ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿಗೆ ಸೌದಿ ಅರೇಬಿಯಾ ಎಂ ಎಚ್ ಕೆ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಫಾರೂಕ್ ಹಾಜಿ ಕನ್ಯಾನ ಮತ್ತು ಪ್ರಮುಖರಾದ ಎಂ ಬಿ ಮದನಿ ಜಾಲ್ಸೂರು ಭೇಟಿ ನೀಡಿದರು.
ಈ ವೇಳೆ ಫಾರೂಕ್ ಹಾಜಿ ಕನ್ಯಾನ ಮಾತನಾಡಿ, ಶುದ್ದ ಹೃದಯ, ತೆರೆದ ಮನಸ್ಸು ಎಲ್ಲಿರುತ್ತದೋ ಅಲ್ಲಿ ಯಶಸ್ಸು ವಿಜ್ರಂಭಿಸುತ್ತದೆ. ಪ್ರತೀ ಹಂತದಲ್ಲೂ ಜಾಗರೂಕ ನಡೆ, ಚಿಂತನೆಯ ಹೆಜ್ಜೆ ನಮ್ಮನ್ನು ಎತ್ತರಕ್ಕೇರಿಸುತ್ತದೆ. ಈ ನಿಟ್ಟಿನಲ್ಲಿ ನೂತನ ಸಮಿತಿ ಸಮರ್ಥ ಸಾಧನೆಯ ಮೈಲುಗಲ್ಲಾಗಲಿ ಎಂದು ಶುಭ ಹಾರೈಸಿದರು. ಬಳಿಕ ಕ್ಯಾಂಪಸ್ ವೀಕ್ಷಿಸಿದ ಅವರು ನೂತನ ಸಮಿತಿಯ ಅವಧಿಯಲ್ಲಾದ ಬೆಳವಣಿಗೆ ಕುರಿತು ಸಂತಸ ವ್ಯಕ್ತಪಡಿಸಿದರು.
ಆಡಳಿತ ಮಂಡಳಿ ವತಿಯಿಂದ ಅತಿಥಿಗಳನ್ನು ಗೌರವಿಸಲಾಯಿತು. ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂಎಸ್ಎಂ ಅಬ್ದುಲ್ ರಶೀದ್ ಝೈನಿ ವಿಷಯ ಮಂಡಿಸಿದರು. ಸಭೆಯಲ್ಲಿ ಕೋಶಾಧಿಕಾರಿ ಯೂಸುಪ್ ಗೌಸಿಯ ಸಾಜ, ಯೂಸುಫ್ ಹಾಜಿ ಕೈಕಾರ, ಕಾರ್ಯದರ್ಶಿಗಳಾದ ರಶೀದ್ ಬಿ ಕೆ, ಯೂಸುಫ್ ಮೈದಾನಿಮೂಲೆ, ಆಶಿಕುದ್ದೀನ್ ಅಖ್ತರ್, ಕರೀಂ ಕಾವೇರಿ, ವ್ಯವಸ್ಥಾಪಕ ಉಮರ್ ಅಮ್ಜದಿ ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಸ್ವಾಗತಿಸಿದರು.