ಆಲಂಕಾರು: ಮುಖ್ಯಗುರುಗಳಾಗಿದ್ದ ಜನಾರ್ದನ ಗೌಡ.ಕೆ ರವರ ಶ್ರದ್ದಾಂಜಲಿ ಸಭೆ

0

ಆಲಂಕಾರು: ಕಡಬ ತಾಲೂಕಿನ ಕೊಯಿಲ ಗ್ರಾಮದ ಗಂಡಿಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರು ಆಲಂಕಾರು ಗ್ರಾಮದ ತಿರ್ತಜಾಲಿನ ಜನಾರ್ದನ ಗೌಡ.ಕೆಯವರ ಶ್ರದ್ಧಾಂಜಲಿ ಸಭೆಯು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನ ದಯಾಳು ರೈತ ಸಭಾಭವನದಲ್ಲಿ ನ.24 ರಂದು ನಡೆಯಿತು.

ಕಡಬ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ನುಡಿನಮನ ಸಲ್ಲಿಸಿಜನಾರ್ದನ ಗೌಡ .ಕೆಯವರು 1994 ಶಿಕ್ಷಕ ವೃತ್ತಿಯನ್ನು ಆರಂಭಿಸಿ ಬಳಿಕ ರಾಮಕುಂಜ ಗ್ರಾಮದ ಕುಂಡಾಜೆ, ಶಿರಾಡಿ ಗ್ರಾಮದ ಕಳಪ್ಪಾರು, ಪೆರಾಬೆ ಗ್ರಾಮದ ಇಡಾಳ, ಆಲಂಕಾರು ಸರಕಾರಿ ಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ಆಲಂಕಾರು ಶಾಲೆಯಲ್ಲಿ ಸಹಶಿಕ್ಷಕರಾಗಿದ್ದ ವೇಳೆ ಮುಖ್ಯಶಿಕ್ಷಕರಾಗಿ ಬಡ್ತಿಪಡೆದು ನಂತರ ಕೊಯಿಲ ಗ್ರಾಮದ ಗಂಡಿಬಾಗಿಲು ಶಾಲೆಯಲ್ಲಿ ಮುಖ್ಯಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದವರು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ವನ್ನು ಹೊಂದಿದವರು.ಈ ಭೂಮಿಯಲ್ಲಿ ಯಾರುಕೂಡ ಶಾಶ್ವತವಾಗಿ ಬದುಕಲು ಸಾಧ್ಯವಿಲ್ಲ. ಎಲ್ಲಾರು ಒಂದಲ್ಲ ಒಂದು ದಿವಸ ಸಾವನ್ನಪ್ಪಿಕೊಳ್ಳಲೇಬೇಕು. ಜನಾರ್ಧನರವರು ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಬದುಕಬೇಕೆಂದು ತಿಳಿಸುತ್ತಿದ್ದರು ಅವರ ಅಕಾಲಿಕ ಮರಣ ಎಲ್ಲರಿಗೂ ಬೇಸರ ಹಾಗು ದು:ಖವನ್ನು ತಂದಿದೆ.ಶರಣರ ಗುಣವನ್ನು ಮರಣದಲ್ಲಿ ಕಾಣು ಎಂಬ ಗಾದೆಯಂತೆ ಅವರ ಅಕಾಲಿಕ ಮರಣದ ಸಂಧರ್ಭದಲ್ಲಿ ಅವರ ಮನೆಯಲ್ಲಿ ಜಾತಿ,ಮತ ಬೇಧಬಾವ ಮರೆತು ಸೇರಿದ ಜನರೇ ಸಾಕ್ಷಿಯೆಂದು ತಿಳಿಸಿ ಜನಾರ್ಧನ ಗೌಡರವರ ಆಗಲಿದ ಅತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲೆಂದು ಪ್ರಾರ್ಥಿಸಿದರು.

ನಿವೃತ್ತ ಉಪನ್ಯಾಸಕರಾದ ಗುಡ್ಡಪ್ಪ ಬಲ್ಯರವರು ನುಡಿನಮನ ಸಲ್ಲಿಸಿ ಜನಾರ್ದನ ಗೌಡ .ಕೆ ಯವರು 1964 ರಲ್ಲಿ ಜನಿಸಿ, 1994 ರಲ್ಲಿ ಶಿಕ್ಷಕ ವೃತ್ತಿಗೆ ಸೇರಿದವರು ಅವರು ಜೀವನದಲ್ಲಿ ಒಬ್ಬ ಪರೋಪಕಾರಿ ವ್ಯಕ್ತಿಯಾಗಿ ಸಂಘಟಕರಾಗಿ,ಮಾರ್ಗದರ್ಶಕರಾಗಿ ಕೆಲಸ ಕಾರ್ಯವನ್ನು ನಿರ್ವಹಿಸಿದವರು.ಒಬ್ಬ ಕಬಡ್ಡಿ,ವಾಲಿಬಾಲ್ ಆಟಗಾರನಾಗಿ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡಿದವರು. ಶಿಕ್ಷಕರನ್ನು ಮನೆಯ ಸದಸ್ಯರಂತೆ ನೋಡಿಕೊಂಡವರು ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಶಾಲೆಯಲ್ಲಿ ಪ್ರೀತಿ , ಅನುಕಂಪ,ಸಹಾನುಭೂತಿ ತೋರಿಸಿದವರು.ಯಕ್ಷಗಾನ ಕಲಾವಿದ ರಂಗಸ್ಥಳದಲ್ಲಿ ಕೊನೆಯುಸಿರೆಳೆದರೆ ಅವರು ಕಲಾದೇವಿಗೆ ಸಮರ್ಪಣೆಯಾದಂತೆ,ಶಿಕ್ಷಕರೊಬ್ಬರು ಸೇವಾವಧಿಯಲ್ಲಿ ಕೊನೆಯುಸಿರೆಳೆದರೆ ಅದು ವಿದ್ಯಾಮಾತೆ,ಸರಸ್ವತಿ ಗೆ ಸಮರ್ಪಣೆಯಾದಂತೆ ಎಂದು ತಿಳಿಸಿ ಅವರ ಅದರ್ಶ ಹಾಗು ಪರೋಪಕಾರ ದ ಗುಣವನ್ನು ಎಲ್ಲಾರೂ ಮೈಗೂಡಿಸಿಕೊಳ್ಳಬೇಕೆಂದು ಎಂದರು.

ಸಭೆಯಲ್ಲಿ ಅಗಲಿದ ಮುಖ್ಯಗುರುಗಳಾದ ಜನಾರ್ದನ ಗೌಡ .ಕೆಯವರ ಅರ್ಧಕ್ಕೆ ಚಿರಶಾಂತಿ ದೊರೆಯಲಿ ಎಂದು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.ಶಿವಪ್ರಸಾದ್ ಚಾರ್ಮಾಡಿ ಯವರು ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.ವೇದಿಕೆಯಲ್ಲಿ ಜನಾರ್ಧನ ಗೌಡ.ಕೆಯವರ ತಾಯಿ ಲಕ್ಷೀ೬ ಕಮ್ಮೆಂಡ, ಪತ್ನಿ ಜಯಮಣಿ,ಮಗ ಚರಣ್ ಕೆ ,ಮಗಳು ಹರ್ಷಿತಾ ಕೆ,ಅಳಿಯ ಭರತ್,ಮಾವ ಪದ್ಮನಾಭ ಗೌಡ ಮತ್ತು ಮಕ್ಕಳು ಪುತ್ತಿಲ, ಚಾರ್ಮಾಡಿ, ಅಣ್ಣ ಬಾಬು ಗೌಡ ಕೆ.,ಅತ್ತಿಗೆ ಪುಷ್ಪಾವತಿ ಹಾಗೂ ಮಕ್ಕಳು, ಕಮ್ಮೆಂಡ ಮನೆ ತಮ್ಮ ಚಂದ್ರಶೇಖರ ಗೌಡ ಕೆ, ನಾದಿನಿ ಜಾನಕಿ ಹಾಗೂ ಮಕ್ಕಳು, ಕೆಮ್ಮಟೆ ಮನೆ, ತಂಗಿ ಭವಾನಿ ಮತ್ತು ಬಾವ ಬಾಲಕೃಷ್ಣ ಗೌಡ ಹಾಗೂ ಮಕ್ಕಳು ಪಾಲೆಚ್ಚಾರು, ತಂಗಿ ಲೀಲಾವತಿ ಬಾವ ದೇವಯ್ಯ ಗೌಡ ಹಾಗೂ ಮಕ್ಕಳುಪನ್ಯಾಡಿ,ಜಯಶ್ರೀ ವೆಂಕಪ್ಪ ಮಂಗಳೂರು, ರೇಷ್ಮಾಬಾಲಾಕೃಷ್ಣಮಂಗಳೂರು ರವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ರಾಜಕೀಯ,ಸಾಮಾಜಿಕ,ಶೈಕ್ಷಣಿಕ, ಮುಖಂಡರು,ಮುಖ್ಯಶಿಕ್ಷಕರು,ಶಿಕಕರು,ಶಿಕ್ಷಕಿಯರು ಸೇರಿದಂತೆ ಜನಾರ್ದನ ಗೌಡ ಕೆಯವರ ಹಿತೈಷಿಗಳು ಕುಟುಂಬ ವರ್ಗದವರು ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here