ಪುತ್ತೂರು: ನಿರಂತರ ಯೋಗ ಕೇಂದ್ರ ಪುತ್ತೂರು ತಾಲೂಕು ಇದರ ಯೋಗ ಪಟು ಮೇಘನಾ ರೈ, ಪರಿವೃತ್ತ ಪದ್ಮಸಾನದಲ್ಲಿ 01 ಗಂಟೆ 08 ನಿಮಿಷ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ.
ಪುತ್ತೂರಿನ ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿಯಾಗಿರುವ ಮೇಘನಾ ರೈ, ಪುತ್ತೂರು ಕಂಬಳ ಕೊಡಿ ವಿಜಯ ಕುಮಾರ್ ರೈ ಮತ್ತು ಸಂಧ್ಯಾ. ಕೆ. ಆರ್ ಅವರು ಪುತ್ರಿಯಾಗಿದ್ದಾರೆ. ಈಕೆ ಯೋಗ ಗುರು ಶರತ್ ಮರ್ಗಿಲಡ್ಕ ಅವರ ಶಿಷ್ಯೆ.