಮತ್ತು ಬೆಳೆಗಾರರ ಹಿತವನ್ನು ಕಾಪಾಡಲು ಬದ್ಧವಾಗಿದೆ. ಗಡಿ ಗ್ರಾಮದಲ್ಲಿ ನಂಬರ್ ವನ್ ಸಂಸ್ಥೆಯಾಗಿ ಸಂಘ ಬೆಳೆದದ್ದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಫಲಾನುಭವಿಗಳಾದ ಫಾತಿಮ್ ಕಲ್ಲಾಜೆ ಮತ್ತು ರಾಶಿದಾ ಚಾರ್ಪಟೇ ರವರಿಗೆ ಗಾಲಿ ಕುರ್ಚಿ ವಿತರಿಸಲಾಯಿತು.
ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಅಧಿಕಾರಿ ಸಂತೋಷ್, ನೆಟ್ಟನಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಫೌಜಿಯ, ಉಪಾಧ್ಯಕ್ಷ ರಾಮ ಮೇನಾಲ,, ಪಿಡಿಒ ವಸಿಮ ಗಂಧದ, ಕಾರ್ಯದರ್ಶಿ ಶಾರದ, ಪಂಚಾಯತ್ ಸದಸ್ಯರಾದ ಚಂದ್ರಹಾಸ ಈಶ್ವರಮಂಗಲ, ಇಬ್ರಾಹಿಂ, ರಿಯಾಜ್, , ವಲಯ ಕಾಂಗ್ರೆಸ್ ಅಧ್ಯಕ್ಷ ಮೂಸನ್, ಮಾಜಿ ಪಂಚಾಯತ್ ಅಧ್ಯಕ್ಷ ರಮೇಶ್ ರೈ ಸಾಂತ್ಯ,ವಿಕ್ರಂ ರೈ ಸಾಂತ್ಯ ಗಿರೀಶ್ ರೈ ಮರಕ್ಕಡ, ಸಿಬ್ಬಂದಿಗಳಾದ ಸಂತೋಷ್, ನಾಗೇಶ್ ಕರ್ನೂರು ಗುತ್ತು, ಪ್ರತೀ ಕ್ಷಾ ರೈ, ಆಶ್ರಫ್, ಕೃಷ್ಣ ಭಟ್ ಮುಂತಾದರು ಉಪಸ್ಥಿತರಿದ್ದರು