ನೆಲ್ಲಿಕಟ್ಟೆ ಎಪಿಎಂಸಿ ಸಂಕ್ರಾಂತಿ ಮನೆಯ ರುಕ್ಮಿಣಿ ಅವರ ಶ್ರದ್ಧಾಂಜಲಿ ಸಭೆ

0

ತಾಯಿ, ಅಕ್ಕ ಸಮಾನರಾಗಿ, ಮಾರ್ಗದರ್ಶಕಿ, ವಿದ್ಯಾದಾನಿ ಮಹಾಚೇತನ – ಗುಡ್ಡಪ್ಪ ಗೌಡ ಬಲ್ಯ

ಪುತ್ತೂರು: ಅನೇಕರಿಗೆ ಅವರು ತಾಯಿ, ಅಕ್ಕ ಸಮಾನರಾಗಿ, ಮಾರ್ಗದರ್ಶಕರು, ವಿದ್ಯಾದಾನ ನೀಡಿದವರಾಗಿ, ಇನ್ನೂ ಅನೇಕರಿಗೆ ಬದುಕಿನ ಪಾಠ ಕಲಿಸಿಕೊಟ್ಟ ಮಹಾತಾಯಿ ರುಕ್ಮಿಣಿ ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮ ಶ್ರೀಮನ್ ನಾರಾಯಣನನ್ನು ಸೇರಲಿ ಎಂದು ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಅವರು ಹೇಳಿದರು.


ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನ.16ರಂದು ನಡೆದ ನೆಲ್ಲಿಕಟ್ಟೆ ಎಪಿಎಂಸಿ ರಸ್ತೆ ಬಳಿಯ ದಿ. ಜಾನಕಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು. ರುಕ್ಮಿಣಿ ಅವರ ಮನೆ ಹೆಸರು ಸಂಕ್ರಾಂತಿ, ಅದೇ ಸಂಕ್ರಾಂತಿಯಂದೇ ಅವರ ಶ್ರದ್ಧಾಂಜಲಿ ಸಲ್ಲುತ್ತಿದೆಯೆಂದರೆ ಅವರ ಪುಣ್ಯ ಕಾರ್ಯ ನೆನೆಯಬೇಕು. 90 ವರ್ಷದಲ್ಲೂ ಮಗ್ಗಿಯನ್ನು ಹೇಳುತ್ತಾರೆ ಎಂದಾದರೆ ಅವರ ನೆನಪಿನ ಶಕ್ತಿ ಎಷ್ಟಿರಬೇಕೆಂದು ನಾವು ಊಹಿಸಲು ಸಾಧ್ಯವಿಲ್ಲ. ಕಾಯಕ ಮುಖ್ಯವೆಂದು ಬಸವಣ್ಣ ಹೇಳಿದಂತೆ ಅವರ ಕುಟುಂಬದ ತಾಯಿಯಾಗಿ ಮಕ್ಕಳಿಗೆ ಮಾರ್ಗದರ್ಶನ ನೀಡಿದ್ದಾರೆ. ಅವರ ಗಂಡ ಭಟ್ಯಪ್ಪ ಗೌಡ ಅವರು ಪೊಲೀಸ್ ಇಲಾಖೆಯಲ್ಲೇ ಸೇವೆ ಸಲ್ಲಿಸಿದ್ದರಿಂದ ಅವರ ಕುಟುಂಬದಲ್ಲಿ ದೇಶ ಸೇವೆಯ ಮಹತ್ವವಿದೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿಯವರು ಸೇರಿದಂತೆ ಅನೇಕ ಅಧಿಕಾರಿಗಳು ರುಕ್ಮಿಣಿ ತಾಯಿಯ ಅಶೀರ್ವಾದ ಪಡೆದಿದ್ದಾರೆ. ಇದು ಅವರ ದೊಡ್ಡ ಗುಣವನ್ನು ತೋರಿಸುತ್ತದೆ. ಈ ನಿಟ್ಟಿನಲ್ಲಿ ರುಕ್ಮಿಣಿ ಅವರ ಆತ್ಮ ನೇರ ಭಗವಂತನೊಂದಿಗೆ ಸೇರುತ್ತದೆ ಎಂದರು.


ತಾಯಿಯ ಗುಣಗಾನಕ್ಕೆ ಮಹತ್ವವಿದೆ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಕಾಯಕಕ್ಕೆ ಅಳಿವಿಲ್ಲ ಎಂಬಂತೆ ರಾಮದಾಸ್ ಗೌಡ ಅವರು ನಮ್ಮ ಜೊತೆ ತಾಯಿ ರುಕ್ಮಿಣಿಯ ಗುಣಗಾನ ಮಾಡುತ್ತಿದ್ದರು. ಇದು ಆ ತಾಯಿಯ ಮಹತ್ವ ತಿಳಿಸುತ್ತದೆ. ಈ ನಿಟ್ಟಿನಲ್ಲಿ ರುಕ್ಮಿಣಿ ಅಮ್ಮನವರ ಆತ್ಮಕ್ಕೆ ಚಿರಶಾಂತಿಯನ್ನು ಭವವಂತ ಕರುಣಿಸುತ್ತಾನೆ ಎಂದರು.


ಆರ್‌ಎಸ್‌ಎಸ್‌ಗೆ ಊಟದ ಮನೆಯಂತಿತ್ತು:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ ಅವರು ಮಾತನಾಡಿ ಹಿಂದಿನ ಕಾಲದಲ್ಲಿ ಎಪಿಎಂಸಿಯ ರುಕ್ಮಿಣಿ ಅಮ್ಮನವರ ಮನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಊಟದ ಮನೆಯಂತ್ತಿತ್ತು. ಅವರ ನೆನಪಿನ ಶಕ್ತಿ ಮಾರ್ಗದರ್ಶನವನ್ನು ನಾನು ಕಂಡಿದ್ದೇನೆ ಎಂದು ಹೇಳಿದರು. ನುಡಿನಮನದ ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಮೂಲಕ ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿ ಕೋರಲಾಯಿತು.

ಈ ಸಂದರ್ಭ ರುಕ್ಮಿಣಿ ಅವರ ಪುತ್ರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಅವರು ತಾಯಿಯ ವಿಶೇಷತೆ ಮತ್ತು ಮಕ್ಕಳನ್ನು ಸಾಕಿದ ರೀತಿಯನ್ನು ತಿಳಿಸಿದರು. ಕೊನೆಗೆ ಕಾರ್ಯಕ್ರಮಕ್ಕೆ ಅಗಮಿಸಿದವರು ರುಕ್ಮಿಣಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ಬಿ ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಬಿ ಕೆ ವೀಣಾ, ಡಾ ಸುಧಾ ಎಸ್ ರಾವ್, ಜಿ.ಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಙತಿವನ, ಯುವರಾಜ್ ಪೆರಿಯತ್ತೋಡಿ, ಕುಂಜೂರು ಶ್ರೀ ದರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವನಾಥ ಕುಲಾಲ್, ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಎಚ್, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ನಿಯೋಜಿತ ಅಧ್ಯಕ್ಷ ರವಿ ಮುಂಗ್ಲಿಮನೆ, ಮಾಜಿ ಅಧ್ಯಕ್ಷ ಹೆಚ್.ಡಿ ಶಿವರಾಮ್, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ನಿರ್ದೇಶಕ ಪ್ರವೀಣ್ ಕುಂಟ್ಯಾನ, ಆಂತರಿಕ ಲೆಕ್ಕಪರಿಶೋಧಕ ಶ್ರೀಧರ್ ಗೌಡ ಕಣಜಾಲು, ಕಿಟ್ಟಣ್ಣ ಗೌಡ ಬಪ್ಪಳಿಗೆ, ಕಲ್ಲೇಗ ಜಿನ್ನಪ್ಪ ಗೌಡ, ವೇ ಮೂ ನಾಗರಾಜ್ ಭಟ್, ಶ್ರೀ ಮಹಾಲಿಂಗೇಶ್ವರ ಐಟಿಐ ಸಂಚಾಲಕ ಯು ಪಿ ರಾಮಕೃಷ್ಣ, ಕಾಂಗ್ರೆಸ್ ಮುಖಂಡ ಶಿವರಾಮ ಆಳ್ವ, ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಡಾ| ಪಿ ಕೆ ಗಣೇಶ್, ನಿವೃತ್ತ ಎಸ್ಪಿಯಾದ ಅಪ್ಪಯ್ಯ, ಹರೀಶ್ಚಂದ್ರ, ರಾಮದಾಸ್ ಗೌಡ ಅವರ ಶಿಕ್ಷಣದ ವೇಳೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ರುಕ್ಮಿಣಿ ಅವರ ಪುತ್ರರಾದ ರಾಧಾಕೃಷ್ಣ ಗೌಡ ಎಸ್, ರಾಮದಾಸ್ ಗೌಡ ಎಸ್, ಕಿಶೋರ್ ಕುಮಾರ್ ಎಸ್, ಪುತ್ರಿಯರಾದ ಜಯಲಕ್ಷ್ಮೀ ಎಸ್, ತಾರಾಮತಿ ಎಸ್, ಭಾರತಿ ಎಸ್, ಅಂಬಿಕಾ ಎಸ್, ಸೊಸೆಯಂದಿರಾದ ಉಷಾ ಆರ್ ಕೆ, ದಯಾಮಣಿ ಎಸ್.ಪಿ, ಸಂಧ್ಯಾ ಜಿ, ಅಳಿಯಂದಿರಾದ ಜಯರಾಮ ಗೌಡ ಗುಡ್ಡೆಮನೆ, ಭಾಸ್ಕರ ಗೌಡ ಬುಡಲೂರು, ದಿನೇಶ್ ಗೌಡ ಬಪ್ಪಳಿಗೆ, ಕೇಶವ ಗೌಡ ಎನ್ ನಾಯ್ತೊಟ್ಟು ಮತ್ತು ಮೊಮ್ಮಕ್ಕಳು, ಮರಿಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here