ಕಟೀಲ್ ಫ್ಲೆಕ್ಸ್ ಹಾಕಿಯೇ ಜನರನ್ನು ಮಂಗ ಮಾಡಿದ್ದು: ಎಂ ಎಸ್ ಮಹಮ್ಮದ್

0

ಪುತ್ತೂರು: ಸಂಸದ ನಳಿನ್‌ಕುಮಾರ್ ಕಟೀಲ್ ವಿಟ್ಲ ಮುಡ್ನೂರು ಗ್ರಾಮದ ಅಭಿವೃದ್ದಿಗೆ 10 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ಗ್ರಾಮದ ಮೂಲೆ ಮೂಲೆಯಲ್ಲಿ ಕಳೆದ ಚುನಾವಣೆಗೆ ಮುನ್ನ ಫ್ಲೆಕ್ಸ್ ಹಾಕಿದ್ದೇ ಹಾಕಿದ್ದು ಜನರು ಬಿಜೆಪಿಯವರ ಮಾತನ್ನು ಸತ್ಯವೆಂದೇ ನಂಬಿದ್ದರು ಆದರೆ ಇದುವರೆಗೂ ಆ ಹತ್ತು ಕೋಟಿ ಬಂದೇ ಇಲ್ಲ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಎಂ ಎಸ್ ಮಹಮ್ಮದ್ ಆರೋಪಿಸಿದ್ದಾರೆ.

ವಿಟ್ಲ ಮುಡ್ನೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸುಳ್ಳು ಹೇಳಿ ಜನರನ್ನು ಮಂಗ ಮಾಡುವುದರಲ್ಲಿ ಬಿಜೆಪಿಯವರೇ ನಂಬರ್ ಒನ್ ಆಗಿದ್ದಾರೆ. ರಸ್ತೆ ಅಭಿವೃದ್ದಿಗೆ ಬಿಡುಗಡೆಯಾದ ಹತ್ತು ಕೋಟಿ ಅನುದಾನ ಎಲ್ಲಿ ಹೋಯಿತು ಎಂಬುದನ್ನು ಮತ ಹಾಕಿದ ಮತದಾರರಿಗೆ ಕಟೀಲ್‌ರವರು ಉತ್ತರ ನೀಡಬೇಕು. ಸುಳ್ಳು ಹೇಳುತ್ತಲೇ ಕಾಲ ಕಳೆಯುವ ಸಂಸದರಿಗೆ ಕ್ಷೇತ್ರದ ಅಭಿವೃದ್ದಿ ಬೇಕಾಗಿಲ್ಲ. ಕೋಮು ರಾಜಕೀಯವನ್ನು ಮಾಡಿ ಜನರ ತಲೆಯಲ್ಲಿ ಕೋಮು ವಿಷ ಬೀಜವನ್ನು ಬಿತ್ತುವ ಮೂಲಕ ಅಧಿಕಾರಕ್ಕೇರುವ ಬಿಜೆಪಿ ಬಡವರ ಬಗ್ಗೆ ಕಾಳಜಿಯಿಲ್ಲದವರಾಗಿದ್ದಾರೆ ಎಂದು ಹೇಳಿದರು. ರಾಜ್ಯದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಜನ ನೆಮ್ಮದಿಯಿಂದ ಇದ್ದಾರೆ. ಕರೆಂಟ್ ಫ್ರೀ, ಗೃಹಲಕ್ಷ್ಮೀ, ಉಚಿತ ಬಸ್ , ಅನ್ನಭಾಗ್ಯ ಇದೆಲ್ಲವೂ ಜನರನ್ನು ಸ್ವಾವಲಂಬಿಗಳನ್ನಾಗಿಸಿದೆ ಎಂದು ಮಹಮ್ಮದ್ ಹೇಳಿದರು. ಬಿಜೆಪಿಯಲ್ಲಿರುವ ನಾಯಕರು ಕೇಂದ್ರದಿಂದ ಹಿಡಿದು ಗ್ರಾಮದ ತನಕ ಎಲ್ಲರೂ ಬುರುಡೆದಾಸರೇ ಆಗಿದ್ದಾರೆ ಎಂದು ಹೇಳಿದರು.

LEAVE A REPLY

Please enter your comment!
Please enter your name here