ಪುತ್ತೂರು: ಪುತ್ತಿಲ ಪರಿವಾರದಿಂದ ಧಾರ್ಮಿಕ ಸೇವಾ ಕಾರ್ಯಕ್ರಮಗಳ ಸಂಘಟನೆಗೆ ಹೆಚ್ಚು ಶಕ್ತಿ ತುಂಬುವ ನಿಟ್ಟಿನಲ್ಲಿ ಪುತ್ತಿಲ ಪರಿವಾರದ ಧಾರ್ಮಿಕ ಸೇವಾ ಸಮಿತಿ ರಚನೆಯಾಗುತ್ತಿದ್ದು, ಪುತ್ತೂರು ನಗರ ವ್ಯಾಪ್ತಿಯಲ್ಲಿ ಚಿಕ್ಕಮುಡ್ನೂರು, ಬನ್ನೂರು, ಪಡೀಲ್ ಮತ್ತು ಹಾರಾಡಿ ಘಟಕ ಪುತ್ತಿಲ ಪರಿವಾರದ ಸ್ಥಾಪಕ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರ ಅಧ್ಯಕ್ಷತೆಯಲ್ಲಿ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರ ಉಪಸ್ಥಿತಿಯಲ್ಲಿ ರಚನೆಯಾಗಿದೆ.
ಚಿಕ್ಕಮುಡ್ನೂರು, ಬನ್ನೂರು, ಪಡೀಲ್, ಹಾರಾಡಿ ಘಟಕದ ಅಧ್ಯಕ್ಷರಾಗಿ ಕಾರ್ತಿಕ್ ಗೌಡ ಅಂದ್ರಟ್ಟ, ಉಪಾಧ್ಯಕ್ಷ ಹರ್ಷಿತ್ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ಚಿದಾನಂದ ಬೀರಿಗ, ಜೊತೆ ಕಾರ್ಯದರ್ಶಿಯಾಗಿ ಕೌಶಿಕ್ ಊರಮಜಾಲ್, ಖಜಾಂಚಿ ಪ್ರಕಾಶ್ ಅವರನ್ನು ಆಯ್ಕೆ ಮಾಡಲಾಗಿದೆ. ಸ್ವಾಗ ಸಮಿತಿಗೆ ಸುಧಾಕರ್ ಕೆಮ್ಮಾಯಿ, ರಾಜು ಶೆಟ್ಟಿ ಬೀರ‍್ನಹಿತ್ಲು, ವೈದಿಕ ಸಮಿತಿಗೆ ಅರುಣ್ ಕುಮಾರ್, ಜಯಲಕ್ಷ್ಮೀ ಶಗ್ರಿತ್ತಾಯ, ಆಹಾರ ಸಮಿತಿಗೆ ಪ್ರವೀಣ್ ನಾಯ್ಕ್, ಚಂದ್ರ ಬಡಾವು, ವೇದಿಕೆ ಸಮಿತಿಗೆ ಜಯರಾಜ್ ಹಾರಾಡಿ, ಅಲಂಕಾರ ಸಮಿತಿಗೆ ವಿಜಯ ಪಡಿಲ್, ಅಶೋಕ್ ಕುಮಾರ್ ಹಾರಾಡಿ, ಸ್ವಯಂ ಸೇವಾ ಸಮಿತಿಗೆ ಜಗದೀಶ್ ಬೀರಿಗ, ಜಯಾನಂದ, ವಿಶ್ವನಾಥ ಏಕ, ಭಜನಾ ಸಮಿತಿಗೆ ಡೀಕಯ್ಯ ಪೂಜಾರಿ ಬನ್ನೂರು, ಪ್ರಚಾರ ಸಮಿತಿಗೆ ಹರ್ಷಿತ್ ಕೆಮ್ಮಾಯಿ, ಚೇತನ್ ಕುಮಾರ್, ಸಂತೋಷ್ ಕೆಮ್ಮಾಯಿ ಅವರನ್ನು ನಿಯೋಜಿಸಲಾಯಿತು. ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿಗಳು ಮತ್ತು ಚಿಕ್ಕಮೂಡ್ನೂರು, ಬನ್ನೂರು ಘಟಕ ಉಸ್ತುವಾರಿ ಉಮೇಶ್ ಕೆ, ಉಪಾಧ್ಯಕ್ಷರು ರಾಜು ಶೆಟ್ಟಿ, ಮಹಿಳಾ ಅಧ್ಯಕ್ಷೆ ಜಯಲಕ್ಷ್ಮಿ ಮತ್ತು ಪುತ್ತಿಲ ಪರಿವಾರ ಚಿಕ್ಕಮೂಡ್ನೂರು ಗ್ರಾಮಾಂತರ ಮತ್ತು ನಗರ ಬೂತ್ ಮತ್ತು ಬನ್ನೂರು ಬೂತ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪುತ್ತಿಲ ಪರಿವಾರ ಚಿಕ್ಕಮೂಡ್ನೂರು ಗ್ರಾಮಾಂತರ ಮತ್ತು ನಗರ ಬೂತ್ ಮತ್ತು ಬನ್ನೂರು ಬೂತ್ ಪದಾಧಿಕಾರಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ’ಧಾರ್ಮಿಕ ಸೇವೆ ಕಾರ್ಯಕ್ರಮ ಮತ್ತು ಘಟಕ ಸಮಿತಿ ರಚಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.