ಕಾಣಿಯೂರು: ಕೆಯ್ಯೂರ್ ಕೆಪಿಎಸ್ ಶಾಲೆಯಲ್ಲಿ ನ.20, 21ರಂದು ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗ ಮತ್ತು ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯು ಹಲವು ಬಹುಮಾನಗಳನ್ನು ಪಡೆದುಕೊಂಡಿದೆ. ಹಿರಿಯ ಪ್ರಾಥಮಿಕ ವಿಭಾಗದಲ್ಲಿ
ವಿದ್ಯಾರ್ಥಿನಿ ಅಸ್ಮಿ ರೈ ಕೆ ಪಿ (6) ಛದ್ಮವೇಷದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಸುಳ್ಯ ತಾಲೂಕಿನ ಎಣ್ಮೂರು ಪಟ್ಟೆ ಸುಜಿತ್ ರೈ ಮತ್ತು ಸಂಸ್ಥೆಯ ಶಿಕ್ಷಕಿ ಅನಿತಾ ಎಸ್ ರೈ ದಂಪತಿಗಳ ಪುತ್ರಿ.
ಧನುಷ್ ಕೆ (5) ಲಘು ಸಂಗೀತದಲ್ಲಿ ದ್ವಿತೀಯ ಸ್ಥಾನ ಮತ್ತು ಸಂಸ್ಕೃತ ಧಾರ್ಮಿಕ ಪಠಣದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಪ್ರೌಢಶಾಲಾ ವಿಭಾಗದಲ್ಲಿ ರಂಜನ್ ವಿ (10) ಸಂಸ್ಕೃತ ಧಾರ್ಮಿಕ ಪಠಣ ದ್ವಿತೀಯ, ಮಾನ್ವಿ ಜಿ ಎಸ್ (9) ತುಳು ಭಾಷಣ ದ್ವಿತೀಯ , ವಿಜ್ಞಾತ್ರಿ (8) ಚರ್ಚಾ ಸ್ಪರ್ಧೆ ದ್ವಿತೀಯ, ಮತ್ತು ಜನಪದ ನೃತ್ಯದಲ್ಲಿ ನನ್ಮಯಿ ಎಂ (10) ನೇಹಾಶ್ರೀ ಎ ಎಸ್ (10) ವೈಶಾಲಿ ಬಿ ಕೆ (9) ಹನ್ಸಿಕಾ (9) ನಿಶ್ಮಿತಾ ಕೆ (9) ರಿತಿಕಾ ರೈ (8) ಶ್ರೇಯಸ್ ರೈ (10) ಪ್ರಖ್ಯಾತ್ ಎನ್ ಸಿ (10 ) ತೃತೀಯ ಸ್ಥಾನವನ್ನು ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.
ಸಾಧಕ ವಿದ್ಯಾರ್ಥಿಗಳನ್ನು ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ರೈ ನುಳಿಯಾಲು , ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಕೆ ಎಂ ಬಿ , ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಶಾಲಾ ಮುಖ್ಯಗುರು ಸರಸ್ವತಿ ಎಂ ಮತ್ತು ಎಲ್ಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ಅಭಿನಂದಿಸಿದರು.