ಅಯೋಧ್ಯೆಯಿಂದ ಪುತ್ತೂರಿಗೆ ಬಂದ ಅಕ್ಷತೆಗೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭವ್ಯ ಸ್ವಾಗತ

0

ಪುತ್ತೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಜ.22 ರಂದು ನಡೆಯಲಿರುವ ಶ್ರೀ ರಾಮನ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ದೇಶಾದ್ಯಂತ ನಡೆಯುವ ಅಕ್ಷತೆ ವಿತರಣಾ ಕಾರ್ಯಕ್ರಮದ ಕುರಿತು ಮನೆ ಮನೆ ಸಂಪರ್ಕ ಅಭಿಯಾನದ ಅಂಗವಾಗಿ ನ.27ರಂದು ಆಯೋಧ್ಯೆಯಿಂದ ಬಂದಿರುವ ಅಕ್ಷತೆಗೆ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭವ್ಯ ಸ್ವಾಗತ ಕಾರ್ಯಕ್ರಮ ನಡೆಯಿತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಕಲಶವನ್ನು ಹೊತ್ತ ಮಹಿಳೆಯರು ಅಕ್ಷತೆಯ ಕಲಶಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಂಡರು. ಅರ್ಚಕ ವೇ ಮೂ ಜಯರಾಮ ಜೋಯಿಷ ಸಹಿತ ವೈದಿಕರು ವೇದ ಮಂತ್ರ ಪಠಣದೊಂದಿಗೆ ದೇವಳಕ್ಕೆ ತರಲಾಯಿತು. ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಅಕ್ಷತೆ ಕಲಶವನ್ನು ದೇವಳಕ್ಕೆ ತಂದು ದೇವಳದ ಒಳಾಂಗಣದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರಿಗೆ ಹಸ್ತಾಂತರಿಸಿದರು. ದೇವಳದ ಒಳಗಾಂಗಣದಲ್ಲಿ ಸುತ್ತು ಬಂದು ಸತ್ಯಧರ್ಮ ನಡೆಯಲ್ಲಿ ಅಕ್ಷತೆ ಇರುವ ಕಲಶವನ್ನು ಇರಿಸಿ ಪ್ರಾರ್ಥನೆ ಮಾಡಲಾಯಿತು. ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅಕ್ಷತೆ ಇರುವ ಕಲಶವನ್ನು ದೇವಳ ಒಳಗೆ ಇರಿಸಿದರು. ಮಧ್ಯಾಹ್ನದ ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.

ಮಾಜಿ ಶಾಸಕರಾದ ಮಲ್ಲಿಕಾಪ್ರಸಾದ್, ಸಂಜೀವ ಮಠಂದೂರು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಿಲ್ಲಾ ಸಮಿತಿ ಸಂಚಾಲಕ ಡಾ.ಕೃಷ್ಣ ಪ್ರಸನ್ನ, ಸಂಯೋಜಕ ರವೀಂದ್ರ ಪಿ, ಟ್ರಸ್ಟ್‌ನ ಸದಸ್ಯರಾದ ಮೋಹನ್‌ದಾಸ್ ಕಾಣಿಯೂರು, ಬೆಟ್ಟ ಜನಾರ್ದನ, ಯುವರಾಜ್ ಪೆರಿಯತ್ತೋಡಿ, ಡಾ. ಎಂ.ಕೆ.ಪ್ರಸಾದ್, ಮುಗೆರೋಡಿ ಬಾಲಕೃಷ್ಣ ರೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮದಾಸ್ ಗೌಡ, ಬಿ.ಐತ್ತಪ್ಪ ನಾಯ್ಕ್, ಡಾ. ಸುಧಾ ಎಸ್ ರಾವ್, ರಾಮಚಂದ್ರ ಕಾಮತ್, ವೀಣಾ ಬಿ.ಕೆ, ಎಸ್.ಅಪ್ಪಯ್ಯ ಮಣಿಯಾಣಿ, ವಿಶ್ವೇಶ್ವರ ಭಟ್ ಬಂಗಾರಡ್ಕ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ, ಕರಾವಳಿ ಅಭಿವೃದ್ಧಿಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಕಾಂತಿಲ, ದಿಶಾ ನಾಮನಿರ್ದೇಶಿತ ಸದಸ್ಯ ರಾಮದಾಸ್ ಹಾರಾಡಿ, ಬನ್ನೂರು ಶ್ರೀ ಶಿವಪಾರ್ವತಿ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವನಾಥ ಕುಲಾಲ್, ವಿಶ್ವಹಿಂದೂ ಪರಿಷತ್‌ನ ಜಿಲ್ಲಾ ಪ್ರಮುಖ್ ಶ್ರೀಧರ್ ತೆಂಕಿಲ, ಬಜರಂಗದಳದ ಹರೀಶ್ ದೋಳ್ಪಾಡಿ, ಹಿಂದು ಜಾಗರಣ ವೇದಿಕೆಯ ಪ್ರಮುಖರಾದ ಅಜಿತ್ ರೈ ಹೊಸಮನೆ, ದಿನೇಶ್ ಪಂಜಿಗ, ಮನೀಶ್ ಬನ್ನೂರು, ಪುರುಷೊತ್ತಮ ಮುಂಗ್ಲಿಮನೆ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಸುರೇಶ್ ಆಳ್ವ, ಸುರೇಶ್ ರೈ, ಹರಿಪ್ರಸಾದ್ ಯಾದವ್, ಅರುಣ್ ವಿಟ್ಲ, ಸಂತೋಷ್ ರೈ ಕೈಕಾರ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಹೆಚ್ ಉದಯ, ಮನೋಹರ್ ಕಲ್ಲಾರೆ. ಮೋಹಿನಿ ದಿವಾಕರ್, ಗೌರಿ ಬನ್ನೂರು, ದೀಕ್ಷಾ ಪೈ, ಮೋಹಿನಿ ವಿಶ್ವನಾಥ್, ಪ್ರೇಮಾ ನಂದಿಲ, ಜಯಂತಿ ನಾಯಕ್, ಜ್ಯೋತಿ ಆರ್ ನಾಯಕ್, ಪ್ರೇಮಲತಾ ರಾವ್, ಶ್ರೀಧರ್ ಪಟ್ಲ, ಜಯಶ್ರೀ ಎಸ್, ಸಚಿನ್ ಶೆಣೈ, ಬನ್ನೂರು ಪಂಚಾಯತ್‌ನ ಶೀನಪ್ಪ ಕುಲಾಲ್, ಜಯ ಸಹಿತ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here