ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಪುತ್ತೂರು: ಸರಳವಾದ ಹಾಗೂ ಸುಂದರವಾದ ಕನ್ನಡ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವ ಮೂಲಕ ನಮ್ಮ ಭವಿಷ್ಯದ ಬೇರನ್ನು ಗಟ್ಟಿಗೊಳಿಸೋಣ. ಕನ್ನಡವು ನಮ್ಮ ಹೃದಯದ ಭಾಷೆ. ಇದರಲ್ಲಿ ನಾವು ಆಲೋಚನೆ ಮಾಡುತ್ತಾ ದೈನಂದಿನ ಜೀವನದಲ್ಲಿ ಕನ್ನಡದಲ್ಲಿಯೇ ವ್ಯವಹರಿಸೋಣ. ಕನ್ನಡವನ್ನು ಪ್ರೀತಿಸಿ, ಗೌರವಿಸಿ ಬೆಳೆಸುವ ಮೂಲಕ ನಮ್ಮ ಕನ್ನಡ ನಾಡಿನ ನೆಲ, ಜಲ ಸಂಸ್ಕೃತಿಯನ್ನು ರಕ್ಷಿಸೋಣ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಹಿರಿಯ ಶಿಕ್ಷಕಿ ರೇವತಿ ಇವರು ನುಡಿದರು. ಶಿಕ್ಷಕಿ ಪೂರ್ಣಿಮಾರವರು ಕನ್ನಡ ರಸಋಷಿ ಕವಿಯಾದ ಕುವೆಂಪುರವರ ’ಬಾರಿಸು ಕನ್ನಡ ಡಿಂಡಿಮ’ ಹಾಡನ್ನು ಹಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಮುಖ್ಯಗುರುಗಳಾದ ನಳಿನಿ ವಾಗ್ಲೆ ’ಶಾಲೆಯಲ್ಲಿ ಅಪ್ಪಟ ಕನ್ನಡ ಭಾಷೆಯನ್ನು ಮಾತನಾಡುವ ಮೂಲಕ ಭಾಷೆಯನ್ನು ಸದೃಢಗೊಳಿಸಬೇಕೆಂದು’ ತಿಳಿಸಿದರು. ಶಾಲಾ ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರವನ್ನು ಶಿಕ್ಷಕ ಚಂದ್ರಶೇಖರ ಸುಳ್ಯಪದವು ನಿರೂಪಿಸಿದರು.

LEAVE A REPLY

Please enter your comment!
Please enter your name here