ಶಾಸಕರ ಮುತುವರ್ಜಿಯಿಂದ ಮೊದಲ ಬಾರಿಗೆ ಬಾಲವನಕ್ಕೆ ಬಂದ ಅನುದಾನ
ಪುತ್ತೂರು: ಪುತ್ತೂರಿನ ಪರ್ಲಡ್ಕದಲ್ಲಿರುವ ಶಿವರಾಮ ಕಾರಂತರ ಬಾಲವನಕ್ಕೆ ಎಂಆರ್ಪಿಎಲ್ನಿಂದ ರೂ 16.50 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು , ಬಾಲವನಕ್ಕೆ ಹೊರಹಿನ ಸಂಸ್ಥೆಯಿಂದ ಮೊದಲ ಬಾರಿಗೆ ಈ ಅನುದಾನ ಬಂದಿದ್ದು ಶಾಸಕರ ಮುತುವರ್ಜಿಯಿಂದ ಈ ಅನುದಾನ ಬಿಡುಗಡೆಯಾಗಿದೆ.
2010 ರಲ್ಲಿ ಬಾಲವನ ಪ್ರಾರಂಭವಾಗಿದ್ದು ಅಂದಿನಿಂದ ಇಂದಿನ ತನಕ ಇಲ್ಲಿನ ಅಭಿವೃದ್ದಿಗೆ ಸರಕಾರದಿಂದ ಹೊರತುಪಡಿಸಿ ಬೇರೆ ಯವುದೇ ಅನುದಾನ ಬಂದಿರಲಿಲ್ಲ. ಬಾಲವನ ಅಭಿವೃದ್ದಿ ಸಮಿತಿ ಅನೇಕ ವರ್ಷಗಳಿಂದ ಜನಪ್ರತಿನಿಧಿಗಳ ಬಳಿ ಮನವಿ ಮಾಡಿದ್ದರೂ ನಯಾ ಪೈಸೆ ಅನುದಾನ ಬಂದಿರಲಿಲ್ಲ. ಪುತ್ತೂರು ಶಾಸಕರ ಮುತವರ್ಜಿಯಿಂದ ಎಂಆರ್ಪಿಎಲ್ನಿಂದ 16.50 ಲಕ್ಷ ರೂ ಅನುದಾನ ಬಂದಿದ್ದು ಇದನ್ನು ಬಾಲವನ ಅಭಿವೃದ್ದಿಗೆ ಬಳಸಲಾಗುತ್ತದೆ.
ಬಾಲವನದಲ್ಲಿ ಅನೇಕ ಸಣ್ಣಪುಟ್ಟ ಅಭಿವೃದ್ದಿ ಕಾರ್ಯಗಳು ನಡೆಯಬೇಕಾಗಿದ್ದು ಈಜುಕೊಳಕ್ಕೆ ಮೇಲ್ಛಾವಣಿ ಸೇರಿದಂತೆ ಕೆಲವೊಂದು ಕಾಮಗಾರಿಗಳು ನಡೆಯಬೇಕಿದೆ. ಬಾಲವನವನ್ನು ಪುತ್ತೂರಿನ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ದಿ ಮಾಡುವ ಉದ್ದೇಶದಿಂದ ಹೊರಗಿನಿಂದಲೂ ಇಲ್ಲಿಗೆ ಅನುದಾನ ಬರಬೇಕಿದೆ. ಎಂಆರ್ಪಿಎಲ್ ಸಂಸ್ಥೆಗೆ ಮನವಿ ಮಾಡಿದ್ದು ಅವರು 16.50 ಲಕ್ಷ ರೂ ಅನುದಾನ ನೀಡಿದ್ದಾರೆ. ಕಳೆದ 13 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಿಎಸ್ಆರ್ ಫಂಡ್ ಬಂದಿದ್ದು ಮುಂದೆ ಇನ್ನಷ್ಟು ಅನುದಾನವನ್ನು ತರಿಸಿಕೊಳ್ಳುವ ಮೂಲಕ ಬಾಲವನವನ್ನು ಅಭಿವೃಧ್ದಿ ಪಡಿಸಲಾಗುವುದು.
ಅಶೋಕ್ ರೈ, ಶಾಸಕರು, ಪುತ್ತೂರು