ಪುತ್ತೂರಿನಲ್ಲಿ ರೆಡಿಮೆಡ್ & ಫ್ಯಾಬ್ರಿಕ್ ಬಟ್ಟೆಗಳ ಮಳಿಗೆ ‘ಮೈ ಡ್ರೆಸ್ ಕೋಡ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ’ ಶುಭಾರಂಭ

0

ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನ ಕೆಳಮಹಡಿಯಲ್ಲಿ ಕಳೆದ ಕೆಲ ವರುಷಗಳಿಂದ ವ್ಯವಹರಿಸುತ್ತಿದ್ದ ಪ್ರಸಿದ್ಧ ಬ್ರ್ಯಾಂಡ್ ಗಳ ವಿನೂತನ ಶೈಲಿಯ ಪುರುಷರ ಸಿದ್ದ ಉಡುಪುಗಳ ಮಳಿಗೆ ‘ಮೈ ಡ್ರೆಸ್ ಕೋಡ್’ ಇದರ ಅಂಗ ಸಂಸ್ಥೆ ರೆಡಿಮೆಡ್ ಹಾಗೂ ಫ್ಯಾಬ್ರಿಕ್ ಬಟ್ಟೆಗಳ ಮಳಿಗೆ ‘ಮೈ ಡ್ರೆಸ್ ಕೋಡ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ’ ನ.24ರಂದು ಪಕ್ಕದ ಕೋಣೆಯಲ್ಲಿ ಆರಂಭಗೊಂಡಿತು.


ಸಂಸ್ಥೆಯನ್ನು ಮಾಲಕರ ತಂದೆ ಸುಭಾಶ್ವಂಧ್ರರವರು ಉದ್ಘಾಟಿಸಿದರು. ಅರ್ಚಕ ವಿ.ಮೂ. ಕೆ. ವೆಂಕಟೇಶ್ ಭಟ್ ವಿಧಿವಿಧಾನ ನೆರವೇರಿಸಿದರು. ಮಾಲಕರ ತಾಯಿ ಸುಶೀಲಮ್ಮ, ಅಣ್ಣ ಹರೀಶ್, ಅತ್ತಿಗೆ ದಿವ್ಯ ಹರೀಶ್, ಪುತ್ರ ಇವಾನ್, ಮಾಲಕರ ಪತ್ನಿ ಕಾವ್ಯ ರಮೇಶ್, ಪುತ್ರ ಕುಶಾಲ್ ಸೇರಿದಂತೆ ಕುಟುಂಬಿಕರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ರಮೇಶ್ ಪುತ್ತೂರು ಅತಿಥಿಗಳನ್ನು ಸ್ವಾಗತಿಸಿದರು.

‘ಮೈ ಡ್ರೆಸ್ ಕೋಡ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ’ದಲ್ಲಿ ಎಲ್ಲಾ ಪ್ರಸಿದ್ಧ ಬ್ರ್ಯಾಂಡ್ ಗಳ ಫ್ಯಾಬ್ರಿಕ್ ಬಟ್ಟೆಗಳು ಲಭ್ಯವಿದ್ದು, ತಮ್ಮಿಷ್ಟದ ಬಟ್ಟೆಗಳನ್ನು ಒಂದು ದಿನದಲ್ಲಿ ಹೊಲಿದುಕೊಡುವ ವ್ಯವಸ್ಥೆಯು ಸಂಸ್ಥೆಯಲ್ಲಿದೆ.
ಮದುವೆ, ಮನೆ ಗೃಹಪ್ರವೇಶಗಳ ಸಹಿತ ಎಲ್ಲಾ ಕಾರ್ಯಕ್ರಮಗಳಿಗೆ ಬೇಕಾಗುವ ಎಲ್ಲಾ ಡ್ರೆಸ್ ಕೋಡಿಂಗ್ ಗಳನ್ನು ಸಂಸ್ಥೆ ಕ್ಲಪ್ತ ಸಮಯದಲ್ಲಿ ಒದಗಿಸುವ ನಿಟ್ಟಿನಲ್ಲಿ‌ಎಲ್ಲಾ‌ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಪ್ಯಾಂಟ್, ಶರ್ಟ್, ಕುರ್ತಾ ಪೈಜಾಮ(ಕುರ್ತ‌ಸೆಟ್) ಜೋದ್ ಪುರಿ, ಶೆರ್ವಾನಿ, ಮೋದಿಕೋಟ್ ಗಳು ಸಹಿತ ಎಲ್ಲಾ ರೀತಿಯ ಪುರುಷರ ಮದುವೆ ಬಟ್ಟೆಗಳನ್ನು ಸ್ಟಿಚಿಂಗ್ ಮಾಡಿಕೊಡುವ ಹಾಗೂ ಎಲ್ಲಾ ರೀತಿಯ ಪುರುಷರ ಮ್ಯಾಚಿಂಗ್ ಡ್ರೆಸ್ ಗಳು ಲಭ್ಯವಿದೆ. ರೈಮಂಡ್, ಸಿಯಾರಾಮ್ಸ್, ಮಿತ್ವ ಲೋಯಲ್, ಅರವಿಂದ್, ಕ್ರಿಪ್ಲಾನ್, ಲೆಗಾಝಿಯಾ ಸೇರಿದಂತೆ ವಿವಿಧ ಬ್ರ್ಯಾಂಡ್ ಗಳ ಬಟ್ಟೆಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ರಮೇಶ್ ಪುತ್ತೂರುರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here