ಉಪ್ಪಿನಂಗಡಿ: ಅಪ್ರ್ರಾಪ್ತ ವಯಸ್ಕ ಬಾಲಕಿಯನ್ನು ಪ್ರೀತಿಸುವಂತೆ ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದನ್ವಯ 19ರ ವಯಸ್ಸಿನ ಯುವಕನ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಕುಟ್ಟಿಕ್ಕಳ ನಿವಾಸಿ ಮುಸ್ತಾಫ ಎಂಬವರ ಪುತ್ರ ಮುಝಮಿಲ್ (16) ಎಂಬಾತನೇ ಪ್ರಕರಣದ ಆರೋಪಿ. ಈತ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಶಾಲೆಯೊಂದರ 8ನೇ ತರಗತಿಯ ವಿದ್ಯಾರ್ಥಿನಿ ಮೊಬೈಲ್ ಪೋನ್ ಸಂದೇಶ ಕಳುಹಿಸಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಅ.10ರಂದು ನಿನಗೆ ಫ್ಯಾನ್ಸಿ ಐಟಂ ಗಳನ್ನು ಒದಗಿಸಿಕೊಡುವುದಾಗಿ ತಿಳಿಸಿ ಉಪ್ಪಿನಂಗಡಿಗೆ ಕರೆದುಕೊಂಡು ಹೋಗಿ, ಅಲ್ಲಿನ ಕುಮಾರಧಾರಾ ನದಿಯ ಹಳೇ ಸೇತುವೆಯಲ್ಲಿ ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ಲೈಂಗಿಕ ಹಿಂಸೆ ನೀಡಿರುವುದಾಗಿ ಹಾಗೂ ನ.6ರಂದು ವಿದ್ಯಾರ್ಥಿನಿಗೆ ಮೊಬೈಲ್ ಸಂದೇಶ ಕಳುಹಿಸಿ ಹಿಂಸಿಸುತ್ತಿದ್ದ. ಇದರಿಂದ ವಿದ್ಯಾರ್ಥಿನಿಯು ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾಳೆಂದು ಆಕೆಯ ತಾಯಿ ಉಪ್ಪಿನಂಗಡಿಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಯೋಜನೆ ಹಾಕಿಕೊಂಡಿದ್ದಾರೆ.