ಅಧ್ಯಕ್ಷರಾಗಿ ಆರ್.ಎಂ ಅಲಿ ಹಾಜಿ, ಪ್ರ.ಕಾರ್ಯದರ್ಶಿಯಾಗಿ ಝೈನುದ್ದೀನ್ ಜೆ.ಎಸ್ ಪುನರಾಯ್ಕೆ
ಪುತ್ತೂರು: ಬದ್ರಿಯಾ ಜುಮಾ ಮಸೀದಿ ರೆಂಜಲಾಡಿ ಇದರ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಆರ್.ಎಂ ಅಲಿ ಹಾಜಿ ಪುನರಾಯ್ಕೆಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಝೈನುದ್ದೀನ್ ಹಾಜಿ ಜೆ.ಎಸ್ 5ನೇ ಬಾರಿ ಪುನರಾಯ್ಕೆಗೊಂಡಿದ್ದಾರೆ.
ಗೌರವಾಧ್ಯಕ್ಷರಾಗಿ ವಿ.ಎಚ್ ಅಬ್ದುಲ್ ಶಕೂರ್ ಹಾಜಿ, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಕಲ್ಪಣೆ, ಉಪಾಧ್ಯಕ್ಷರುಗಳಾಗಿ ಇಮ್ರಾನ್ ಮಲ್ನಾಡ್ ಹಾಗೂ ಜಿ.ಎ ಮಹಮ್ಮದ್, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಹೀಂ ರೆಂಜಲಾಡಿ, ಅಬ್ದುಲ್ ಅಝೀಝ್ ರೆಂಜಲಾಡಿ ಹಾಗೂ ಇಸಾಕ್ ಎಸ್ಪಿಟಿ ಪುನರಾಯ್ಕೆಗೊಂಡಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ರಹಿಮಾನ್ ಪರಾಡ್, ಮಹಮ್ಮದ್ ಕೆಜಿಎನ್, ಇಸ್ಮಾಯಿಲ್ ಕಟ್ಟತ್ತಡ್ಕ, ಎಚ್ ಹಸೈನಾರ್, ಅಮೀರ್ ಆರ್, ಹಸೈನಾರ್ ಡಿಪಿಒ, ಇಬ್ರಾಹಿಂ ಆರ್, ಯೂಸುಫ್ ಎ, ಹನೀಫ್ ಆರ್.ಐ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಇಬ್ರಾಹಿಂ ಕಡ್ಯ, ರಫೀಕ್ ಫೈಝಿ, ಇಬ್ರಾಹಿಂ ಸಖಾಫಿ, ಯೂಸುಫ್ ಹಾಜಿ ಕಡ್ಯ ಅವರನ್ನು ಆಯ್ಕೆ ಮಾಡಲಾಗಿದೆ. ರೆಂಜಲಾಡಿ ಮಸೀದಿಯ ಖತೀಬ್ ರಫೀಕ್ ಫೈಝಿ ಮಾಡನ್ನೂರು ದುವಾ ನೆರವೇರಿಸಿದರು. ಸದರ್ ಉಸ್ತಾದ್ ಅಬೂಬಕ್ಕರ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.