ಮರೀಲ್ ಇ.ಎಸ್.ಆರ್ ಪ್ರೆಸಿಡೆನ್ಸಿ ವಿದ್ಯಾ ಸಂಸ್ಥೆಯಲ್ಲಿ ಮೇಳೈಸಿದ ವಿಜ್ಞಾನ ವಸ್ತು ಪ್ರದರ್ಶನ, ವ್ಯಾಪಾರ ಮೇಳ

0

ಪುತ್ತೂರು: ಮರೀಲ್‌ನಲ್ಲಿರುವ ಇ.ಎಸ್.ಆರ್ ಪ್ರೆಸಿಡೆನ್ಸಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವ್ಯಾಪಾರ ಮೇಳ ನ.16ರಂದು ನಡೆಯಿತು. ವಿದ್ಯಾಸಂಸ್ಥೆಯ ಸಂಚಾಲಕ ಝಾಕಿರ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿ ನಾಯಕರು ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಮಕ್ಸೂದ್‌ರವರು ಉದ್ಘಾಟಿಸಿದರು.
Earth, Mars, Jupirer ಎಂಬ ಮೂರು ತಂಡದ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವ್ಯಾಪಾರ ಮೇಳವನ್ನು ಹಮ್ಮಿಕೊಳ್ಳಲಾಯಿತು. ಜ್ಞಾನದೊಂದಿಗೆ ವಿಜ್ಞಾನವನ್ನು ಪರಿಚಯಿಸಿ ಅದರಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ಆಸಕ್ತಿ ಬರುವಂತೆ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಕ್ಕಳು ಮಾಡಿದ ವಿಜ್ಞಾನ ಮಾದರಿಯನ್ನು ಅತಿಥಿಗಳಿಗೆ ವಿವರಿಸಲಾಯಿತು.
ವ್ಯವಹಾರಿಕ ಜ್ಞಾನವನ್ನು ಮೂಡಿಸುವ ಉದ್ದೇಶದಿಂದ ಮಕ್ಕಳು ತಾವು ತಂದ ವಸ್ತುಗಳನ್ನು ಬಹಳ ಉತ್ಸಾಹದಿಂದ ವ್ಯಾಪಾರ ಮಾಡಿ ಸಂತೋಷ ಪಟ್ಟರು. ಸ್ಪರ್ಧೆಯಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಪೋಷಕರು ಹಾಗೂ ರಕ್ಷಕ ಶಿಕ್ಷಕ ಸಂಘದ ಸದಸ್ಯರು ಆಗಿರುವ ಶೈಭಾ, ಝರಿನಾ, ಮತ್ತು ಸುನೈನ ತೀರ್ಪುಗಾರರಾಗಿ ಭಾಗವಹಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಝಾಕಿರ್ ಹುಸೇನ್ ಮಾತನಾಡಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ವಿಜ್ಞಾನದ ಮಾದರಿಗಳನ್ನು ಮಾಡಿಸುವುದರ ಮೂಲಕ ಮಕ್ಕಳಿಗೆ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿಯು ಮೂಡುವಂತೆ ಮಾಡಬೇಕು ಎಂದು ಹೇಳಿ ಶುಭ ಹಾರೈಸಿದರು. ಶಿಕ್ಷಕ ರಕ್ಷಕ ಸಂಘದ ಸದಸ್ಯ ಹಮೀದ್‌ರವರು ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.

ಶಾಲಾ ಮುಖ್ಯ ಶಿಕ್ಷಕಿ ತಾಜುನ್ನಿಸಾರವರು ಅತಿಥಿಗಳಿಗೆ ನೆಹರು ಟೋಪಿ ನೀಡುವುದರ ಮೂಲಕ ಸ್ವಾಗತಿಸಿ ಮಾತನಾಡಿ ಮಕ್ಕಳು ದೇಶದ ಕನಸು, ಅವರನ್ನು ಹೂವಿನಂತೆ ಪ್ರೀತಿಸಿ ಆರೈಕೆ ಮಾಡಬೇಕು, ಅಂತಹ ಮಕ್ಕಳು ಭಾವಿ ವಿಜ್ಞಾನಿಗಳಾಗುವರು ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.

ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸಿರಾಜ್ ಕೆ ಎ ರವರು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅವರ ಪರವಾಗಿ ಬಹುಮಾನ ನೀಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸಿರಾಜ್ ಕೆ ಎ, ಉಪಾಧ್ಯಕ್ಷೆ ಶಾಹಿದ, ಹಾಗೂ ಶಾಲಾ ನಾಯಕರುಗಳಾದ ಝೀಶಾನ್ ಇಬ್ರಾಹಿಂ ಮತ್ತು ಮಹಮ್ಮದ್ ಹಸನ್ ಫಹ್ಮಾನ್ ಉಪಸ್ಥಿತರಿದ್ದರು. ನಮ್ಮ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ವಿ.ಕೆ ಶರೀಫ್ ವಂದಿಸಿದರು. ಶಿಕ್ಷಕಿ ಸುಶಾಂತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಸಹಕರಿಸಿದರು. ರಕ್ಷಕ ಶಿಕ್ಷಕ ಸಂಘದ ಸದಸ್ಯರು ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here