ಸವಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರಶ್ಮಿಗೆ 16 ಪ್ರಶಸ್ತಿಗಳು

0

ಪುತ್ತೂರು: ಸವಣೂರಿನ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸವಣೂರಿನ ವಿದ್ಯಾರಶ್ಮಿಗೆ ಒಟ್ಟು 16 ಪ್ರಶಸ್ತಿಗಳ ಗರಿ ದೊರಕಿದೆ.

ಕಿರಿಯರ ವಿಭಾಗದಲ್ಲಿ 4ನೇ ತರಗತಿಯ ಅನ್ವಿತ್ ಬಿ. ಕೆ. ಕ್ಲೇ ಮಾಡೆಲಿಂಗ್ ನಲ್ಲಿ ಪ್ರಥಮ, 3ನೇ ತರಗತಿಯ ಮುಹಮ್ಮದ್ ಜಾಸಿಂ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ, 4ನೇ ತರಗತಿಯ ಪ್ರಣವ್ ಕೆ. ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ, 4ನೇ ತರಗತಿಯ ಫಾತಿಮತ್ ತನಿಶಾ ಅರೇಬಿಕ್ ಪಠಣದಲ್ಲಿ ಪ್ರಥಮ, 1ನೇ ತರಗತಿಯ ತನಯ್ ಡಿ. ಕೆ. ಛದ್ಮವೇಷದಲ್ಲಿ ಪ್ರಥಮ, 4ನೇ ತರಗತಿಯ ನಿನಾದ್ ವೈ. ಆರ್. ಕನ್ನಡ ಕಂಠ ಪಾಠದಲ್ಲಿ ದ್ವಿತೀಯ, 4ನೇ ತರಗತಿಯ ಶ್ವೇಪಾಲಿ ಜೈನ್ ಬಿ. ಕಥೆ ಹೇಳುವುದರಲ್ಲಿ ದ್ವಿತೀಯ ಸ್ಥಾನ ಪಡೆದರು.

ಹಿರಿಯರ ವಿಭಾಗದಲ್ಲಿ 7ನೇ ತರಗತಿಯ ಆಯಿಷತ್ ಜಸ್ನಾ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ, 7ನೇ ತರಗತಿಯ ಆದಂ ಶಾಝಿನ್ ಹಿಂದಿ ಕಂಠಪಾಠದಲ್ಲಿ ಪ್ರಥಮ, 7ನೇ ತರಗತಿಯ ಶಂತನು ಕೃಷ್ಣ ಸಂಸ್ಕೃತ ಕಂಠಪಾಠದಲ್ಲಿ ಪ್ರಥಮ, 6ನೇ ತರಗತಿಯ ಹರ್ಷ ಎ. ಛದ್ಮವೇಷದಲ್ಲಿ ಪ್ರಥಮ, 7ನೇ ತರಗತಿಯ ಜಶ್ವಿತ್ ಜೆ. ಆಶು ಭಾಷಣದಲ್ಲಿ ಪ್ರಥಮ,
7ನೇ ತರಗತಿಯ ಮುಹಮ್ಮದ್ ಮುಫೀಝ್ ಕನ್ನಡ ಕಂಠಪಾಠ ಮತ್ತು ಅರೇಬಿಕ್ ಪಠಣದಲ್ಲಿ ದ್ವಿತೀಯ, 6ನೇ ತರಗತಿಯ ಕೃಪಾಲಿ ಎಸ್. ಡಿ. ಅಭಿನಯ ಗೀತೆಯಲ್ಲಿ ದ್ವಿತೀಯ, 7ನೇ ತರಗತಿಯ ಜಶ್ವಿತ್ ಜೆ. ಕ್ಲೇ ಮಾಡೆಲಿಂಗ್ ನಲ್ಲಿ ತೃತೀಯ ಸ್ಥಾನಗಳನ್ನು ಗಳಿಸಿಕೊಂಡರು. ಈ ಮೂಲಕ 10 ಪ್ರಥಮ, 5 ದ್ವಿತೀಯ ಮತ್ತು ಒಂದು ತೃತೀಯ ಸ್ಥಾನಗಳೊಂದಿಗೆ ಒಟ್ಟು 16 ಸ್ಥಾನಗಳನ್ನು ಪಡೆದುಕೊಂಡಿದೆ ಎಂದು‌ ಸಂಸ್ಥೆಯ ಸಂಚಾಲಕ ಸವಣೂರು ಕೆ. ಸೀತಾರಾಮ ರೈ, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮತ್ತು ಪ್ರಾಂಶುಪಾಲ ಸೀತಾರಾಮ ಕೇವಳರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here