ಬೆಳ್ತಂಗಡಿ ಧರ್ಮಪ್ರಾಂತ್ಯ ರಜತ ಮಹೋತ್ಸವ ಕ್ರೀಡಾ ಸಂಭ್ರಮ

0

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ರಜತ ಮಹೋತ್ಸವದ ಅಂಗವಾಗಿ ಪ್ರಾಂತಿಯ ಮಟ್ಟದ ಹಗ್ಗಜಗ್ಗಾಟ ಹಾಗೂ ವಾಲಿಬಾಲ್ ಪಂದ್ಯಾಟ ನ.26ರಂದು ಬೆಳ್ತಂಗಡಿಯಲ್ಲಿ ನಡೆಯಿತು.

ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಿವಿಧ ಚರ್ಚ್‌ಗಳ ಸುಮಾರು 42 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದರು.


ಹಗ್ಗಜಗ್ಗಾಟದ ಪ್ರಶಸ್ತಿ ಸುತ್ತಿನಲ್ಲಿ ಬಲಿಷ್ಠ ಮುದೂರು ಸೈಂಟ್ ಮೇರಿಸ್ ತಂಡವು ಕಾಯರ್ತಡ್ಕ ಸೈಂಟ್ ಸೆಬಾಸ್ಟಿಯನ್ ತಂಡವನ್ನು ಮಣಿಸಿ ಪ್ರಶಸ್ತಿ ಪಡೆದುಕೊಂಡಿತು. ತೃತೀಯ ಸ್ಥಾನ ಬಟ್ಟಿಯಾಲ್ ತಂಡ ಪಡೆದುಕೊಂಡಿತು. ಮಹಿಳಾ ವಿಭಾಗದಲ್ಲಿ ತೊಟ್ಟತ್ತಾಡಿ ಪ್ರಥಮ, ಬಟ್ಟಿಯಾಲ್ ದ್ವಿತೀಯ ಹಾಗೂ ಕೊಡಗಿನ ಸೈಂಟ್ ಜೂಡ್ ಹೆಗ್ಗಳ ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ವಾಲಿಬಾಲ್ ಪಂದ್ಯಾಟದಲ್ಲಿ ಸೈಂಟ್ ಆಂಟಿನಿ ತೊಟ್ಟತಾಡಿ ಪ್ರಥಮ, ಸೈಂಟ್ ತೋಮಸ್ ಬಜಗೋಳಿ ದ್ವಿತೀಯ ಹಾಗೂ ಸೈಂಟ್ ಸೆಬಾಸ್ಟಿಯನ್ ಕಾಯರ್ತಡ್ಕ ತೃತೀಯ ಸ್ಥಾನ ಪಡೆದುಕೊಂಡಿತು.
ಪಂದ್ಯಾಟದ ಮಧ್ಯೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಕಾರ್ ಜನರಲ್ ಅತಿ ವಂದನೀಯ ಫಾ. ಜೋಸ್ ವಲಿಯಪರಂಬಿಲ್ ವಹಿಸಿದ್ದರು. ವಂದನೀಯ ಫಾ. ಸಣ್ಣಿ ಆಲಪ್ಪಾತಟ್ಟ್, ಫಾ.ಸೆಬಾಸ್ಟಿಯನ್ ಚೇಲಕ್ಕಾಪಳ್ಳಿ, ಕೆ.ಎಸ್.ಎಂ. ಸಿ.ಎ ಅಧ್ಯಕ್ಷ ಬಿಟ್ಟಿ ನೆಡುನಿಲಂ, ಯುವ ವಿಭಾಗದ ರೋಬಿನ್ ಒಡ೦ಪಲ್ಲಿ, ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಎಂ.ಜೆ, ಪ್ರಶಾಂತ್ ಲಾರೆನ್ಸ್ ಚಿರಮೆಲ್, ಸಹನಶ್ರೀ ಬ್ಯಾಂಕ್‌ನ ರಾಜೇಶ್ ಪುದುಶೇರಿ, ಹರ್ಡಲ್ಸ್ ರಾಷ್ಟ್ರೀಯ ದಾಖಲೆಗಾರ ಹಾಗೂ ಭಾರತೀಯ ರೈಲ್ವೆ ಉದ್ಯೋಗಿ ಯೇಸುದಾಸ್ ಪುದುಮನ, ಕರ್ನಾಟಕ ಪೊಲೀಸ್‌ನ ಜಾರ್ಜ್ ವರ್ಗೀಸ್ ಪಾಲೇಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂದ್ಯಾಟದ ಸಂಯೋಜಕರು, ಕೆಎಸ್‌ಎಂಸಿ ನಿರ್ದೇಶಕರು, ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನ ಧರ್ಮಗುರುಗಳೂ ಆಗಿರುವ ವಂದನಿಯ ಫಾ. ಶಾಜಿ ಮ್ಯಾಥ್ಯುರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಣ್ಣಿ ಮುಟ್ಟತ್, ಜೆಲ್ಸ್, ಅಭಿಲಾಷ್ ವಾಳೂಕಾರನ್, ಜೈಸನ್ ಪಟ್ಟೇರಿ, ಸಿ|ಶರಿನ್ ಎಸ್‌ಎಬಿಎಸ್, ಜೋಬಿನ್ ನೆಲ್ಯಾಡಿ, ನವೀನ್ ಜೋಸೆಫ್ ನೆಲ್ಯಾಡಿ ಮೊದಲಾದವರು. ಸಹಕರಿಸಿದರು.

LEAVE A REPLY

Please enter your comment!
Please enter your name here