ನೆಲ್ಯಾಡಿ: ಅ.31ರಂದು ನಿಧನರಾದ ಬಜತ್ತೂರು ಗ್ರಾಮದ ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಅನಂತಕೃಷ್ಣ ಉಡುಪರವರಿಗೆ ಮುದ್ಯ ಶ್ರೀ ಗಣೇಶೋತ್ಸವ ಸಮಿತಿ, ಮುದ್ಯ ವರಮಹಾಲಕ್ಷ್ಮೀ ಪೂಜಾ ಸಮಿತಿ, ಮುದ್ಯ ಭಜನಾ ಸಮಿತಿ, ಗ್ರಾಮ ವಿಕಾಸ ಸಂಘ ಪಡ್ಪು, ತುಳುನಾಡ್ ತುಡರ್ ಗ್ರೂಪ್ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನ.5ರಂದು ಸಂಜೆ ಮುದ್ಯ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕೆ.ಎಸ್.ಕುವೆಚ್ಚಾರು, ವಿಶ್ವನಾಥ ಗೌಡ ಪಿಜಕ್ಕಳ, ಮಾಧವ ಒರುಂಬೋಡಿಗುತ್ತು, ಸಂತೋಷ್ಕುಮಾರ್ ಬಾರಿಕೆ, ಪೂವಪ್ಪ ಪೂಜಾರಿ ಕೊಡಿಪಾನರವರು ಮಾತನಾಡಿ ನಿಧನರಾದ ಅನಂತಕೃಷ್ಣ ಉಡುಪರ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು. ಅನಂತಕೃಷ್ಣ ಉಡುಪರ ಮೊಮ್ಮಗ ಕೃಷ್ಣಪ್ರಸಾದ್ ಉಡುಪರವರು ಮಾತನಾಡಿ, ತನ್ನ ಅಜ್ಜ ಮಾಡುತ್ತಿದ್ದ ದೇವತಾ ಕಾರ್ಯ ಹಾಗೂ ಪೂಜಾ ವಿಧಿವಿಧಾನಗಳನ್ನು ಮುಂದುವರಿಸಿಕೊಂಡು ಬರುತ್ತೇವೆ ಎಂದು ಹೇಳಿದರು.
ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹಾಗೂ 1 ನಿಮಿಷದ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮುದ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ದಶಸಂಭ್ರಮ ಸಮಿತಿ ಅಧ್ಯಕ್ಷ ಗೋಪಾಲ ಗೌಡ ವಳಾಲುದಡ್ಡು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಧನಂಜಯ ಬಾರಿಕೆ ವಂದಿಸಿದರು. ಜಗದೀಶ್ ಬಾರಿಕೆ ನಿರೂಪಿಸಿದರು. ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಸಮಿತಿಯ ಸದಸ್ಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.