ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ 7 ತಂಡ INSEF –Regional Science Fairಗೆ ಆಯ್ಕೆ

0

ಪುತ್ತೂರು: ಶಾಲಾ ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರಗಳನ್ನು ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ INSEF Science Society of India ನಡೆಸಿರುವ INSEF -Regional Science Fair ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ, ಪುತ್ತೂರು ಇಲ್ಲಿನ 8ನೇ ತರಗತಿಯ ವಿದ್ಯಾರ್ಥಿಗಳಾದ ಓಂಕಾರ್ ಮಯ್ಯ, ಗೌತಮ ಕೃಷ್ಣ ಕೆ, ಅತಿನ್ ಎಸ್ ಪ್ರಭು ಹಾಗೂ ಧನ್ವಿತ್ ಎಮ್ ಕೆ ಇವರ ತಂಡ, ಎನ್ ಅಭಯ್ ಆರ್ಯನ್ ಸಿ ಆರ್ ಹಾಗು ದಿಶಾಂತ್ ಕೆ ಇವರ ತಂಡ, ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಾದ ಅಭಿನವ್ ಆಚಾರ್ ಕೆಮತ್ತು ಶ್ರೀಜಿತ್ ಸಿ ಎಚ್ ಇವರ ತಂಡ, ಹರ್ಷ ಕೆ ಮತ್ತು ಪ್ರೀತಮ್ ಎಂ ಇವರ ತಂಡ ಹೀಗೆ 7 ವಿಜ್ಞಾನ ಪ್ರಾಜೆಕ್ಟ್ ಗಳು ಆಯ್ಕೆಗೊಂಡಿವೆ. ಆಯ್ಕೆಗೊಂಡ ವಿದ್ಯಾರ್ಥಿಗಳು ನ.25ರಂದು ಮೂಡಬಿದ್ರೆಯಲ್ಲಿ ನಡೆಯಲಿರುವ INSEF – Regional Science Fairನಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here