ಪಟ್ಟೆ ಕಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ

0

ಬಡಗನ್ನೂರುಃ  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು ಸಮೂಹ ಸಂಪನ್ಮೂಲ ಕೇಂದ್ರ ಕುಂಬ್ರ ಹಾಗೂ ಶ್ರೀ ಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಟ್ಟೆ ಇದರ ಆಶ್ರಯದಲ್ಲಿ  ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಚಿಣ್ಣರ ಚಿಲಿಪಿಲಿ ಪ್ರತಿಭಾ ಕಾರಂಜಿ ಸ್ಪರ್ಧೆ 2023-24 ಕಾರ್ಯಕ್ರಮವು ನ.11 ರಂದು ಪಟ್ಟೆ  ಶ್ರೀ ಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ನಡೆಯಿತು.

ಕಾರ್ಯಕ್ರಮವನ್ನು ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ಎಂ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪಟ್ಟೆ ವಿದ್ಯಾ ಸಂಸ್ಥೆಗಳು ಮಕ್ಕಳಿಗೆ ಶಿಕ್ಷಣ ಜತೆ ಕ್ರೀಡೆ ಹಾಗೂ ಮಕ್ಕಳ ಪ್ರತಿಭೆಯನ್ನು ಗುರುತಿಸಿ ವಿವಿಧ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಪ್ರತಿಭಾ ಕಾರಂಜಿಗಳ ಕಾರ್ಯಕ್ರಮಗಳು  ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯುತ್ತದೆ. ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವಿಕ್ಷಕ ಸುಂದರ ಗೌಡ ಪ್ರಾಸ್ತಾವಿಕ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಮೂಲಕ ವಿಭಿನ್ನ ಚಟುವಟಿಕೆ ಕೈಗೊಂಡು ಪ್ರತಿಭಾ ಕಾರಂಜಿ  ಕಾರ್ಯಕ್ರಮ ಅಯೋಜಿಸಲಾಗಿದೆ. ಶಿಕ್ಷಕರು ವಿಭಿನ್ನ ಕಾರ್ಯ ಚಟುವಟಿಕೆ ಮೂಲಕ ಮಕ್ಕಳ ಪ್ರತಿಭೆ ಗುರುತಿಸುವಲ್ಲಿ ಪ್ರಯತ್ನಿಸುತ್ತಾರೆ. ರಾಷ್ಟ್ರಮಟ್ಟದಲ್ಲಿ ಕಲೋತ್ಸವ ನಡೆಸಲಾಗುತ್ತದೆ ಅದರಲ್ಲಿ ನಗದು ಹಣ ನೀಡಲಾಗುತ್ತದೆ. ಇದರಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿ ಭಾಗವಹಿಸುವಿಕೆ ವಿರಳ  ಪಟ್ಟಣಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಭಾಗವಹಿಸುತ್ತಾರೆ.ಎಂದ ಅವರು ತಿರ್ಪುಗಾರರು ಸ್ಪರ್ಧೆಯಲ್ಲಿ  ಪಾರದರ್ಶಕ, ಮತ್ತು ನ್ಯಾಯಯುತ ತೀರ್ಪು ನೀಡಿ ಮಕ್ಕಳ ಪ್ರತಿಭೆಯನ್ನು ಅರಳಿಸಬೇಕು ಎಂದು ಹೇಳಿದರು. ಈ ಭಾರಿ ಜಿಲ್ಲಾ ಮಟ್ಟದ ಕ್ರೀಡಾ ಕೂಟ ಅಯೋಜಿಸಲಾಗಿದೆ. ಮುಂದಿನ ವರ್ಷ ರಾಜ್ಯ ಮಟ್ಟದ ಅಥ್ಲೆಟಿಕ್ ಪಂದ್ಯಾಟದ ನಡೆಯಲಿದೆ .ಆನಂತರದ ವರ್ಷದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಪುತ್ತೂರು ತಾಲೂಕಿನಲ್ಲಿ ನಡೆಯಲಿದೆ. ಒಟ್ಟಿನಲ್ಲಿ ಪುತ್ತೂರು ಶಿಕ್ಷಣ ಕ್ಷೇತ್ರದಲ್ಲಿ ಮೆರಗುತ್ತಿದೆ ಎಂದು ಸುಂದರ ಗೌಡ ಹೇಳಿದರು.

ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ  ಶಿಕ್ಷಕ ಸಂಘದ ಅಧ್ಯಕ್ಷ ನವೀನ್ ರೈ ಮಾತನಾಡಿ ಮಕ್ಕಳ ಹುಟ್ಟಿನಿಂದಲೇ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸವನ್ನು ಹೆತ್ತವರು ಅಥವಾ ಸಮಾಜ ಮಾಡಬೇಕು.ಆಗ ಮಾತ್ರ ಮಗುವಿನ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ  ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಒಳ್ಳೆಯ ವೇದಿಕೆ ಎಂದು ಹೇಳಿದರು.

ಪಟ್ಟೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ವೇಣುಗೋಪಾಲ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತಮಗೆ ಸಿಗುವಂತ  ಅವಕಾಶವನ್ನು ಎಂದಿಗೂ ಸದುಪಯೋಗ ಪಡಿಸಿಕೊಳ್ಳುತ್ತದೆ.ಮಕ್ಕಳ ಪ್ರತಿಭೆ ಯನ್ನು ಅಭಿವ್ಯಕ್ತಪಡಿಸುವ ಕೆಲಸ ಹೆತ್ತವರ ಮೂಲಕ ನಡೆಯಬೇಕು. ಎಂದ ಅವರು ಇತ್ತೀಚೆಗೆ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ 17 ವಯೋಮಾನದ ಬಾಲಕಿಯರ ಗುಂಡೆಸತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು  ರಾಜ್ಯ ಮಟ್ಟಕ್ಕೆ ಅಯ್ಕೆಯಾದ ತನುಶ್ರೀ  ಮುಂದೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ದಾಖಲೆ ಸೃಷ್ಟಿಸುತ್ತಾಳೆ ಎಂಬ  ಭರವಸೆ ಇದೆ. ಶ್ರೀ ದೇವರ ಶಕ್ತಿ ನೀಡಲಿ ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ವಿದ್ಯಾಸಂಸ್ಥೆಗಳ ಸಂಚಾಲಕ ನಾರಾಯಣ ಭಟ್ ಪಿ,   ಪುತ್ತೂರು ಶಿಕ್ಷಣ ಸಂಯೋಜಕಿ ಅಮೃತಕಲಾ,  ಬಡಗನ್ನೂರು ಗ್ರಾ.ಪಂ ಸದಸ್ಯೆ ಹೇಮಲತಾ ಮೋಡಿಕೆ, ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಕನ್ನಯ, ಪ್ರಾಥಮಿಕ ಶಾಲಾ ಎಸ್. ಡಿ.ಸಿ.ಯಂ. ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ  ಶಿಕ್ಷಕ ಸಂಘದ ಉಪಾಧ್ಯಕ್ಷ ಸುಧಾಕರ ಶೆಟ್ಟಿ, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಣ್ಣ ರೈ, ಉಪಸ್ಥಿತರಿದ್ದರು.

ಕುಂಬ್ರ ಕ್ಲಸ್ಟರ್ ಮುಖ್ಯಸ್ಥೆ ಶಶಿಕಲಾ ಸ್ವಾಗತಿಸಿದರು.ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಭಟ್ ವಂದಿಸಿದರು. ಪ್ರತಿಭಾ ಪ್ರೌಢಶಾಲಾ ಸಹ ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.  ಪ್ರೌಢಶಾಲಾ ಸಹ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು ಸಹಕರಿಸಿದರು.

ಕಾರ್ಯಕ್ರಮದಲ್ಲಿ ಕ್ಲಸ್ಟರ್ ಮಟ್ಟದ 12 ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಮತ್ತು ನಿವೃತ್ತ ಶಿಕ್ಷಕರು ಹಾಗೂ ಅಕ್ಷರದಾಸೋಹ ಸಿಬ್ಬಂದಿಗಳು, ಮಕ್ಕಳ ಪೋಷಕರು ಮತ್ತು ಊರಿನವರು ಉಪಸ್ಥಿತರಿದ್ದರು.

ಅಭಿನಂದನೆ 
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ 17 ವಯೋಮಾನದ ಬಾಲಕಿಯರ ಗುಂಡೆಸತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು  ರಾಜ್ಯ ಮಟ್ಟಕ್ಕೆ ಅಯ್ಕೆಯಾದ ತನುಶ್ರೀ ರವರಿಗೆ ಕ್ಲಸ್ಟರ್ ಮಟ್ಟದಿಂದ ಹಾಗೂ ಆಡಳಿತ ವತಿಯಿಂದ ಪೇಟ ಧರಿಸಿ  ಶಾಲು ಹಾರ ಫಲಪುಷ್ಪ, ನೀಡಿ ಅಭಿನಂದಿಸಲಾಯಿತು.

ನಿವೃತ್ತ ಮುಖ್ಯ ಶಿಕ್ಷಕರಿಗೆ ಅಭಿನಂದನೆ
ಇತ್ತೀಚಿಗೆ ನಿವೃತ್ತರಾದ ಬಡಗನ್ನೂರು ಸ.ಉ.ಹಿಪ್ರಾ.ಶಾಲಾ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ,ಹಾಗೂ ಸಜಂಕಾಡಿ ಸ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಸಾವಿತ್ರಿ ರವರನ್ನು ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಪ ನೀಡಿ ಗೌರವಿಸಲಾಯಿತು.ಕುಂಬ್ರ ಕ್ಲಸ್ಟರ್ ಮಟ್ಟದ ವರ್ಗಾವಣೆ ಗೊಂಡು ಬಂದ ಹಾಗೂ ವರ್ಗಾವಣೆ ಗೊಂಡು ಹೋದ ಶಿಕ್ಷಕರನ್ನು ಕನ್ನಡ ಶಾಲು ಮತ್ತು ಕನ್ನಡ ಪುಸ್ತಕ ನೀಡಿ ಗೌರವಿಸಿತು.ಮತ್ತು ಕುಂಬ್ರ ಕ್ಲಸ್ಟರ್ ಮಟ್ಟದ 12 ಶಾಲಾ ಮುಖ್ಯ ಶಿಕ್ಷಕರನ್ನು ಕನ್ನಡ ಶಾಲು ಹಾಕಿ ಗೌರವಿಸಿತು.

ಕುಂಬ್ರ ಕ್ಲಸ್ಟರ್ ಮಟ್ಟದ  ಸುಮಾರು 12 ಪ್ರಾಥಮಿಕ ಶಾಲೆ ಸುಮಾರು 250  ಮಕ್ಕಳು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.1ರಿಂದ 4 12 ಸ್ಪರ್ಧೆ ಹಾಗೂ 5 ರಿಂದ 7 15  ವಿವಿಧ ಸ್ಪರ್ಧೆಗಳು ನಡೆಸಲಾಯಿತು.

LEAVE A REPLY

Please enter your comment!
Please enter your name here