ಸಮಿತಿ ಬದಲಾದರೂ ವೈದ್ಯಕೀಯ ಶಿಬಿರ ನಿರಂತರ- ಡಾ.ಸುರೇಶ್ ಪುತ್ತೂರಾಯ
ಪುತ್ತೂರು: ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪ್ರಸ್ತುತ ಅವಧಿಯು ಪೂರ್ಣಗೊಂಡರೂ ವೈದ್ಯಕೀಯ ಶಿಬಿರವು ನಿಲ್ಲುವುದಿಲ್ಲ. ಶಿಬಿರವು ನಿರಂತರವಾಗಿ ನಡೆಯಲಿದೆ. ಸಮಿತಿ ಬದಲಾದರೂ ಮುಂದೆ ಅವರಲ್ಲಿ ಮನವಿ ಮಾಡಿಕೊಂಡು ಶಿಬಿರವನ್ನು ಮುನ್ನಡೆಸಲಾಗುವುದು ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಹೇಳಿದರು.
ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಹಾಗೂ ಆರೋಗ್ಯ ರಕ್ಷಾ ಸಮಿತಿ ಹಾಗೂ ವಿವಿಧ ಸಂಘದ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಉಚಿತ ವೈದ್ಯಕೀಯ ಶಿಬಿರದ 20ನೇ ಶಿಬಿರದ ವಹಿಸಿ ಅವರು ಮಾತನಾಡಿದರು. ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾದ ಶಿಬಿರವು ದಾನಿಗಳು, ಮಹನೀಯರ ಸಹಕಾರ, ಪ್ರೋತ್ಸಾಹದಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಆರ್ಥಿಕ, ವಸ್ತು, ಔಷಧಿ ರೂಪದಲ್ಲಿ ಹಲವು ಮಂದಿ ಸಹಕರಿಸಿದ್ದಾರೆ. ವೈದ್ಯರುಗಳು ಬಹಳಷ್ಟು ಮಂದಿ ಸ್ವಯಂ ಪ್ರೇರಿತವಾಗಿ ಶಿಬಿರದಲ್ಲಿ ಸಹಕರಿಸಿದ್ದಾರೆ. ಇಲ್ಲಿ ನಿರಂತರವಾಗಿ ನಡೆಯುವ ಶಿಬಿರದಿಂದ ಪ್ರೇರಣೆ ಪಡೆದು ಇತರ ಹಲವು ಕಡೆಗಳಲ್ಲಿ ವೈದ್ಯಕೀಯ ಶಿಬಿರಗಳು ನಡೆಯುತ್ತಿದೆ ಎಂದರು.
ಶಿಬಿರದಿಂದ ಆರ್ಥಿಕ ಶಕ್ತಿ ವೃದ್ಧಿ:
ದೇವಸ್ಥಾನದಲ್ಲಿ ನಿರಂತರವಾಗಿ ನಡೆಯುವ ವೈದ್ಯಕೀಯ ಶಿಬಿರದಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಎರಿಕೆಯಾಗಿದೆ. ಇದರಿಂದ ದೇವಸ್ಥಾನದ ಆರ್ಥಿಕ ವೃದ್ಧಿಯಾಗಿ ದೇವಸ್ಥಾನದ ಅಭಿವೃದ್ಧಿ ಗೆ ವಿನಿಯೋಗಿಸಲಾಗಿದ್ದು ಹೊರಾಂಗಣಕ್ಕೆ ಛಾವಣಿ, ಜಾಗ ಖರೀದಿ ಮೊದಲಾದ ಅಭಿವೃದ್ಧಿಗಳನ್ನು ನಡೆಸಲಾಗಿದೆ. ಶಿಬಿರದ ವೆಚ್ಚ ಕಳೆದು ಉಳಿಕೆ ಹಣ ದೇವಸ್ಥಾನಕ್ಕೆ ಬಳಸಿಕೊಳ್ಳಲಾಗಿದೆ ಎಂದರು.
ಆರೋಗ್ಯ ರಕ್ಷ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕಲ್ಪನೆಗಳು ಯಶಸ್ವಿಯಾಗಿ ನಡೆದು ಮಾದರಿ ದೇವಸ್ಥಾನವಾಗಿ ಮೂಡಿ ಬಂದಿದೆ. ಪುತ್ತೂರಾಯ ನೇತೃತ್ವದಲ್ಲಿ ಪರಿಣಮಾಕಾರಿಯಾಗಿ ಜಾರಿಗೊಳಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ ಎಂದರು. ಪಂಚಮಿ ವೆಜಿಟೇಬಲ್ಸ್ ನ ಮ್ಹಾಲಕ ಮಹಾಬಲ ನಾಯ್ಕ್ ಶಿಬಿರವನ್ನು ಉದ್ಘಾಟಿಸಿದರು.
ಇ.ಎನ್.ಟಿ ತಜ್ಞ ಡಾ.ರಾಮಮೋಹನ್, ಆಯುರ್ವೇದ ತಜ್ಞೆ ಡಾ.ಗ್ರೀಷ್ಮಾ, ನವಚೇತನಾ ಯುವಕ ಮಂಡಲದ ಕಾರ್ಯದರ್ಶಿ ಪ್ರವೀಣ್ ಉದಯಗಿರಿ, ಮಾಜಿ ಅಧ್ಯಕ್ಷ ವಿಜಯ ಬಿ.ಎಸ್ ಐಕ್ಯ ಕಲಾ ಸೇವಾ ಟ್ರಸ್ಟ್ ನ ಚೇತನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಸದಸ್ಯೆ ಶಶಿಕಲಾ ನಿರಂಜನ್ ಪ್ರಾರ್ಥಿಸಿದರು. ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉದಯ ಕುಮಾರ್ ರೈ ಎಸ್ ಸಂಪ್ಯ ಕಾರ್ಯಕ್ರಮ ನಿರೂಪಿಸಿ, ಹರಿಣಿ ಪುತ್ತೂರಾಯ ವಂದಿಸಿದರು.
ವೈದ್ಯಕೀಯ ತಜ್ಞ ಡಾ.ಸುರೇಶ್ ಪುತ್ತೂರಾಯ, ಕೀಲು ಮತ್ತು ಎಲುಬು ತಜ್ಞ ಡಾ.ಸಚಿನ್ ಶಂಕರ್ ಹಾರಕರೆ, ಚರ್ಮ ರೋಗ ತಜ್ಞ ಡಾ.ಸಚಿನ್ ಶೆಟ್ಟಿ, ಇ.ಎನ್.ಟಿ ತಜ್ಞರಾದ ಡಾ.ಅರ್ಚನ ಹಾಗೂ ಡಾ.ರಾಮ ಮೋಹನ್, ಶ್ವಾಸಕೋಶ ತಜ್ಞ ಡಾ.ಪ್ರೀತಿರಾಜ್ ಬಲ್ಲಾಳ್, ಆಯುರ್ವೇದ ತಜ್ಞರಾದ ಡಾ.ವೇಣುಗೋಪಾಲ, ಡಾ.ಸಾಯಿಪ್ರಕಾಶ್ ಹಾಗೂ ಡಾ.ಗ್ರೀಪ್ಮಾ ಆಗಮಿಸಿ ತಪಾಸಣೆ ನಡೆಸಿಕೊಟ್ಟರು.
ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆ, ಎಲುಬು ಮತ್ತು ಕೀಲು ತಪಾಸಣೆ, ಶ್ವಾಶಕೋಶ ಪರೀಕ್ಷೆ, ಇ.ಎನ್.ಟಿ, ಚರ್ಮ ರೋಗ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ, ಔಷಧಿಗಳ ವಿತರಿಸಲಾಯಿತು. ಉಚಿತ ಚಿಕಿತ್ಸೆ, ತಪಾಸಣೆ, ಔಷಧಿಯ ಜೊತೆಗೆ ಊಟ, ಉಪಾಹಾರಗಳನ್ನು ಒದಗಿಸಲಾಗಿತ್ತು. ನೂರಾರು ಮಂದಿ ಆಗಮಿಸಿ, ಶಿಬಿರದ ಪ್ರಯೋಜನ ಪಡೆದುಕೊಂಡರು.