ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗೋಪೂಜೆ 

0

ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದಲ್ಲಿ ದೀಪಾವಳಿಯ ಬಲಿಪಾಡ್ಯಮಿಯ ದಿನವಾದ ನ.14ರ ಸಂಜೆ  ಗೋದೊಳಿ ಲಗ್ನದಲ್ಲಿ ಗೋಪೂಜೆ ನೆರವೇರಿತು.ಕ್ಷೇತ್ರ ಪುರೋಹಿತರು ವಿವಿಧ ವೈದಿಕ ವಿಧಾನಗಳ ಮೂಲಕ ಪೂಜೆ ನೆರವೇರಿಸಿದರು.

ಆರಂಭದಲ್ಲಿ ಗೋವುಗಳಿಗೆ ಸ್ನಾನ ಮಾಡಿಸಿ ಅರಿಶಿನ, ಕುಂಕುಮ, ಹೂವುಗಳಿಂದ ಅಲಂಕರಿಸಿ ಶ್ರೀ ದೇವಳದ ಮುಂಭಾಗಕ್ಕೆ ತರಲಾಯಿತು.ಇಲ್ಲಿಅಕ್ಕಿ, ಬೆಲ್ಲ, ಸಿಹಿ ತಿನಿಸುಗಳನ್ನು ಒಳಗೊಂಡ ಗೋಗ್ರಾಸ ನೀಡಲಾಯಿತು. ನಂತರ ವಿವಿಧ ವೈಧಿಕ ವಿದಿ ವಿಧಾನಗಳೊಂದಿಗೆ ಪುರೋಹಿತರು ಪೂಜಾದಿಗಳನ್ನು ನೆರವೇರಿಸಿದರು.ಇದಲ್ಲದೆ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಪ್ರತಿವರ್ಷದಂತೆ ದೇವಳದ ಗೋಶಾಲೆಯಲ್ಲಿ ಕೂಡಾ ಪೂಜೆ ನೆರವೇರಿತು.ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ,ಸುಳ್ಯ ತಾ.ಪಂ.ಇಓ ರಾಜಣ್ಣ ,ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರು, ಭಕ್ತಾದಿಗಳು, ಕ್ಷೇತ್ರದ ಸಿಬಂದಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here