ಅಧ್ಯಕ್ಷ: ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಪ್ರ.ಕಾರ್ಯದರ್ಶಿ: ಬಶೀರ್ ಇಂದ್ರಾಜೆ, ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಪಿ.ಎಂ.ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಡಾ.ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಬಶೀರ್ ಇಂದ್ರಾಜೆ ಹಾಗೂ ಕೋಶಾಧಿಕಾರಿಯಾಗಿ ಯೂಸುಫ್ ಗೌಸಿಯಾ ಸಾಜ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಗಳಾಗಿ ಬಿ.ಕೆ.ಅಬ್ದುಲ್ ರಶೀದ್ ಸಂಪ್ಯ ಹಾಗೂ ಯೂಸುಫ್ ಮೈದಾನಿಮೂಲೆ, ಆಡಿಟರ್ ಆಗಿ ಅನ್ವರ್ ಹುಸೈನ್ ಗೂಡಿನಬಳಿ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಆಶಿಖುದ್ದೀನ್ ಅಖ್ತರ್ ಕುಂಬ್ರ, ಶಂಸುದ್ದೀನ್ ಬೈರಿಕಟ್ಟೆ, ಅಬ್ದುಲ್ ಹಮೀದ್ ಸುಳ್ಯ, ಎಸ್.ಎಂ ಬಶೀರ್ ಹಾಜಿ ಶೇಖಮಲೆ, ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಕರೀಂ ಕಾವೇರಿ ಅವರನ್ನು ಆಯ್ಕೆ ಮಾಡಲಾಯಿತು.
ರಾಜ್ಯದ ಪ್ರತಿಷ್ಠಿತ ಮಹಿಳಾ ಶಿಕ್ಷಣ ಸಂಸ್ಥೆ ಕುಂಬ್ರ ಮರ್ಕಝುಲ್ ಹುದಾ ಕರ್ನಾಟಕ ಇದರ ವಿಶೇಷ ಸಭೆ ಕಾರಂದೂರು ಮರ್ಕಝ್ ಸಖಾಫತಿ ಸ್ಸುನ್ನಿಯ್ಯಃ ಬಿ.ಡಿ.ಹಾಲ್‌ನಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಿ.ಮುಹಮ್ಮದ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಸ್ಥೆಯ ಮುಖ್ಯ ಪೋಷಕರಾಗಿ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಹಾಗೂ ಸಲಹೆಗಾರರಾಗಿ ಮರ್ಕಝುಸ್ಸಖಾಫತಿ ಸ್ಸುನ್ನಿಯ್ಯಃ ಚಾನ್ಸಲರ್ ಸಿ.ಮುಹಮ್ಮದ್ ಫೈಝಿ ಅವರನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಉದ್ಘಾಟಿಸಿದರು. ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ ಸ್ವಾಗತಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ವಂದಿಸಿದರು.
ಆಡಳಿತ ವಿಭಾಗದ ಅಧಿಕಾರಿಗಳಾದ ಅಬ್ದುಸ್ಸಮದ್ ಸಖಾಫಿ ಮಲಪ್ಪುರಂ, ದಿಲ್‌ಶಾದ್ ಅಲಿ, ಮುಹಮ್ಮದ್ ಶಬೀರ್, ಕುಂಬ್ರ ಮರ್ಕಝುಲ್ ಹುದಾದ ಮೆನೇಜರ್ ಉಮರ್ ಅಮ್ಜದಿ ಕುಕ್ಕಿಲ ಭಾಗವಹಿಸಿದ್ದರು.