ಸುದಾನ ಪ್ರೌಢ ಶಾಲೆಯ ಜಸಿತ್ ಸಿ. ಎಸ್ ಮೈಸೂರು ವಿಭಾಗೀಯ ಐಟಿ ಕ್ವಿಜ್ ಸ್ಪರ್ಧೆಗೆ ಆಯ್ಕೆ

0

ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಇತ್ತೀಚೆಗೆ ಮಂಗಳೂರಿನ ಕಪಿತಾನಿಯೋ ಪ್ರೌಢಶಾಲೆಯಲ್ಲಿ ನಡೆಸಿದ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್ ಸ್ಪರ್ಧೆಯಲ್ಲಿ ಸುದಾನ ಪ್ರೌಢ ಶಾಲೆಯ ಜಸಿತ್ ಸಿ. ಎಸ್ (9ನೇ) [ನೆಲಪ್ಪಲು ಪಡ್ನರೂ ನಿವಾಸಿ ಶರತ್ ಕುಮಾರ್ ಡಿ. ಮತ್ತು ದಮಯಂತಿ ಎನ್‌ ಪುತ್ರ], ವಿಜೇತರಾಗಿದ್ದು ಮುಂದೆ ನಡೆಯಲಿರುವ ಮೈಸೂರು ವಿಭಾಗೀಯ ಮಟ್ಟದ ಕ್ವಿಜ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಸತತ ಹದಿಮೂರನೆ ಬಾರಿಗೆ ಸುದಾನ ವಸತಿಯುತ ಶಾಲೆಯು ಈ ಸಾಧನೆಯನ್ನು ಮಾಡಿದ್ದು. ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್ ಮತ್ತು ಶಾಲಾ ಮುಖ್ಯ ಶಿಕ್ಷಕಿ ಶೋಭಾನಾಗರಾಜ್‌ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here