ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದಿಂದ ಅಶಕ್ತರಿಗೆ ಸಹಾಯಧನ, ಕನ್ನಡಕ ವಿತರಣೆ

0

ಪುತ್ತೂರು: ತಾಲೂಕು ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ವಿಭಾಗ ಮಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸಹಯೋಗದೊಂದಿಗೆ ಉಚಿತ ನೇತ್ರಾ ತಪಾಸಣಾ ಶಿಬಿರದ ಅಂಗವಾಗಿ ಕನ್ನಡಕ್ಕ ಮತ್ತು ಸಂಘಟನೆ ವತಿಯಿಂದ ಆಯ್ದ ಫಲಾನುಭವಿಗಳಿಗೆ ಸಹಾಯ ನಿಧಿ ವಿತರಣಾ ಕಾರ್ಯಕ್ರಮ ನ.26 ರಂದು ಮಜ್ಜಾರಡ್ಕದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಉಪಾಧ್ಯಕ್ಷ ಯತೀಶ್ ಕೋಡಿಯಡ್ಕ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯರಾದ ಸುಬ್ರಮಣ್ಯ ಭಟ್ ಮಜ್ಜಾರಡ್ಕ, ಆಶಾ ಕಾರ್ಯಕರ್ತೆ ಲೀಲಾವತಿ ರೈ ಪನೇಕ್ಕಳ, ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ ಮಯೂರ ಉಪಸ್ಥಿತರಿದ್ದರು. ತುಳು ಲಿಪಿ ಕಲ್ಪದಿ ಶಿಕ್ಷಕಿ, ಜೈ ತುಳುನಾಡ್ ಸಂಘಟನೆಯ ಚಿತ್ರಾಕ್ಷಿ ಟಿ ತೆಗ್ಗು, ಇವರು ತುಳು ಲಿಪಿಯ ಬಗ್ಗೆ ಮಾಹಿತಿ ನೀಡಿ, ಪೋಷಕರಲ್ಲಿ ತಮ್ಮ ಮಕ್ಕಳನ್ನು ತುಳು ಭಾಷೆಯ ಬಗ್ಗೆ ಒಲವು ಮೂಡಿಸಿ ಎಂದು ವಿನಂತಿಸಿದರು. ಸಂಘಟನೆವತಿಯಿಂದ ನಡೆದ ನಡೆದ ಕಣ್ಣಿನ ತಪಾಸಣಾ ಶಿಬಿರದಲ್ಲಿ ಆಯ್ದ 24 ಜನ ಪಲಾನುಭವಿಗಳಿಗೆ ಕನ್ನಡಕ್ಕ ವಿತರಣೆ ಕಾರ್ಯಕ್ರಮವನ್ನು ಕೃಷ್ಣಪ್ಪ ತಿಂಗಳಾಡಿ ನೆರವೇರಿಸಿ ಕೊಟ್ಟರು.


ಸಹಾಯ ನಿಧಿ ವಿತರಣೆ
ಸಂಘಟನೆಯ ಸಕ್ರಿಯ ಕಾರ್ಯಕರ್ತ ಕೀರ್ತನ್ ಇವರ ತಾಯಿ ಯಶೋಧ ಇವರು ಹೃದಯದ ಸಮಸ್ಯೆಯಿಂದ ಬಳಲುತಿದ್ದು, ಅವರಿಗೆ ಸಂಘಟನೆಯ ಸಹಾಯ ನಿಧಿಯಿಂದ ಚೆಕ್ ವಿತರಿಸಲಾಯಿತು. ಸಂಘಟನೆಯ ಗೌರವ ಸಲಹೆಗಾರ ರವಿವರ್ಮ ಕಾರ್ಕಳ ಇವರು ಅನಾರೋಗ್ಯದಿಂದ ಬಳಲುತಿದ್ದು, ಅವರ ಮನೆಗೆ ಹೋಗಿ ಆರೋಗ್ಯ ವಿಚಾರಿಸಿ, ಸಂಘಟನೆಯ ಸಹಾಯ ನಿಧಿಯಿಂದ ಚೆಕ್ ವಿತರಣೆ ಮಾಡಲಾಯಿತು. ಇದಲ್ಲದೆ 6 ನೇ ವರ್ಷದ ಕೆಸರುಡೊಂಜಿ ಕಾರ್ಯಕ್ರಮದ ಅಂಗವಾಗಿ ನಡೆದ ಲಕ್ಕಿಡಿಪ್ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಆದ್ಯ ಆರ್.ಜೆ ಗೋಳ್ತಿಲ ಸ್ವಾಗತಿಸಿದರು. ಸಂಘಟನೆಯ ಕಾರ್ಯದರ್ಶಿ ರಾಜೇಶ್ ಕೆ ಮಯೂರ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here