ಕಡಬ: ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯು ನಡೆಯಿತು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ “ಕರ್ನಾಟಕದಲ್ಲಿ ಈ ದಿನವನ್ನು ನಾವು ಬಹಳ ಸಂತೋಷದಿಂದ ಆಚರಿಸುತ್ತೇವೆ.ಈ ದಿನ ಕನ್ನಡ ಮಾತನಾಡುವ ಪ್ರದೇಶಗಳು ಒಗ್ಗೂಡಿ ಒಂದು ರಾಜ್ಯವಾದ ಮಹತ್ವದ ದಿನ. ಮೊದಲಿಗೆ ಮೈಸೂರು ಎಂದು ಕರೆಯಲ್ಪಡುತ್ತಿದ್ದದ್ದು ನಂತರದಲ್ಲಿ ಕರ್ನಾಟಕ ಎಂದು ನವೀಕರಿಸಲಾಯಿತು. ಕನ್ನಡನಾಡು ಬೆಳಗುವ ಸೂರ್ಯನಂತೆ ಪ್ರಕಾಶಿಸುತ್ತಾ ದೇಶದಲ್ಲಿಯೇ ಎಲ್ಲರನ್ನು ಆಕರ್ಷಿಸುತ್ತಿದೆ. ಅನೇಕ ಸಾಧಕರಿಗೆ ತವರಿನಂತಿರುವ ಈ ಕರ್ನಾಟಕದ ಹಿರಿಮೆಯನ್ನು ಇನ್ನಷ್ಟು ಏರಿಸುವ ಜವಾಬ್ದಾರಿ ನಿಮ್ಮದು” ಎಂದು ಹೇಳಿದರು.
ಈ ಸಮಾರಂಭದಲ್ಲಿ ವಿದ್ಯಾರ್ಥಿನಿಯರು ಕನ್ನಡ ಗೀತೆಗಳನ್ನು ಹಾಡಿದರು ಮತ್ತು ನಾಡ ತಾಯಿ ಭುವನೇಶ್ವರಿ ದೇವಿಯ ಬಾವಚಿತ್ರಕ್ಕೆ ಎಲ್ಲರೂ ಪುಷ್ಪಾರ್ಚನೆಗೈದರು. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರಾದ ಸತೀಶ್ ಭಟ್, ಉಪನ್ಯಾಸಕ-ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.