ಮಂಗಳೂರು: ಸುಳ್ಯ ಚಂದನ ಸಾಹಿತ್ಯ ವೇದಿಕೆ ವತಿಯಿಂದ ನ.9ರಂದು ಸುಳ್ಯದ ‘ಶಾರದಾ ವಿದ್ಯಾಲಯ’ದಲ್ಲಿ ಸಾಹಿತಿ, ಜ್ಯೋತಿಷಿ ಎಚ್ . ಭೀಮರಾವ್ ವಾಷ್ಠರ್ ಸಭಾಧ್ಯಕ್ಷತೆಯಲ್ಲಿ ಜರಗುವ “ದೀಪಾವಳಿ ಕವಿಗೋಷ್ಠಿ”ಯ ಅಧ್ಯಕ್ಷತೆಯನ್ನು, ರಾಜ್ಯ ಪುರಸ್ಕೃತ, ನಿವೃತ್ತ ಶಿಕ್ಷಕ, ದ.ಕ.ಜಿಲ್ಲಾ ಜೇನು ವ್ಯವಸಾಯಗಾರರ “ಮಧುಪ್ರಪಂಚ” ಸಂಚಿಕೆಯ ಪ್ರಧಾನ ಸಂಪಾದಕ, ಪುತ್ತೂರು ಸುದ್ದಿ ಬಿಡುಗಡೆಯ “ಪ್ರತಿಭಾರಂಗ”ದ ಅಂಕಣಕಾರ, ಕವಿ ಲೇಖಕ ನಾರಾಯಣ ರೈ ಕುಕ್ಕುವಳ್ಳಿ ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾರದಾ ವಿದ್ಯಾಲಯದ ಪ್ರಾಂಶುಪಾಲೆ, ಶಾರದಾ ಸುಳ್ಯ ನೆರವೇರಿಸಲಿದ್ದು, ನೃತ್ಯ ನಿರ್ದೇಶಕ ವಸಂತ್ ಕಾಯರ್ತೋಡಿ, ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಉಮಾ ಮತ್ತು ಬಿ. ಕೆ .ಉಮೇಶ್ ಆಚಾರ್ಯ ಜಟ್ಟಿಪಳ್ಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಚಂದನ ಸಾಹಿತ್ಯ ವೇದಿಕೆಯ ಕ್ರಿಯಾಶೀಲ ಕವಿ ಕುಸುಮಾಕರ್ ಅಂಬೆಕಲ್ಲು ಚೆಂಬು, ಅವರ ಚೊಚ್ಚಲ ಸಾಹಿತ್ಯ ಕೃತಿ ”ಅರಳು ಮಲ್ಲಿಗೆ”- ಲೋಕಾರ್ಪಣೆ ಗೊಳ್ಳಲಿದೆ ಎಂದು ಸುಳ್ಯ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.