ಪುತ್ತೂರು: ಮೂಡಬಿದ್ರೆಯಲ್ಲಿ ನಡೆದ INSEF – Regional Science Fairನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಅಭಿನವ್ ಆಚಾರ್ ಕೆ , ಮತ್ತು ಶ್ರೀಜಿತ್ ಸಿ ಎಚ್ ಇವರ ತಂಡ ಪ್ರಸ್ತುತ ಪಡಿಸಿರುವ “Areca fibre briquettes as alternative energy”ಎಂಬ ಮಾದರಿಗೆ ಬೆಳ್ಳಿಯ ಪದಕ, ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಾದ ಆರ್ಯನ್ ಸಿ ಆರ್ ಹಾಗು ದಿಶಾಂತ್ ಕೆ ಇವರ ತಂಡ ಪ್ರಸ್ತುತಪಡಿಸಿರುವ “Road Accident prevention” ಎಂಬ ಮಾದರಿಗೆ ಕಂಚಿನ ಪದಕ ಹಾಗೂ ಗೌತಮ ಕೃಷ್ಣ ಕೆ ಪ್ರಸ್ತುತ ಪಡಿಸಿರುವ “Railway accident prevention” ಎಂಬ ಮಾದರಿಗೆ ಕಂಚಿನ ಪದಕ ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.