ಉಪ್ಪಿನಂಗಡಿ:ಮರ ಬಿದ್ದು ಮನೆಗೆ ಹಾನಿ

0

ಉಪ್ಪಿನಂಗಡಿ: ಮನೆಯೊಂದಕ್ಕೆ ಮರ ಬಿದ್ದು ಮನೆಗೆ ಸ್ವಲ್ಪ ಮಟ್ಟಿನ ಹಾನಿಯಾಗಿ, ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ಪುಳಿತ್ತಡಿಯ ಕೋಡಿಯಲ್ಲಿ ನ.6ರ ನಸುಕಿನ ಜಾವ ನಡೆದಿದೆ.


ಇಲ್ಲಿನ ಶಿವಪ್ಪ ಗೌಡ ಎಂಬವರ ಮನೆಗೆ ಮರ ಬಿದ್ದಿದ್ದು, ಮನೆಯ ಹಿಂಭಾಗದ ಸಿಮೆಂಟ್ ಶೀಟ್‌ನ ಛಾವಣಿಗೆ ಹಾನಿಯಾಗಿದೆ. ಮರವು ವಿದ್ಯುತ್ ತಂತಿಗಳ ಮೇಲೆಯೂ ಬಿದ್ದಿದ್ದು, ತಂತಿಗಳು ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದವು. ಇದನ್ನು ಕಂಡ ಸ್ಥಳೀಯರಾದ ಸ್ನೇಕ್ ಝಕಾರಿಯಾ ಅವರು ಮೆಸ್ಕಾಂನವರಿಗೆ ಕರೆ ಮಾಡಿ ಮಾಹಿತಿ ನೀಡಿ ವಿದ್ಯುತ್ ಸ್ಥಗಿತಗೊಳಿಸಿದರು.
ಇವರ ಮನೆ ಸಮೀಪ ಇರುವ ಜಾಗದಲ್ಲಿ ಬೃಹತ್ ಗಾತ್ರದ ಹಲವು ಅಪಾಯಕಾರಿ ಮರಗಳಿದ್ದು, ಮರ ಬೀಳುವುದು ಶಿವಪ್ಪನವರ ಮನೆಗೆ ಇದು ಮೂರನೇ ಬಾರಿಯಾಗಿದೆ. ಈ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಗ್ರಾ.ಪಂ.ಗೂ ಮನವಿ ನೀಡಿದ್ದೇವೆ. ಆದರೆ ಇದಕ್ಕೆ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಸ್ನೇಕ್ ಝಕಾರಿಯಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here