ಹಿರಿಯರ ಕ್ರೀಡಾಕೂಟದಲ್ಲಿ ಕಾವು ಅಬ್ದುಲ್ ಲತಿಫ್ ಸಾಹೇಬ್ ರಾಜ್ಯ ಮಟ್ಟಕ್ಕೆ

0

ಕಾಣಿಯೂರು: ಹಿರಿಯರ ಕ್ರೀಡಾ ಸಂಘ ಪಂಜ, ಪುತ್ತೂರು, ಸುಳ್ಯ, ಕಡಬ ಹಿರಿಯರ ಕ್ರೀಡಾ ಸಂಘದ ಸಂಘಟನಾ ಸಮಿತಿ ವತಿಯಿಂದ ನ 19ರಂದು ಪಂಜದ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನಡೆದ 10ನೇ ಹಿರಿಯರ ಕ್ರೀಡಾಕೂಟದಲ್ಲಿ ಕಾವು ಅಬ್ದುಲ್ ಲತಿಫ್ ಸಾಹೇಬ್ ಅವರು 100 ಮೀ ಓಟದಲ್ಲಿ ಚಿನ್ನ, ಉದ್ದ ಜಿಗಿತದಲ್ಲಿ ಚಿನ್ನ,ಅಡೆ ತಡೆ ಜಿಗಿತದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಜ 14, 15ರಂದು ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಗೂನಡ್ಕ, ಕಾವು, ಮಾಡನ್ನೂರು ಪೆರ್ನಾಜೆಯ ಮತ್ತು ಫಿಲೋಮೀನಾ ಕಾಲೇಜಿನ ಹಳೆ ವಿದ್ಯಾರ್ಥಿ. ಪ್ರಸ್ತುತ ಬೀದಿ ಬೀದಿ ವ್ಯಾಪಾರಿಗಳ ಸಂಘದ ಸದಸ್ಯರಾಗಿದ್ದಾರೆ.

LEAVE A REPLY

Please enter your comment!
Please enter your name here