ಅಧ್ಯಕ್ಷೆ: ಕತೀಜಮ್ಮ, ಉಪಾಧ್ಯಕ್ಷೆ: ನಳಿನಿ ಎಂ
ಪುತ್ತೂರು: ಕೆದಂಬಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಅಧ್ಯಕ್ಷೆಯಾಗಿ ಕತೀಜಮ್ಮ ಹಾಗೂ ಉಪಾಧ್ಯಕ್ಷೆಯಾಗಿ ನಳಿನಿ ಎಂ.ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿದ್ದ ರಿಟರ್ನಿಂಗ್ ಅಧೀಕಾರಿ ಶೋಭಾ ಎನ್.ಎಸ್ರವರು ನ.21 ರಂದು ಈ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಆಡಳಿತ ಮಂಡಳಿಗೆ 9 ಮಂದಿ ಸಾಮಾನ್ಯ ಹಾಗೂ ಓರ್ವ ಸದಸ್ಯೆ ಪರಿಶಿಷ್ಠ ಪಂಗಡ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಲೀಲಾವತಿ, ವಸಂತಿ, ಜಲಜಾ, ಮೀರಾ ಎಸ್, ಸವಿತಾ, ಕವಿತಾ, ವೀಣಾ ಬಲ್ಲಾಳ್, ಲತಾಂಗಿ ರೈ ಆಯ್ಕೆಯಾಗಿದ್ದಾರೆ. ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಖಾ ಎ.ರೈ, ಸಹಾಯಕಿ ಲಲಿತಾ ಸಹಕರಿಸಿದ್ದರು.