ಕಕ್ಕೂರು ವಲಯ ಮಟ್ಟದ ಪ್ರತಿಭಾ ಕಾರಂಜಿ- ಪ್ರಿಯದರ್ಶಿನಿಗೆ ಒಲಿದ ಸಮಗ್ರ ಪ್ರಶಸ್ತಿ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಬೆಟ್ಟಂಪಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕೂರು ಇದರ ಆಶ್ರಯದಲ್ಲಿ 2023 24ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸೃಜನ ದರ್ಶನ ಮಕ್ಕಳ ಸಾಂಸ್ಕೃತಿಕ ಹಬ್ಬದಲ್ಲಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾ ಗಿರಿ ಬೆಟ್ಟಂಪಾಡಿ ಹಲವು ಬಹುಮಾನಗಳೊಂದಿಗೆ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ಕಿರಿಯರ ವಿಭಾಗದ ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ಧರಿತ್ರಿ ಸಿ.ಎಚ್ ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣ ಹಾಗೂ ಕಥೆ ಹೇಳುವ ಸ್ಪರ್ಧೆಯಲ್ಲಿ ಇಹಾನಿ ಎಸ್. ಶೆಟ್ಟಿ ಪ್ರಥಮ, ಕುಮಾರಿ ಸಂಹಿತ ಲಘು ಸಂಗೀತದಲ್ಲಿ ದ್ವಿತೀಯ ಹಾಗೂ ಭಕ್ತಿ ಗೀತೆಯಲ್ಲಿ ಪ್ರಥಮ , ಕನ್ನಡ ಕಂಠಪಾಠದಲ್ಲಿ ಪ್ರಣತಿ ಪ್ರಥಮ , ಮಹಮ್ಮದ್ ಅಯಾನ್ ಅರೇಬಿಕ್ ಧಾರ್ಮಿಕ ಪಟ್ಟಣದಲ್ಲಿ ದ್ವಿತೀಯ , ಆಶುಭಾಷಣದಲ್ಲಿ ಅರ್ಣವಿ ಘಾಟೆ ಪ್ರಥಮ ,ಛದ್ಮವೇಷದಲ್ಲಿ ಐಶಾನಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಹಿರಿಯರ ವಿಭಾಗದ ಮಿಮಿಕ್ರಿ ಸ್ಪರ್ಧೆಯಲ್ಲಿ ಅಮನ್ ರೈ ಪ್ರಥಮ , ಕೃತಿ. ಕೆ .ಎಸ್ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ , ಅದ್ವಿತಿ ಇಂಗ್ಲಿಷ್ ಕಂಠಪಾಠದಲ್ಲಿ ದ್ವಿತೀಯ, ಸಂಸ್ಕೃತ ಧಾರ್ಮಿಕ ಪಠಣ ಹಾಗೂ ಕಥೆ ಹೇಳುವ ಸ್ಪರ್ಧೆಯಲ್ಲಿ ಅಭಿನವರಾಜ್. ಎನ್ ದ್ವಿತೀಯ , ಚಿತ್ರಕಲೆಯಲ್ಲಿ ನಿಖಿಲೇಶ್ ಪಿ. ಪ್ರಥಮ , ಭಕ್ತಿ ಗೀತೆ ಸ್ಪರ್ಧೆಯಲ್ಲಿ ಅದ್ವೈತ ತಿರುಮಲೇಶ ಪ್ರಥಮ ಹಾಗೂ ಲಘು ಸಂಗೀತದಲ್ಲಿ ದ್ವಿತೀಯ , ಆಶುಭಾಷಣ ಸ್ಪರ್ಧೆಯಲ್ಲಿ ವೈಷ್ಣವಿ ಪ್ರಥಮ ಪಡೆದು ಹಿರಿಯರ ವಿಭಾಗದ ಸಮಗ್ರ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಸುಮಾರು 12 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ. ವಿಜೇತ ವಿದ್ಯಾರ್ಥಿಗಳನ್ನು ಮುಖ್ಯಗುರು ರಾಜೇಶ್ ಎನ್, ಶಿಕ್ಷಕ ವೃಂದದವರು ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿರುತ್ತಾರೆ.

LEAVE A REPLY

Please enter your comment!
Please enter your name here