ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ‘ಚಿನ್ನೋತ್ಸವ’ಕ್ಕೆ ಚಾಲನೆ

0

ಪುತ್ತೂರು: ವಿಶ್ವ ವಿನೂತನ ಶೈಲಿಯ ಚಿನ್ನಾಭರಣಗಳ ಅಪೂರ್ವ ಸಂಗ್ರಹದೊಂದಿಗೆ ಕೋರ್ಟ್‌ರಸ್ತೆಯ ಮುಳಿಯ ಜ್ಯುವೆಲ್ಸ್‌ನಲ್ಲಿ 20 ದಿನಗಳ ಕಾಲ ನಡೆಯಲಿರುವ ‘ಮುಳಿಯ ಚಿನ್ನೋತ್ಸವ’ಕ್ಕೆ ನ.10ರಂದು ಚಾಲನೆ ದೊರೆಯಿತು.

ಚಿನ್ನೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿದ, ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿರುವ ನಿವೃತ್ತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಬಹಳಷ್ಟು ಮಹತ್ವವಿದೆ. ಚಿನ್ನ ಸೌಂದರ್ಯ ವರ್ಧಕ ಮಾತ್ರವಲ್ಲ, ಆರೋಗ್ಯ ವೃದ್ದಿಯಿಂದಲೂ ಅದಕ್ಕೆ ಮಹತ್ವ ಪಡೆದಿದೆ. ಚಿನ್ನದಲ್ಲಿ ವೈಜ್ಞಾನಿಕ ಸತ್ಯ ಅಡಗಿದೆ. ಚಿನ್ನ ಖರೀದಿಯಲ್ಲಿ ಹಣ ವಿನಿಯೋಗಿಸಿದರೆ ಅದು ಆಪತ್ಕಾಲದಲ್ಲಿ ನಮ್ಮನ್ನು ರಕ್ಷಣೆ ಮಾಡುತ್ತದೆ. ಹಬ್ಬಕ್ಕೆ ಸಣ್ಣ ಚಿನ್ನ ಖರೀದಿಸಿದರೆ ಮನೆ ಶ್ರೇಯಸ್ಸು ಬರಲಿದೆ. ಅಂತಹ ಚಿನ್ನವನ್ನು ಮುಳಿಯ ಜ್ಯುವೆಲ್ಸ್‌ನಿಂದಲೇ ಖರೀದಿಸಬೇಕು. ಮುಳಿಯ ಜ್ಯುವೆಲ್ಸ್‌ನ ಚಿನ್ನ ಹೆಸರಿನಂತೆ ಪರಿಶುದ್ಧತೆಯಿಂದ ಕೂಡಿದೆ. ಜನ ಸಾಮಾನ್ಯರು ಕೊಂಡುಕೊಳ್ಳುವಂತೆ ಅಪೂರ್ವ ಸಂಗ್ರಹಗಳಿವೆ ಎಂದರು.
ಪ್ರಥಮ ಗ್ರಾಹಕರಾಗಿದ್ದ ಮಂಗಳೂರು ಟ್ರಾವೆಲ್ ಇಂಡಿಯಾ ಹಾಲಿಡೇಸ್ ಮ್ಹಾಲಕ ಆಕಾಶ್ ರೈ ಮಾತನಾಡಿ, ತಮ್ಮ ಕುಟುಂಬದ ಹಿರಿಯರು ಮುಳಿಯ ಜ್ಯುವೆಲ್ಸ್‌ನಿಂದಲೇ ಚಿನ್ನಾಭರಣ ಖರೀದಿ ಮಾಡುತ್ತಿದ್ದರು. ಈ ಭಾರಿ ಪ್ರಥಮವಾಗಿ ನಾನೇ ಆಯ್ಕೆ ಮಾಡಿ ಖರೀದಿ ಮಾಡಿದ್ದೇನೆ. ಇಲ್ಲಿ ಆಭರಣಗಳ ಆಯ್ಕೆ ಸಾಕಷ್ಟು ಅವಕಾಶಗಳಿವೆ. ಗ್ರಾಹಕರಿಗೆ ಮನಮುಟ್ಟುವ ಬಹಳಷ್ಟು ವಿನ್ಯಾಸದ ಚಿನ್ನಾಭರಣಗಳ ಸಂಗ್ರಹಗಳಿವೆ. ಇಲ್ಲಿ ಸಂಸ್ಥೆಯ ಜೊತೆಗೆ ಸಿಬ್ಬಂದಿಗಳಿಂದಲೂ ಉತ್ತಮ ಸಹಕಾರವಿದೆ ಎಂದರು.
ಸಂಸ್ಥೆಯ ನಿರ್ದೇಶಕಿ ಕೃಷ್ಣವೇಣಿ ಮುಳಿಯ ಮಾತನಾಡಿ, ಚಿನ್ನ ಬದುಕಿಗೆ ಭರವಸೆ, ಆತ್ಮವಿಶ್ವಾಸ ಹಾಗೂ ಆಸರೆಯನ್ನು ನೀಡುತ್ತದೆ. ಅನಗತ್ಯ ಖರ್ಚನ್ನು ದೂರಮಾಡಿ ಚಿನ್ನ ಖರೀದಿ ಬದುಕಿಗೆ ಒಲಿತನ್ನೇ ನೀಡುತ್ತದೆ. ಕೆಟ್ಟ ಆಲೋಚನೆ ದೂರ ಮಾಡುತ್ತಿದೆ. ಜೀವನದ ಕಷ್ಟ ಕಾಲದಲ್ಲಿ ನಮಗೆ ಆಸರೆಯಾಗುತ್ತದೆ. ನಿತ್ಯ ನೂತನ ಬಂಗಾರ ನಮ್ಮ ಬದುಕಿನ ಶೃಂಗಾರ, ಚಿನ್ನ ಬಾಳನ್ನು ಬೆಳಗಲಿ. ಗ್ರಾಹಕರಿಗೆ ಸಂತೃಪ್ತಿಯೇ ನಮ್ಮ ಉದ್ದೇಶ ಎಂದರು.
ಸಂಸ್ಥೆಯ ಪ್ರಬಂಧಕ ನಾಮದೇವ ಮಲ್ಯ ಮಾತನಾಡಿ, ಮುಳಿಯ ಜ್ಯುವೆಲ್ಸ್ ಹಲವಾರು ವರ್ಷಗಳಿಂದ ಹೊಸ ವಿನೂತನ ರೀತಿಯ ಚಿನ್ನಾಭರಣಗಳನ್ನು ಪರಿಚಯಿಸುತ್ತಾ ಬರುತ್ತಿದೆ. ವರ್ಷದಲ್ಲಿ ಎರಡು ಬಾರಿ ಚಿನ್ನೊತ್ಸವ ನಡೆಯುವ ಮೂಲಕ ಹಬ್ಬದ ಮೆರುಗನ್ನು ಹೆಚ್ಚಿಸುತ್ತಿದ್ದೇವೆ. ಈ ಭಾರಿಯ ಚಿನ್ನೋತ್ಸವ ನ.10-30ರ ತನಕ ನಡೆಯಲಿದೆ. ವಿಶ್ವ ವಿನೂತನ ಚಿನ್ನಾಭರಣ ಲಭ್ಯವಿದೆ. ಅತ್ಯಾಧುನಿಕ ನವನೀವಿನ ಮಾದರಿಯ ಚಿನ್ನಾಭರಣಗಳು, ಬೆಳ್ಳಿ, ವಜ್ರಾಭಾರಣ ಹಾಗೂ ಮುತ್ತಿನ ಆಭರಣಗಳ ಅಪೂರ್ವ ಸಂಗ್ರಹಗಳು ಚಿನ್ನೊತ್ಸವದಲ್ಲಿ ಲಭ್ಯವಿದೆ ಎಂದರು.
ಸಂಸ್ಥೆ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಥಮ ಖರೀದಿದಾರರಾಗಿದ್ದ ಆಕಾಶ್ ರೈಯವರ ತಂದೆ ಸನತ್ ಕುಮಾರ್ ರೈ, ತಾಯಿ ಶಶಿಕಲಾ ಸೇರಿದಂತೆ ಹಲವು ಮಂದಿ ಗ್ರಾಹಕರು ಉಪಸ್ಥಿತರಿದ್ದರು.
ಆಶಾರಾಣಿ ಪ್ರಾರ್ಥಿಸಿದರು. ಉಪ ಪ್ರಬಂಧಕ ಯತೀಶ್ ಸ್ವಾಗತಿಸಿದರು. ಸಿಬ್ಬಂದಿಗಳಾದ ನಯನಾ, ಸಂಜೀವ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಸುಪ್ರಭಾ ರಾವ್ ಕಾರ್ಯಕ್ರಮ ನಿರೂಪಿಸಿ, ಪ್ರವೀಣ್ ವಂದಿಸಿದರು.

LEAVE A REPLY

Please enter your comment!
Please enter your name here