ನ.6: ‘ಹೈಟೆಕ್ ಲೈಟಿಂಗ್ ಹೌಸ್’ ಸ್ಥಳಾಂತರಗೊಂಡು ಎಳ್ಮುಡಿಯ ಎಂ.ಜಿ.ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ

0

ವಿವಿಧ ಬಗೆಯ ಲೈಟ್, ಫ್ಯಾನ್ ಗಳ ಸಂಪೂರ್ಣ ಹವಾನಿಯಂತ್ರ ಮಳಿಗೆ

ಪುತ್ತೂರು: ಕಳೆದ 7 ವರುಷಗಳಿಂದ ದರ್ಬೆಯ ಗಿರಿಜಾ ಕ್ಲಿನಿಕ್ ನ ಪಕ್ಕದಲ್ಲಿರುವ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿದ್ದ ಫ್ಯಾನ್ ಹಾಗೂ ವಿವಿಧ ಬಗೆಯ ಲೈಟ್ ಗಳ ಮಳಿಗೆ ‘ಹೈಟೆಕ್ ಲೈಟಿಂಗ್ ಹೌಸ್’ ಎಳ್ಮುಡಿಯ ಎಂ.ಜಿ.ಕಾಂಪ್ಲೆಕ್ಸ್ ನಲ್ಲಿರುವ ಅಪೋಲೋ ಮೆಡಿಕಲ್ ನ ಪ್ರಥಮ ಮಹಡಿಗೆ ಸ್ಥಳಾಂತರಗೊಂಡು ನ.6ರಂದು ಉದ್ಘಾಟನೆಗೊಳ್ಳಲಿದೆ.

ಸಂಸ್ಥೆಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್‌ ರವರು ಉದ್ಘಾಟಿಸಲಿದ್ದಾರೆ‌. ಅಸಯ್ಯದ್ ಆಲಿ ತಂಙಳ್ ಕುಂಬೋಳ್, ಅಸಯ್ಯದ್ ಪೂಕೋಯ ತಂಙಳ್ ಪುತ್ತೂರು, ಅಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ಹಾಗೂ ಅಸಯ್ಯದ್ ಜಲಾಲುದ್ದೀನ್ ಬಾಖವಿ ತಂಞಳ್ ಬನ್ಪುತ್ತಡ್ಕರವರು ದುವಾ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೆ.ಪಿ.ಸಿ.ಸಿ. ಸಂಯೋಜಕರಾದ ಹೇಮನಾಥ ಶೆಟ್ಟಿ ಕಾವು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಎಂ.ಬಿ.ವಿಶ್ವನಾಥ‌ ರೈ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಆಲಿ, ಜಿಲ್ಲಾ ಕಾಂಗ್ರೆಸ್ ಸಂಯೋಜಕರಾದ ಮೊಹಮ್ಮದ್ ಬಡಗನ್ನೂರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ.

ಏಳು ವರುಷಗಳ ಸೇವಾ ಪರಂಪರೆ:
ಕಳೆದ ಏಳು ವರುಷಗಳಿಂದ ದರ್ಬೆಯ ಗಿರಿಜ ಕ್ಲಿನಿಕ್ ನ ಪಕ್ಕದಲ್ಲಿರುವ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿದ್ದ ‘ಹೈಟೆಕ್ ಲೈಟಿಂಗ್ ಹೌಸ್’ ಸ್ಪರ್ಧಾತ್ಮಕ ಬೆಲೆಯಲ್ಲಿ‌ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡುವ ಮೂಲಕ ಗ್ರಾಹಕರ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗಿತ್ತು, ಮಾತ್ರವಲ್ಲದೇ ತನ್ನದೇ ಆದ ಗ್ರಾಹಕ ವರ್ಗವನ್ನು ಹೊಂದಿತ್ತು

ವಿಶಾಲವಾದ ಹೊಸ ಶೋರೂಂ:
ಇತರ ದೊಡ್ಡದೊಡ್ಡ ಪೇಟೆ ಪಟ್ಟಣಳಲ್ಲಿ ಕಾಣಸಿಗುವಂತಹ ಶೋರೂಂ ಬೆಳೆಯುತ್ತಿರುವ ನಮ್ಮ ಪುತ್ತೂರಿನಲ್ಲಿ ತನ್ನ ಗ್ರಾಹಕವರ್ಗಕ್ಕೆ ನೀಡಬೇಕೆನ್ನುವ ದೃಷ್ಟಿಯಿಂದ ಮಾಲಕರು ಇದೀಗ ಸಂಸ್ಥೆಯನ್ನು ವಿಸೃತ ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದಾರೆ. ಹೊಸ ಶೋರೂಂ ಮೂರು ಅಂತಸ್ತನ್ನು ಹೊಂದಿದ್ದು, ಪ್ರಥಮ ಮಹಡಿಯಲ್ಲಿ ಶೋಲೈಟ್, ಎರಡನೇ ಅಂತಸ್ಥಿನಲ್ಲಿ ಫ್ಯಾನ್ಸಿ ಲೈಟ್ ಹಾಗೂ ಫ್ಯಾನ್ ಗಳ ಬೃಹತ್ ಸಂಗ್ರಹವಿದೆ‌. ಮೂರನೇ ಅಂತಸ್ಥಿನಲ್ಲಿ ವಿಶಾಲವಾದ ದಾಸ್ತಾನು ಕೊಠಡಿಯನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತ ಶೋರೂಂ ಇದಾಗಿದ್ದು, ಗ್ರಾಹಕರಿಗೆ ತಮ್ಮಿಷ್ಟದ ವಸ್ತುಗಳ ಆಯ್ಕೆಗೆ ವಿಫುಲ ಅವಕಾಶವನ್ನು ಕಲ್ಪಿಸಲಾಗಿದೆ.

ಉದ್ಘಾಟನಾ ಕೊಡುಗೆಗಳು:
ಸಂಸ್ಥೆಯು ಉದ್ಘಾಟನಾ‌ ಪ್ರಯುಕ್ತ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲು ಉದ್ದೇಶಿಸಿದೆ. ಪ್ರತೀ ಫ್ಯಾನ್ಸಿ ಲೈಟ್ ಗಳ ಮೇಲೆ ಶೇಕಡಾ 30 ರಿಂದ ಶೇಕಡಾ ೫೦ರ ವರೆಗೆ ರಿಯಾಯಿತಿ ದೊರೆಯಲಿದೆ. ಸಂಸ್ಥೆಯು ಕ್ರಾಂಮ್ಟನ್ ಕಂಪೆನಿಯ ಅಧಿಕೃತ ಡೀಲರ್ ಶಿಪ್ ಹೊಂದಿದ್ದು,
2599ರೂಪಾಯಿಯ ಕ್ರಾಂಮ್ಟನ್ ಕಂಪೆನಿಯ ಫ್ಯಾನ್ ಗಳು 2 ವರುಷ ವ್ಯಾರಂಟಿಯೊಂದಿಗೆ ಕೇವಲ 1499 ರೂಪಾಯಿಗೆ ಲಭ್ಯವಿದೆ. ಪಿಲಿಪ್ಸ್ ಕಂಪೆನಿಯ 9ವಾಲ್ಟ್ ಎಲ್.ಇ.ಡಿ. ಬಲ್ಬುಗಳು ಕೇವಲ 70 ರೂಪಾಯಿಗೆ ಲಭ್ಯವಿದೆ. 599 ಬೆಲೆಯ ಪಿಲಿಪ್ಸ್ ಕಂಪೆನಿಯ ಟ್ಯೂಬ್ ಲೈಟ್ ಗಳು ಕೇವಲ 170ರೂಪಾಯಿಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ನೌಫಲ್ ಬೆಟ್ಟಂಪಾಡಿಯವರು ತಿಳಿಸಿದ್ದಾರೆ.

ಉದ್ಘಾಟನಾ‌ ಕೊಡುಗೆಗಳು:
*ಫ್ಯಾನ್ಸಿ ಲೈಟ್ ಗಳ ಮೇಲೆ 30 ರಿಂದ 50% ರಿಯಾಯಿತಿ
*1499 ರೂಪಾಯಿಗೆ 2 ವರುಷ ವಾರಂಟಿಯೊಂದಿಗೆ ಫ್ಯಾನ್ ಗಳು
*9ವಾಲ್ಟ್ ಎಲ್.ಇ.ಡಿ. ಬಲ್ಬುಗಳು ಕೇವಲ 70 ರೂಪಾಯಿಗೆ
*ಪಿಲಿಪ್ಸ್ ಕಂಪೆನಿಯ ಟ್ಯೂಬ್ ಲೈಟ್ ಗಳಿಗೆ ಕೇವಲ 170ರೂಪಾಯಿಗೆ

LEAVE A REPLY

Please enter your comment!
Please enter your name here