ಪುತ್ತೂರು: ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಬೆಟ್ಟಂಪಾಡಿಯಲ್ಲಿ ಮೂರು ಅವಧಿಗಳ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಡಿ.1ರಂದು ನಡೆಯಿತು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದರ್ಖಾಸ್ತು ಸುಳ್ಯ ಇಲ್ಲಿನ ಸಹ ಶಿಕ್ಷಕಿ ಪ್ರೇಮ ಆರ್ ಮಾತನಾಡಿ, ಸಹಪಠ್ಯ ಚಟುವಟಿಕೆಗಳು ಶೈಕ್ಷಣಿಕ ವಿಭಾಗದ ಅವಿಭಾಜ್ಯ ಅಂಗ. ಪಠ್ಯಪುಸ್ತಕವಷ್ಟೇ ಬದುಕಿಗೆ ಸೀಮಿತವಲ್ಲ. ನಾವು ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದು ಇಂದಿನ ದಿನಗಳಲ್ಲಿ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಮಹೇಶ್ ಕೋರ್ಮಂಡ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಅಭಿನಂದಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀರಂಗನಾಥ ರೈ ಗುತ್ತು ಕೋಶಾಧಿಕಾರಿಗಳಾದ ಕರುಣಾಕರ ಶೆಟ್ಟಿ ಕೊಮ್ಮಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನವೋದಯ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಎ ಬ್ಯಾಂಕ್ ನಿಡ್ಪಳ್ಳಿ ಇಲ್ಲಿನ ಸಂದೇಶ್ ಎನ್ ಮಾತನಾಡಿ ಸಹಪಠ್ಯ ಚಟುವಟಿಕೆಗಳಿಗೆ ಅತಿ ಹೆಚ್ಚು ಪ್ರೋತ್ಸಾಹಿಸುವ ಕೆಲವೇ ಕೆಲವು ಶಾಲೆಗಳಲ್ಲಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯು ಒಂದು ಎಂದು ಸಂಸ್ಥೆಯ ಹಿರಿಮೆಯನ್ನು ಬಣ್ಣಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಕಿರಿಯ ಪ್ರಾಥಮಿಕ ಹಾಗೂ ಕೆ.ಜಿ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೇದಿತಾ ಚಿಪ್ಲುಕೋಟೆ ಹಾಗೂ ಸಂಧ್ಯಾ ಸುವರ್ಣ ಸರ್ಕಾರಿ ಪದವಿ ಕಾಲೇಜು ಬೆಟ್ಟಂಪಾಡಿ ಅರವಿಂದ ಭಟ್ ದರ್ಬೆ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಅಭಿನಂದಿಸಿದರು.
ಮುಖ್ಯ ಗುರು ರಾಜೇಶ್ ಎನ್ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರಶಾಂತ್ ಶ್ರೀಮಾನ್ , ರಕ್ಷಿತಾ ಮಾತಾಜಿ, ಗೌತಮಿ ಮಾತಾಜಿ ಸ್ವಾಗತಿಸಿದರು. ಸ್ನೇಹ ಮಾತಾಜಿ, ಕೃತಿಕ ಮಾತಾಜಿ , ಮೋಹಿನಿ ಮಾತಾಜಿ ವಂದಿಸಿದರು. ಕುಮಾರಿ ಪೂರ್ವಿ ಶರಣ್ಯ ಹಾಗೂ ಸಿಂಚನ ಕಾರ್ಯಕ್ರಮ ನಿರೂಪಿಸಿದರು.