ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲುರವರಿಗೆ ಜ್ಞಾನ ಮಂದಾರ ಅಕಾಡೆಮಿಯ ಮಹಾರಾಷ್ಟ್ರ ಘಟಕದಿಂದ ಸನ್ಮಾನ

0

ಪುತ್ತೂರು: ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆಗೈಯ್ದು ಜನಮನ್ನಣೆಯೊಂದಿಗೆ ಬಸವಶ್ರೀ ರಾಷ್ಟ್ರೀಯ ಪುರಸ್ಕಾರ, ಸಮಾಜರತ್ನ ಪುರಸ್ಕಾರದೊಂದಿಗೆ ಅನೇಕ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದು ಇದೀಗ ದ.ಕ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರನ್ನು ನ.17ರಂದು ಬೆಂಗಳೂರು-ಮಂಗಳೂರು ಜ್ಞಾನ ಮಂದಾರ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಕಾಡೆಮಿಯ ಮಹಾರಾಷ್ಟ್ರ ಘಟಕದ ವತಿಯಿಂದ ರವೀಂದ್ರ ಶೆಟ್ಟಿಯವರ ಮುಕ್ರಂಪಾಡಿ ‘ನುಳಿಯಾಲು’ ನಿವಾಸದಲ್ಲಿ ಸನ್ಮಾನಿಸಲಾಯಿತು.

ಜ್ಞಾನ ಮಂದಾರ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಮಹಾರಾಷ್ಟ್ರ ಘಟಕದ ನಿರ್ದೇಶಕ, ಹಿರಿಯ ನ್ಯಾಯವಾದಿ ಮೋರ್ಲ ರತ್ನಾಕರ್ ಶೆಟ್ಟಿ ಯವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರನ್ನು ಶಾಲು ಹೊದಿಸಿ ಸನ್ಮಾನಿಸಿ ಮಾತನಾಡಿ, ನಮ್ಮ ಜ್ಞಾನ ಮಂದಾರ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್ ಗೆ ಹಲವಾರು ವರ್ಷಗಳಿಂದ ರವೀಂದ್ರ ಶೆಟ್ಟಿಯವರು ಸಹಾಯಹಸ್ತದ ಸಹಕಾರ ನೀಡುತ್ತಲೇ ಬಂದಿರುತ್ತಾರೆ. ಪ್ರಶಸ್ತಿ ಅಂದ ಕೂಡಲೇ ಅದಕ್ಕೆ ತೂಕ, ಬೆಲೆ, ಅರ್ಹತೆ ಇರುತ್ತದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನೀಡಿದ ಸೇವೆಗಾಗಿ ರವೀಂದ್ರ ಶೆಟ್ಟಿಯವರಿಗೆ ಇಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ನಮಗೆಲ್ಲ ಸಂತೋಷ ತಂದಿದೆ ಮಾತ್ರವಲ್ಲ ಆ ಪ್ರಶಸ್ತಿಗೆ ಅವರು ನಿಜಕ್ಕೂ ಅರ್ಹರು ಆಗಿದ್ದಾರೆ. ಮುಂದಿನ ದಿನಗಳಲ್ಲಿ ರವೀಂದ್ರ ಶೆಟ್ಟಿ ಯವರಿಗೆ ಮತ್ತಷ್ಟು ಪ್ರಶಸ್ತಿ ಸಿಗುವಂತಾಗಲಿ ಮತ್ತು ಸುಖ, ಶಾಂತಿ, ನೆಮ್ಮದಿಯ ಜೀವನ ಅವರದಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಜ್ಞಾನ ಮಂದಾರ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಮುಖ್ಯಸ್ಥ ಸೋಮಶೇಖರ್ ರವರು ಮಾತನಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಮ್ಮ ಆತ್ಮೀಯರೂ ಆಗಿರುವ ರವೀಂದ್ರ ಶೆಟ್ಟಿಯವರು ಸಮಾಜದಲ್ಲಿ ನೀಡಿದ ಸೇವೆ ಅನನ್ಯವಾಗಿದೆ. ಜ್ಞಾನ ಮಂದಾರ ಟ್ರಸ್ಟ್ ವತಿಯಿಂದ ರವೀಂದ್ರ ಶೆಟ್ಟಿಯವರ ಸೇವೆಯನ್ನು ಗುರುತಿಸಿ ಬಸವಶ್ರೀ, ಸಮಾಜರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. 2006ರಲ್ಲಿ ಆಮೇರಿಕದ ಅಕ್ಕ ಸಮ್ಮೇಳನದಲ್ಲಿ ನಮ್ಮ ಜ್ಞಾನ ಮಂದಾರ ಅಕಾಡೆಮಿಗೆ ರೂ.1.25 ಲಕ್ಷ ನಗದು ನೀಡಿ ಪುರಸ್ಕರಿಸಿದ ಗೌರವಕ್ಕೆ ಪಾತ್ರವಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲುರವರ ಪತ್ನಿ, ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here