





ಕಡಬ: ಇಲ್ಲಿನ ಮುಳಿಮಜಲು ನಿವಾಸಿ, ಪ್ರಸ್ತುತ ಉಡುಪಿಯ ಕುಂಜಿಬೆಟ್ಟು ಬೈಲಕೆರೆಯಲ್ಲಿ ವಾಸ್ತವ್ಯವಿದ್ದ ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಗೋಪಾಲಕೃಷ್ಣ ಕೋಲ್ಪೆ (82) ಅವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನ. 26 ರಂದು ನಿಧನ ಹೊಂದಿದರು.


ಮೃತರು ಪತ್ನಿ, ಪುತ್ರ ಕಡಬದ ಔಷಧ ಉದ್ಯಮಿ ರಾಜೇಶ್ ಕೋಲ್ಪೆ ಹಾಗೂ ಪುತ್ರಿ ಉಡುಪಿ ನಗರಸಭಾ ಸದಸ್ಯೆ ರಜನಿ ಹೆಬ್ಬಾರ್ ಅವರನ್ನು ಆಗಲಿದ್ದಾರೆ. ಮಂಗಳೂರು, ಗೋವಾ, ಧಾರವಾಡ, ಶಿಕಾರಿಪುರ, ಮೂಡಿಗೆರೆ, ಆಗ್ರಾ ಮುಂತಾದಡೆ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು ಹಾಸನ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ಕಡಬ ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ, ಉಡುಪಿ ಸ್ಥಾನಿಕ ಬ್ರಾಹ್ಮಣ ಮಹಾಮಂಡಲದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅವರು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.














