ಕಡಬ: ಸ್ಕೂಟರ್, ಬೈಕ್ ಡಿಕ್ಕಿ- ತಾಯಿ, ಮಗಳಿಗೆ ಗಾಯ

0

ಕಡಬ: ಸ್ಕೂಟರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ತಾಯಿ,ಮಗಳು ಗಾಯಗೊಂಡಿರುವ ಘಟನೆ ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಹೆಚ್‌ಪಿ ಪೆಟ್ರೋಲ್ ಪಂಪ್ ಬಳಿ ನ.13ರಂದು ಸಂಜೆ ನಡೆದಿದೆ.


ಸ್ಕೂಟರ್ ಸಹಸವಾರೆ ರೆಂಜಿಲಾಡಿ ಗ್ರಾಮದ ತರಪ್ರೇಲು ನಿವಾಸಿ ಅಣ್ಣಮ್ಮ(56ವ.)ಹಾಗೂ ಸವಾರೆ ಅವರ ಮಗಳು ಡೈನಿ ಗಾಯಗೊಂಡಿದ್ದು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರು ಕಡಬ ಪೇಟೆಗೆ ಬಂದು ವಾಪಾಸು ರೆಂಜಿಲಾಡಿ ಕಡೆಗೆ ಸ್ಕೂಟರ್(ಕೆ21 ಇಡಿ 2799)ನಲ್ಲಿ ಹೋಗುತ್ತಿದ್ದವರು ಕಡಬದ ಹೆಚ್‌ಪಿ ಪೆಟ್ರೋಲ್ ಪಂಪ್ ಬಳಿಗೆ ತಲುಪಿದಾಗ ಡೈನಿಯವರು ಸ್ಕೂಟರ್‌ಗೆ ಪೆಟ್ರೋಲ್ ಹಾಕಿಸುವರೇ ಬಲಕ್ಕೆ ಇಂಡಿಕೇಟರ್ ಹಾಕಿ ಬಂಕ್ ಕಡೆಗೆ ತಿರುಗಿಸಿ ರಸ್ತೆಯನ್ನು ದಾಟುತ್ತಿದ್ದ ಸಮಯ ಸುಬ್ರಹ್ಮಣ್ಯದಿಂದ ಕಡಬ ಕಡೆಗೆ ಬರುತ್ತಿದ್ದ ಬೈಕ್( ಕೆಎ 21 ಇಡಿ 5972) ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಸ್ಕೂಟರ್ ಸವಾರೆ ಡೈನಿ ಮತ್ತು ಸಹ ಸವಾರೆ ಅನ್ನಮ್ಮರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳು ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಕೂಟರ್ ಸಹಸವಾರೆ ಡೈನಿಯವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ:279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here