ದರ್ಬೆ ನಯಾ ಚಪ್ಪಲ್ ಬಜಾರ್ ನಲ್ಲಿ ಚಪ್ಪಲ್ ಖರೀದಿ ಮೇಲೆ ತೂಫಾನ್ ಆಫರ್, ಸುನಾಮಿ ಸೇಲ್ ಉದ್ಘಾಟನೆ

0

-ಪಾದರಕ್ಷೆಗಳ ಆಫರ್ ಕೆಲವೇ ದಿನಗಳು ಮಾತ್ರ
-ಟಾಯ್ಸ್, ಕೊಡೆ ಹಾಗೂ ಇನ್ನಿತರ ವಸ್ತುಗಳು ಅರ್ಧ ಬೆಲೆಗೆ ಲಭ್ಯ
-ಉದ್ಯಮ ಕ್ಷೇತ್ರದಲ್ಲಿ 28 ವರುಷಗಳ ಸುದೀರ್ಘ ಅನುಭವ
-ಗ್ರಾಹಕರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ದರ್ಬೆ ಬುಶ್ರಾ ಟವರ್ ನಲ್ಲಿ ಕಾರ್ಯಾಚರಿಸುತ್ತಿರುವ ನಯಾ ಚಪ್ಪಲ್ ಬಜಾರ್ ನಲ್ಲಿ ಗ್ರಾಹಕರಿಗೆ ಒಂದು ಜೊತೆ ಚಪ್ಪಲ್ ಖರೀದಿಯೊಂದಿಗೆ ನಿಮ್ಮ ಹಳೆಯ ಚಪ್ಪಲ್ ಕೊಟ್ಟು ಇನ್ನೊಂದು ಜೊತೆ ಚಪ್ಪಲ್ ಉಚಿತವಾಗಿ ಪಡೆಯುವ ತೂಫಾನ್ ಆಫರ್, ಸುನಾಮಿ ಸೇಲ್ ಪರಿಚಯಿಸಿದ್ದು ಇದರ ಉದ್ಘಾಟನೆಯು ನ.6 ರಂದು ನೆರವೇರಿತು.


ವ್ಯವಹಾರದ ಜೊತೆಗೆ ಸಾಮಾಜಿಕ ಕಳಕಳಿ ರಫೀಕ್ ರವರಲ್ಲಿದೆ-ಜೈರಾಜ್ ಭಂಡಾರಿ:
ಆಫರ್ ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ ನೆರವೇರಿಸಿ ಮಾತನಾಡಿ, ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಎಂ.ಜಿ ರಫೀಕ್ ರವರು ಕೇವಲ ಕ್ಲಬ್ ನಲ್ಲಿ ಮಾತ್ರವಲ್ಲ, ಸಾಮಾಜಿಕ ಜೀವನದಲ್ಲೂ ಪರಸ್ಪರ ಬಾಂಧವ್ಯ ಹೆಚ್ಚಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿತ್ವ ಅವರದು. ವ್ಯಾಪಾರದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡಿರುವ ರಫೀಕ್ ರವರ ಯೋಜನೆ ಫಲಪ್ರದವಾಗಲಿ ಎಂದು ಹೇಳಿ ಶುಭ ಹಾರೈಸಿದರು.

ರಫೀಕ್ ರವರ ಫ್ಯಾಮಿಲಿ ಒಗ್ಗಟ್ಟಾಗಿ ಉದ್ಯಮದಲ್ಲಿ ತೊಡಗಿಸಿಕೊಂಡಿದೆ-ವಾಮನ್ ಪೈ:
ಲ್ಯಾನ್ಸರ್ ಶೂ ಅನ್ನು ಖರೀದಿಸುವ ಮೂಲಕ ಪ್ರಥಮ ಖರೀದಿಯಾದ ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಹಾಗೂ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಮಾತನಾಡಿ, ರಫೀಕ್ ರವರ ಮತ್ತು ನನ್ನ ಒಡನಾಟ ಬಹಳ ವರ್ಷದ್ದು. ಉದ್ಯಮ ಕ್ಷೇತ್ರದಲ್ಲಿ ರಫೀಕ್ ರವರು ಜಂಟಲ್ ಮ್ಯಾನ್ ಎನಿಸಿಕೊಂಡಿದ್ದಾರೆ. ರಫೀಕ್ ರವರ ಫ್ಯಾಮಿಲಿ ಒಗ್ಗಟ್ಟಾಗಿ ಉದ್ಯಮದಲ್ಲಿ ತೊಡಗಿಸಿಕೊಂಡು ಇಂದು ಉದ್ಯಮದಲ್ಲಿ ಯಶಸ್ವಿ ಎನಿಸಿದ್ದಾರೆ ಎಂದರು.

ಒಬ್ಬರನೊಬ್ಬರನ್ನು ಬೆಸೆಯುವ ಕಾರ್ಯದಲ್ಲಿ ರಫೀಕ್ ರವರು ಯಶಸ್ವಿ-ಪ್ರೊ|ಝೇವಿಯರ್ ಡಿ’ಸೋಜ:
ರೋಟರಿ ಆರ್.ಐ ಡಿಸ್ಟ್ರಿಕ್ಟ್ 3181 ಇದರ ವಲಯ ಸೇನಾನಿ ಪ್ರೊ| ಝೇವಿಯರ್ ಡಿ’ಸೋಜ ಮಾತನಾಡಿ, ರಫೀಕ್ ಎಂ.ಜಿರವರು ಓರ್ವ ವಿಭಿನ್ನಶೈಲಿಯ ವ್ಯಕ್ತಿ ಎನ್ನುವುದಕ್ಕೆ ಇಂದಿಲ್ಲಿ ಎಲ್ಲಾ ಸಮುದಾಯದವರನ್ನು ಕರೆಸಿರುವುದು ಸಾಕ್ಷಿಯಾಗಿದೆ. ವ್ಯವಹಾರದಲ್ಲಿ ಚತುರತೆಯನ್ನು ಹೊಂದಿರುವ ರಫೀಕ್ ರವರು ಎಲ್ಲರನ್ನು ಸೇರಿಸಿಕೊಂಡು ಒಬ್ಬರನೊಬ್ಬರನ್ನು ಸಹೋದರರಂತೆ ಬೆಸೆಯುವ ಕಾರ್ಯದಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದರು.

ಉದ್ಯಮವು ಉತ್ತಮ ಯೋಚನೆಗಳೊಂದಿಗೆ ಬೆಳೆಯಲಿ-ಡಾ.ನಝೀರ್ ಅಹಮದ್:
ಕಲ್ಲಾರೆ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರಿನ ವೈದ್ಯಕೀಯ ಹಾಗೂ ಮಧುಮೇಹ ತಜ್ಞ ಡಾ.ನಝೀರ್ ಅಹಮ್ಮದ್ ಮಾತನಾಡಿ, ನಮ್ಮ ಆತ್ಮೀಯರಾದ ರಫೀಕ್ ರವರು ಡ್ರೆಸ್ ಕೋಡ್ ನೋಡಿದಾಗ ತಿಳಿಯುತ್ತೆ ಅವರ ವ್ಯಾಪಾರ ಕೂಡ ಅಷ್ಟೇ ಪರಿಶುದ್ಧ ಎಂದು. ಅವರಲ್ಲಿ ಒಳ್ಳೆಯ ಯೋಚನೆಗಳಿವೆ, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಯೋಚನೆಗಳೊಂದಿಗೆ ಉದ್ಯಮ ಕ್ಷೇತ್ರ ಬೆಳೆಯಲಿ ಎಂದರು.

ರಫೀಕ್ ರವರ ಕಾರ್ಯಕ್ರಮದಲ್ಲಿ ಭಿನ್ನತೆ, ಹೊಸತನವಿರುತ್ತದೆ-ಡಾ.ಅಶೋಕ್ ಪಡಿವಾಳ್:
ಬೊಳ್ವಾರು ಮಹಾವೀರ ಮೆಡಿಕಲ್ ಸೆಂಟರ್ ನ ಡಾ.ಅಶೋಕ್ ಪಡಿವಾಳ್ ಮಾತನಾಡಿ, ರಫೀಕ್ ಎಂ.ಜಿರವರು ಏನು ಮಾಡಿದರೂ ಅದರಲ್ಲಿ ಭಿನ್ನತೆ, ಹೊಸತನವಿದ್ದು ಅವರೋರ್ವ ಡಿಫರೆಂಟ್ ಎನಿಸಿಕೊಂಡಿದ್ದಾರೆ. ರೋಟರಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ದಾರಿದೀಪ, ಶಾಲೆಗಳ ಮಕ್ಕಳಿಗೆ ಪಾದರಕ್ಷೆಗಳನ್ನು ನೀಡುವ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿತ್ತು ಎಂದರು.

ಆಕರ್ಷಕ ಧ್ಯೇಯವಾಕ್ಯವು ಗ್ರಾಹಕರನ್ನು ಆಕರ್ಷಿಸುತ್ತಿದೆ-ಎ.ಜೆ ರೈ:
ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಎ.ಜೆ ರೈ ಮಾತನಾಡಿ, ಒಂದು ಜೊತೆ ಚಪ್ಪಲ್ ಖರೀದಿಯೊಂದಿಗೆ ನಿಮ್ಮ ಹಳೆಯ ಚಪ್ಪಲ್ ಕೊಟ್ಟು ಇನ್ನೊಂದು ಚಪ್ಪಲ್ ಉಚಿತವಾಗಿ ಪಡೆಯುವ ತೂಫಾನ್ ಆಫರ್, ಸುನಾಮಿ ಸೇಲ್ ಎಂಬ ಆಕರ್ಷಕ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಗ್ರಾಹಕರನ್ನು ಆಕರ್ಷಿಸುವ ಈ ಉದ್ಯಮವು ಯಶಸ್ವಿಯಾಗಲಿ ಎಂದರು.

ರಫೀಕ್ ರವರಿಗೆ ಉದ್ಯಮದಲ್ಲಿ ಪ್ರ್ಯಾಕ್ಟಿಕಲ್ ಜ್ಞಾನವಿದೆ-ಪ್ರೊ|ದತ್ತಾತ್ರೇಯ ರಾವ್:
ರೋಟರಿ ಕ್ಲಬ್ ಪುತ್ತೂರು ಸದಸ್ಯ ಪ್ರೊ.ದತ್ತಾತ್ರೇಯ ರಾವ್ ಮಾತನಾಡಿ, ಸುನಾಮಿ ಅಂದರೆ ದುರಂತ. ಆದರೆ ಇಲ್ಲಿ ಸುನಾಮಿ ದುರಂತ ಅಲ್ಲ. ರಫೀಕ್ ರವರ ಉದ್ಯಮವು ದುರಂತದ ಬದಲಿಗೆ ಗ್ರಾಹಕರಿಗೆ ಶುಭವನ್ನು ನೀಡುತ್ತಿದೆ. ನಿಜಕ್ಕೂ ರಫೀಕ್ ರವರಿಗೆ ಉದ್ಯಮದಲ್ಲಿ ಪ್ರ್ಯಾಕ್ಟಿಕಲ್ ಜ್ಞಾನವಿದೆ ಎಂದರು.

ಪುತ್ತೂರು ಬುಶ್ರಾ ಟವರ್ ಮಾಲಕ ಬದ್ರುದ್ದೀನ್, ರೋಟರಿ ಕ್ಲಬ್ ಪುತ್ತೂರು ಸದಸ್ಯ ಅಬ್ದುಲ್ ಖಾದರ್, ಹನೀಫ್ ಕೆ.ಪಿ, ನಯಾ ಚಪ್ಪಲ್ ಬಜಾರ್ ನ ಪಾಲುದಾರ ಅಬ್ದುಲ್ ರಹಿಮಾನ್ ಸಹಿತ ಹಲವರು ಉಪಸ್ಥಿತರಿದ್ದರು. ನಯಾ ಚಪ್ಪಲ್ ಬಜಾರ್ ನ ಪಾಲುದಾರ ರಫೀಕ್ ಎಂ.ಜಿ ಸ್ವಾಗತಿಸಿ, ರಫೀಕ್ ಎಂ.ಜಿರವರ ಹಿರಿಯ ಸಹೋದರ ರಝಾಕ್ ಎಂ.ಜಿ ವಂದಿಸಿದರು. ಹಿರಿಯ ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿರವರು ಕಾರ್ಯಕ್ರಮ ನಿರೂಪಿಸಿದರು.

ಗ್ರಾಹಕರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ…
ಕಳೆದ 28 ವರ್ಷಗಳಿಂದ ಉದ್ಯಮವನ್ನು ಆರಂಭಿಸಿ, ಮುಂದುವರೆಸಿಕೊಂಡು ಬಂದಿದ್ದೇವೆ. ಈ ಬಾರಿ ಒಂದು ಜೊತೆ ಚಪ್ಪಲ್ ಖರೀದಿಯೊಂದಿಗೆ ನಿಮ್ಮ ಹಳೆಯ ಚಪ್ಪಲ್ ಕೊಟ್ಟು ಇನ್ನೊಂದು ಚಪ್ಪಲ್ ಉಚಿತವಾಗಿ ಪಡೆಯುವ ತೂಫಾನ್ ಆಫರ್, ಸುನಾಮಿ ಸೇಲ್ ಅನ್ನು ಗ್ರಾಹಕರಿಗೆ ಪರಿಚಯಿಸುತ್ತಿದ್ದೇವೆ. ಇದರ ಜೊತೆಗೆ ನಮ್ಮಲ್ಲಿರುವ ಟಾಯ್ಸ್, ಕೊಡೆಗಳು ಹಾಗೂ ಇನ್ನಿತರ ವಸ್ತುಗಳನ್ನು ನೈಜ ಬೆಲೆಯ ಅರ್ಧ ಬೆಲೆಗೆ ಗ್ರಾಹಕರಿಗೆ ನೀಡುತ್ತಿದ್ದೇವೆ. ಗ್ರಾಹಕರು ಇಲ್ಲಿಯವರೆಗೆ ನಮ್ಮನ್ನು ಹರಸಿ ಪ್ರೋತ್ಸಾಹಿಸಿದ್ದಾರೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು.
-ರಫೀಕ್ ಎಂ.ಜಿ, ನಯಾ ಚಪ್ಪಲ್ ಬಜಾರ್

LEAVE A REPLY

Please enter your comment!
Please enter your name here