ರಾಮಕುಂಜ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಕಡಬ ಹಾಗೂ ಸೈಂಟ್ ಜೋಕಿಮ್ಸ್ ಪ್ರೌಢಶಾಲೆ ಕಡಬ ಇವರ ಸಂಯುಕ್ತ ಆಶ್ರಯದಲ್ಲಿ ಕಡಬ ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯಲ್ಲಿ ನಡೆದ ಕಡಬ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಮಧುರಾ ಎಂ ಡಿ (10ನೇ) ಕನ್ನಡ ಭಾಷಣ ಪ್ರಥಮ, ಪ್ರಜ್ಞಾ (9ನೇ) ತುಳು ಭಾಷಣ ಪ್ರಥಮ, ರಾಶಿ ವೈ (9ನೇ) ಛದ್ಮವೇಷ ಪ್ರಥಮ, ಮೇಘ ಎಸ್.ಪಿ (10ನೇ)ಭಾವಗೀತೆ ಪ್ರಥಮ, ಅಮೃತ ಎ (8ನೇ) ಕವನ ವಾಚನ ಪ್ರಥಮ, ಶರಣ್ಯ ಶೆಟ್ಟಿ (8ನೇ)ಹಿಂದಿ ಭಾಷಣ ದ್ವಿತೀಯ, ಆದಿತ್ಯ ಎ.ಆರ್.ಭಟ್(8ನೇ) ಸಂಸ್ಕೃತ ಧಾರ್ಮಿಕ ಪಠಣ ದ್ವಿತೀಯ, ಎಂ.ಮನಸ್ವಿನಿ ಆಚಾರ್ಯ(10ನೇ) ಜನಪದ ಗೀತೆ ದ್ವಿತೀಯ, ನಮೃತಾ(8ನೇ) ಆಶುಭಾಷಣ ದ್ವಿತೀಯ, ಮೋನಿಷಾ(10ನೇ) ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ ದ್ವಿತೀಯ, ಸ್ಪೂರ್ತಿ (9ನೇ)ಇಂಗ್ಲಿಷ್ ಭಾಷಣ ತೃತೀಯ, ಯಶಸ್ವಿನಿ ಜಯೇಂದ್ರ ಬಂಗೇರ(10ನೇ) ಭರತನಾಟ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
- ಸಂಸ್ಥೆಯ ಕಾರ‍್ಯದರ್ಶಿ ಕೆ.ಸೇಸಪ್ಪ ರೈ, ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್ ಟಿ, ವ್ಯವಸ್ಥಾಪಕ ರಮೇಶ್ ರೈ ಆರ್.ಬಿ., ಪ್ರೌಢಶಾಲಾ ಮುಖ್ಯಗುರು ಗಾಯತ್ರಿ ಯು.ಎನ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರು ಲೋಹಿತಾ ಎ ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ಮಾರ್ಗದರ್ಶನ ನೀಡಿದರು.