ಪುತ್ತೂರು: ಮಾದಕ ವಸ್ತುಗಳು ನಮ್ಮ ಜೀವನಕ್ಕೆ ಹಾನಿಕಾರಕ. ಈ ಕುರಿತು ಕಟ್ಟಡ ಕಾರ್ಮಿಕರು ಎಚ್ಚರಿಕೆ ವಹಿಸಬೇಕೆಂದು ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಆಂಜನೇಯ ರೆಡ್ಡಿ ಅವರು ಹೇಳಿದರು.
ಇಲ್ಲಿನ ಅನುರಾಗ ವಠಾರದಲ್ಲಿ ನ.5ರಂದು ನಡೆದ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಮಾಸಿಕ ಸಭೆಯಲ್ಲಿ ಅವರು ಮಾದಕ ವಸ್ತುನಿಂದಾಗುವ ದುಷ್ಪರಿಣಾಮಗಳ ಕುರಿತು ಅವರು ಮಾಹಿತಿ ನೀಡಿದರು. ಕಟ್ಟಡ ಕಾರ್ಮಿಕರ ಕೀಳರಿಮೆ ಬಿಟ್ಟು ತಮ್ಮ ಕೆಲಸದಲ್ಲಿ ಸಾಧಕರಾಗಿ ದೇಶವನ್ನು ಕಟ್ಟಿ.ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ.ಮಾದಕ ವಸ್ತುಗಳಾದ ಡ್ರಗ್ಸ್, ಗಾಂಜಾ, ಅಮಲುಪದಾರ್ಥ, ಕೆಲವೊಂದು ಮತ್ತು ಬರುವ ಮಾತ್ರೆಗಳನ್ನು ಸೇವಿಸದೆ ದುಷ್ಚಟಮುಕ್ತರಾಗಿ ಎಂದರು. ಸಂಘದ ಗೌರವಾಧ್ಯಕ್ಷ ಬಿ.ಪುರಂದರ ಭಟ್ ಅವರು ಮಾತನಾಡಿ ದೇಶಕಟ್ಟುವ ಕಾರ್ಮಿಕರು ದುಷ್ಚಟಮುಕ್ತರಾದೆ ದೇಶ ಅಭಿವೃದ್ದಿಯಾಗುತ್ತದೆ ಎಂದರು. ಸಂಘದ ಜಿಲ್ಲಾಧ್ಯಕ್ಷ ಕೆ.ಜಯರಾಮ ಕುಲಾಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಮುಕ್ವೆ ವಂದಿಸಿದರು. ಸಂಘದ ಗೌರವ ಸಲಹೆಗಾರ ಶೇಷಪ್ಪ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.