ಕಾಂಗ್ರೆಸ್ ತಂತ್ರಗಾರಿಕೆಯನ್ನು ನಕಲು ಮಾಡುತ್ತಿರುವ ಮೋದಿ – ಪಂಚ ರಾಜ್ಯ ಚುನಾವಣೆಯಲ್ಲಿ ಮೋದಿ ಕೀ ಗ್ಯಾರೆಂಟಿ – ಅಮಳ ರಾಮಚಂದ್ರ

0

ಪುತ್ತೂರು: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕದ ಕಾಂಗ್ರೆಸ್‌ನ 5 ಗ್ಯಾರೆಂಟಿಗಳು ಘೊಷಣೆಯಾದಾಗ ಸಿದ್ಧರಾಮಯ್ಯ ಅವರನ್ನು ಗುರಿಯಾಗಿಸಿ ಲೇವಡಿ ಮಾಡಿದರು. ಆದರೆ ಇವತ್ತು ಮೋದಿಯವರು ಪಂಚರಾಜ್ಯ ಚುನಾವಣೆಯಲ್ಲಿ ಅಲ್ಲಿ ಮತ್ತೆ ಮೋದಿ ಕೀ ಗ್ಯಾರೆಂಟಿ ಜಾರಿ ಮಾಡುವ ಮೂಲಕ ಕಾಂಗ್ರೆಸ್‌ನ ತಂತ್ರಗಾರಿಕೆಯನ್ನು ಇನ್ನೊಂದು ರೀತಿಯಲ್ಲಿ ನಕಲು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರೆಂಟಿ ದೇಶದ ಪ್ರಧಾನಿಯವರ ದಿಗಿಲು ಮುಟ್ಟಿದೆ. ಬಿಜೆಪಿಯವರು ಏನು ಹೇಳಿದರೂ ಕಾಂಗ್ರೆಸ್ಸನ್ನೇ ಪಾಲೋ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಯೋಜನೆಗಳನ್ನು ಹೆಸರು ಬದಲಾಯಿಸಿಕೊಂಡು ಇನ್ನೊಂದು ಹೆಸರಿನಲ್ಲಿ ಮುಂದುವರಿಸುತ್ತಾರೆ. ಪಂಚರಾಜ್ಯದಲ್ಲಿ ಸೋಲಿನ ಭೀತಿಯಲ್ಲಿರುವ ಬಿಜೆಪಿ ಕಾಂಗ್ರೆಸ್‌ನ್ನು ನಕಲು ಮಾಡುತ್ತಾರೆ. ಈ ನಿಟ್ಟಿನಲ್ಲಿ ಮೋದಿಯವರು ಆರಂಭದಲ್ಲಿ ಹೇಳುತ್ತಿದ್ದ ಗ್ಯಾರೆಂಟಿ ವಿರುದ್ಧದ ಮಾತಿಗೆ ಇವತ್ತು ಬೆಲೆ ಇಲ್ಲದಂತಾಗಿದೆ ಎಂದರು.


ಬಿಜೆಪಿಯಿಂದ ಹೊಸ ಗಿನ್ನಿಸ್ ದಾಖಲೆ:
ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆರ್ ಅಶೋಕ್ ಅವರು ನ.17ರಂದು ಆಯ್ಕೆಗೊಂಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತಾ ಅವರ ಕಾಲದಲ್ಲಿ ಜನರ ಪ್ರಶ್ನೆಗಳನ್ನು ಸಮರ್ಥವಾಗಿ ವಿಧಾನಸಭೆಯಲ್ಲಿ ಎತ್ತಿ ಆಡಳಿತ ಪಕ್ಷಕ್ಕೆ ಸಹಕಾರ ನೀಡುವಂತೆ ಹಾರೈಸುತ್ತೇವೆ ಎಂದ ಅಮಳ ರಾಮಚಂದ್ರ ಅವರು ಕನಕಪುರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಡೆಪೋಸಿಟ್ ಕಳೆದು ಕೊಂಡು ಸೋತ ಆರ್ ಅಶೋಕ್ ಅವರನ್ನು ಇವತ್ತು ಬಿಜೆಪಿ ಆಯ್ಕೆ ಮಾಡಿದೆ. 6 ತಿಂಗಳು 9 ದಿವಸದ ನಂತರ ವಿರೋಧ ಪಕ್ಷದ ನಾಯಕರ ಆಯ್ಕೆಯಾಗಿದೆ. ಈ ನಿಟ್ಟಿನಲ್ಲಿ ಒಂದು ವಿಧಾನಸಭೆ ಅಧಿವೇಶನವನ್ನು ವಿರೋಧ ಪಕ್ಷದ ನಾಯಕರಿಲ್ಲದೆ ಎದುರಿಸಿದ ಬಿಜೆಪಿ ಹೊಸ ಗಿನ್ನಿಸ್ ದಾಖಲೆ ಮಾಡಿದೆ ಎಂದರು.

ಬಾಯಲ್ಲಿ ಬಂದ ಹಾಗೆ ಮಾತನಾಡುವ ಬಿಜೆಪಿ, ಜೆಡಿಎಸ್:

ಕಾಂಗ್ರೆಸ್ ಪಕ್ಷ ಅಧಿಕಾರ ಬಂದ ಐದೇ ದಿನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದೇ ಸಮನೆ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಮಾತಿನ ದಾಳಿ ಮಾಡುತ್ತಿದ್ದರು. ಆದರೆ ಇವತ್ತು ಬಿಜೆಪಿ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಎಷ್ಟು ಸಮಯ ತೆಗೆದು ಕೊಂಡಿದ್ದಾರೆ ಎಂದು ಅವರೇ ಪ್ರಶ್ನೆ ಮಾಡಿಕೊಳ್ಳಬೇಕು. ಬಿಜೆಪಿ ಇವತ್ತು ಗೊತ್ತುಗುರಿಯಿಲ್ಲದ ಪಕ್ಷವಾಗಿದೆ. ಬಾಯಲ್ಲಿ ಬಂದ ಹಾಗೆ ಮಾತನಾಡುತ್ತಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನ್ನು ರಾಜ್ಯದ ಜನ ತಿರಸ್ಕರಿಸಿದ್ದರು. 40 ಪರ್ಸಂಟ್ ಭ್ರಷ್ಟಾಚಾರದ ಆರೋಪ ಬಿಜೆಪಿಯ ಮೇಲಿತ್ತು. ಹಾಗಾಗಿ ಅವರು ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು. ಇದರಿಂದ ಭ್ರಮನಿರಸನಗೊಂಡು ಏನು ಮಾತನಾಡುತ್ತೇನೆಂದು ಗಣನೆಗೆ ತೆಗೆದು ಕೊಳ್ಳದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಯಾವುದೇ ಆಡಳಿತ ಪಕ್ಷಕ್ಕೆ ಸುರುವಿನ ಒಂದು ವರ್ಷ ಪ್ರೀ ಹ್ಯಾಂಡ್ ಕೊಡಬೇಕು. ಆದರೆ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲನೇ ದಿನವೇ ಮಾತಿನ ದಾಳಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಇದಕ್ಕೆ ಕುಗ್ಗದೆ ಗ್ಯಾರೆಂಟಿಯನ್ನು ಜಾರಿಗೊಳಿಸಿದೆ. ಗ್ಯಾರೆಂಟಿಯನ್ನು ಮೊದಲು ಸುಳ್ಳು, ರಾಜ್ಯ ದಿವಾಳಿ ಆಗುತ್ತದೆ. ಕರ್ನಾಟಕ ಶ್ರೀಲಂಕಾ, ಪಾಕಿಸ್ತಾನ ಆಗುತ್ತದೆ ಎಂದು ಹೇಳುತ್ತಿದ್ದವರು, ಗ್ಯಾರೆಂಟಿ ಖಚಿತವಾದಾಗ ಅದು ಸರಿಯಿಲ್ಲ ಎಂದು ಹೇಳುತ್ತಿದ್ದಾರೆ. ಬಿಜೆಪಿ 40 ಪರ್ಸೆಂಟ್ ಭ್ರಷ್ಟಾಚಾರಲ್ಲಿ ಆರೋಪ ಎದುರಿಸುತ್ತಿದೆ. ಅದಕ್ಕೆ ಕಾಂಗ್ರೆಸ್ ಮೇಲೆ 60 ಪರ್ಸಂಟ್ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಪುತ್ತೂರಿನ ಇರ್ದೆಯಲ್ಲೇ 40 ಪರ್ಸಂಟೇಜ್ ಕಾಮಗಾರಿ ನಡೆದಿರುವುದು ಸುದ್ದಿ ಚಾನೆಲ್‌ನಲ್ಲಿ ಬಂದಿದೆ. ದುಡ್ಡು ಹೊಡೆಯುವ ಕಾರಣಕ್ಕೆ ಕಾಮಗಾರಿ ಮಾಡಿದ್ದಾರೆ ಹೊರತು ಆ ಕಾಮಗಾರಿಯಿಂದ ಯಾರಿಗೂ ಪ್ರಯೋಜನ ಆಗುತ್ತಿಲ್ಲ. ಇವತ್ತು ಕಾಂಗ್ರೆಸ್ ಮೇಲೆ ಅಧಿಕಾರಿಗಳ ವರ್ಗಾವಣೆ, ಶಾಸಕರು ಅನುದಾನ ಕೊಡುತ್ತಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ಯಾವುದೇ ಸರಕಾರ ಬಂದ ಬಳಿಕ ಶಾಸಕರ ಅನುದಾನ ಬಿಡುಗಡೆಯಾಲು ಒಂದಷ್ಟು ಸಮಯ ತೆಗೆದು ಕೊಳ್ಳುತ್ತದೆ ಎಂಬುದು ಆರೋಪ ಮಾಡುವವರಿಗೆ ತಿಳಿದಿರಬೇಕೆಂದ ಅಮಳ ರಾಮಚಂದ್ರ ಅವರು ಒಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸುಳ್ಳಿನ ಸಂತೆಯಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಶಕೂರ್ ಹಾಜಿ, ಉಪಾಧ್ಯಕ್ಷ ಮೌರೀಶ್ ಮಸ್ಕರೇನಸ್, ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ನೆಕ್ಕಿಲು, ಹಿಂದುಳಿದ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here