ಶಾಲಾ ವಠಾರದಲ್ಲಿ ವ್ಯಾಪಾರ ಮಾಡಿ ಖುಷಿಪಟ್ಟ ವಿದ್ಯಾರ್ಥಿಗಳು
ಪುತ್ತೂರು: ಸರ್ವೆ ಕಲ್ಪಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ ನ.24ರಂದು ನಡೆಯಿತು.
ಶಾಲಾ ವಠಾರದಲ್ಲಿ ಮಕ್ಕಳು ಅಂಗಡಿಗಳನ್ನು ಮಾಡಿ ವ್ಯಾಪಾರ ಮಾಡಿದರು. ತರಕಾರಿ ಅಂಗಡಿ, ಜ್ಯೂಸ್ ಶಾಪ್, ಕಲ್ಲಂಗಡಿ, ಕೇಕ್, ಸ್ಟೇಷನರಿ ಸೇರಿದಂತೆ ಮಕ್ಕಳ ಹತ್ತಾರು ಅಂಗಡಿಗಳು ನೋಡುಗರ ಗಮನ ಸೆಳೆದವು. ಮಕ್ಕಳ ಪೋಷಕರು, ಊರವರು ಆಗಮಿಸಿ ಮಕ್ಕಳ ಅಂಗಡಿಗಳಿಂದ ವಿವಿಧ ವಸ್ತುಗಳನ್ನು ಖರೀದಿಸುವ ಮೂಲಕ ಮಕ್ಕಳ ವ್ಯಾಪಾರಕ್ಕೆ ಪ್ರೋತ್ಸಾಹ ನೀಡಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ, ಶಾಲಾ ಮುಖ್ಯಗುರು ಕಮಲ, ಮುಂಡೂರು ಗ್ರಾ.ಪಂ ಸದಸ್ಯರಾದ ಕರುಣಾಕರ ಗೌಡ ಎಲಿಯ, ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ಧ.ಗ್ರಾ.ಯೋ.ಸರ್ವೆ ಎ ಒಕ್ಕೂಟದ ಅಧ್ಯಕ್ಷ ಸುಂದರ ಬಲ್ಯಾಯ ನೆಕ್ಕಿಲು, ಕಲ್ಪಣೆ ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ಪೋಷಕರು, ಊರವರು ಉಪಸ್ಥಿತರಿದ್ದರು.