ಪುತ್ತೂರು: ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ರಂಗನಾಥ ರೈ ಗುತ್ತು ಅಧ್ಯಕ್ಷತೆಯಲ್ಲಿ ವಾರ್ಷಿಕ ಕ್ರೀಡಾಕೂಟ ನ.25ರಂದು ಬಿಲ್ವಗಿರಿ ಕ್ರೀಡಾಂಗಣದಲ್ಲಿ ನಡೆಯಿತು. ಪುತ್ತೂರು ಆದಿತ್ಯ ಕಂಪ್ಯೂಟರ್ಸ್ ಇದರ ಮಾಲಕ ಆದಿತ್ಯಘಾಟೆ ಧ್ವಜಾರೋಹಣ ಮಾಡಿದರು.
ಪ್ರಾಂತ ಮಟ್ಟದ ಕ್ರೀಡಾಪಟು 8ನೇ ತರಗತಿ ವಿದ್ಯಾರ್ಥಿನಿ ಧನ್ವಿ ಎ.ಎಂ ಪ್ರತಿಜ್ಞಾವಿಧಿ ಬೋಧಿಸಿದರು. ಅಭಿನವಬಿಂದ್ರಾ, ಧ್ಯಾನಚಂದ್, ಪಿ.ವಿ ಸಿಂಧು, ಮಿಥಾಲಿರಾಜ್ ತಂಡಗಳಿಂದ ಅಭೂತಪೂರ್ವ ಪಥಸಂಚಲನ ನಡೆಯಿತು. ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟರಮಣ ಬೋರ್ಕರ್ ಬ್ರಹ್ಮರಗುಂಡ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಕ್ರೀಡೆ ಮನುಷ್ಯನ ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರಭಾವ ಬೀರುತ್ತದೆ ಎಂದು ಮಕ್ಕಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಪೋಷಕ ಕೆ.ಪಿ ಉಷಾ, ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ, ಸುಬ್ಬಣ್ಣ ರೈ ಮೇಗಿನಮನೆ, ಶಾಲಾ ಸಂಚಾಲಕ ಡಾ. ಸತೀಶ್ ರಾವ್ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ರಾಜೇಶ್ ಎನ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ವಂದಿಸಿದರು. ಸಹ ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು. ತದನಂತರದಲ್ಲಿ ವಿವಿಧ ಆಟೋ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ನಡೆಯಿತು. ರಾಷ್ಟ್ರಗೀತೆಯೊಂದಿಗೆ ಕ್ರೀಡಾಕೂಟ ಸಂಪನ್ನಗೊಂಡಿತು.