ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ – ಪ್ರತಿಯೊಬ್ಬ ನಾಯಕನೂ ಕಾರ್ಯಕರ್ತರ ನೋವಿಗೆ ಸ್ಪಂದಿಸಬೇಕು: ಅಶೋಕ್ ರೈ

0

ಪುತ್ತೂರು: ಕಾರ್ಯಕರ್ತರೇ ಪಕ್ಷದ ಬೆನ್ನೆಲುಬು ಎಂದು ಬಾಯಿಯಲ್ಲಿ ಹೇಳಿದರೆ ಸಾಲದು ಪಕ್ಷದ ವಿವಿಧ ಜವಾಬ್ದಾರಿಯಲ್ಲಿರುವ ಪ್ರತಿಯೊಬ್ಬ ಪದಾಧಿಕಾರಿಯೂ ಕಾರ್ಯಕರ್ತರ ನೋವಿಗೆ ಸ್ಪಂದಿಸಬೇಕು ಮತ್ತು ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಅವರನ್ನು ಸೇರಿಸಿಕೊಳ್ಳಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.



ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿಲ್ಲ ಎಂಬ ಕೊರಗು ಇತ್ತು ಅದನ್ನು ಕಾರ್ಯಕರ್ತರೇ ಹೋಗಲಾಡಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಯಾವುದೇ ಫಲಾಪೇಕ್ಷೆಯಿಲ್ಲದೆ ಆಹೋರಾತ್ರಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ, ಕಾರ್ಯಕರ್ತರ ಶ್ರಮದಿಂದ ನಾನಿಂದು ಶಾಸಕನಾಗಿದ್ದೇನೆ, ನಾನು ಯಾವತ್ತೂ ಕಾರ್ಯಕರ್ತರ ಕಡೆಗಣನೆ ಮಾಡಲಾರೆ ಮತ್ತು ಯಾವ ನಾಯಕರೂ ಕಾರ್ಯಕರ್ತರನ್ನು ಕಡೆಗಣಿಸಬಾರದು ಕಾರ್ಯಕರ್ತರಿಲ್ಲದೇ ಇದ್ದರೆ ಇಲ್ಲಿ ಪಕ್ಷ ಉಳಿಯಲು ಸಾಧ್ಯವಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ನಾನು ಶಾಸಕನಾದ ಬಳಿಕ ಕ್ಷೇತ್ರದಲ್ಲಿ ನಡೆಯುವ ಯಾವುದೇ ಅಭಿವೃದ್ದಿ ಕಾರ್ಯಗಳಿಗೆ ವಲಯಾಧ್ಯಕ್ಷರು, ಬೂತ್ ಅಧ್ಯಕ್ಷರಿಗೆ ತಿಳಿಸಿಯೇ ಕಾಮಗಾರಿ ಗುದ್ದಲಿಪೂಜೆ, ಉದ್ಘಾಟನೆ ಮಾಡುತ್ತಿದ್ದೇನೆ. ವಲಯ, ಬೂತ್ ಅಧ್ಯಕ್ಷರ ಗಮನಕ್ಕೆ ಬಾರದೆ ಯವುದೇ ಕೆಲಸಗಳು ನಡೆಯುವುದಿಲ್ಲ, 94ಸಿ, 94ಸಿಸಿ ಹಾಗೂ ಅಕ್ರಮ ಸಕ್ರಮ ಕಡತಗಳು ವಿಲೇವಾರಿಯಾಗುವಲ್ಲಿಯೂ ಕಾರ್ಯಕರ್ತರ ಸಹಕಾರ ಅತೀ ಅಗತ್ಯವಾಗಿದೆ. ಗ್ರಾಮದ ಅಭಿವೃದ್ದಿ ವಿಚಾರಗಳು ನಮ್ಮ ಕಾರ್ಯಕರ್ತರ ಮೂಲಕವೇ ಗ್ರಾಮಕ್ಕೆ ತಲುಪಿಸುವ ಕೆಲಸವನ್ನು ನಾನು ಮಾಡುತ್ತೇನೆ ಎಂದರು.

ಕಾರ್ಯಕರ್ತರ ನೋವಿಗೆ ತಕ್ಷಣ ಸ್ಪಂದನೆ: ಯಾವುದೇ ಕಾರ್ಯಕರ್ತಗೆ ನೋವಾದರೂ ಅದಕ್ಕೆ ನಾನು ಶಾಸಕನಾಗಿ ತಕ್ಷಣ ಸ್ಪಂದಿಸುವ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ ಶಾಸಕರು ಕಾರ್ಯಕರ್ತರು ಯವುದೇ ಸಮಸ್ಯೆಗಳಿದ್ದರೂ ನನ್ನಲ್ಲಿ ನೇರವಾಗಿ ಹೇಳಬಹುದು ಅಥವಾ ಬ್ಲಾಕ್ ಅಧ್ಯಕ್ಷರು ಅಥವಾ ಪದಾಧಿಕಾರಿಗಳ ಬಳಿ ತಿಳಿಸಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ಎಲ್ಲರೂ ಸೇರಿ ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಬೇಕು. ಮುಂದಿನ ಲೋಕಸಭಾ ಚುನಾವಣೆಗೆ ಈಗಲೇ ತಯಾರು ಮಾಡಿಕೊಳ್ಳಬೇಕು. ಗೃಹಲಕ್ಷ್ಮೀ ಯೋಜನೆ ಸಿಗದೇ ಇರುವ ಕುಟುಂಬವನ್ನು ಭೇಟಿಯಗಿ ಅವರ ಪಟ್ಟಿಯನ್ನು ಕಚೇರಿಗೆ ಕಳುಹಿಸಿ ನಮ್ಮ ಸಿಬ್ಬಂದಿಗಳು ಅದರ ವ್ಯವಸ್ಥೆಯನ್ನು ಮಾಡಲಿದ್ದಾರೆ. ಗ್ರಾಮಗಳಿಗೆ ವಾರದಲ್ಲಿ ಒಂದು ದಿನವಾದರೂ ಭೇಟಿಯಗಿ ಪಕ್ಷದ ಪರ ಪ್ರಚಾರ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದು ಮನವಿ ಮಾಡಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಕಾರ್ಯಕರ್ತರು ಶಕ್ತಿ ಮೀರಿ ದುಡಿಯಬೇಕಾಗಿದೆ- ಎಂ.ಬಿ ವಿಶ್ವನಾಥ ರೈ: ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ರವರು ಮಾತನಾಡಿ, ಲೋಕಸಭಾ ಚುನಾವಣೆಯು ಸಮೀಪಿಸುತ್ತಿದ್ದು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗೆದ್ದು ಬರುವಂತಾಗಲು ಕಾರ್ಯಕರ್ತರು ಶಕ್ತಿಮೀರಿ ದುಡಿಯುವಂತಾಗಬೇಕು ಎಂದು ಹೇಳಿದರು. ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರನ್ನು ಹುರಿದುಂಬಿಸುವ ಕೆಲಸ ಆಗಬೇಕು ಎಂದ ಅವರು ಸಾರ್ವಜನಿಕರ ಹಾಗೂ ಕಾರ್ಯಕರ್ತರ ವಿವಿಧ ಸಮಸ್ಯೆಗಳ ಬಗ್ಗೆ ಶಾಸಕರು ಸ್ಪಂದಿಸಿದ್ದಾರೆ. ಇನ್ನು ಹಲವು ಸಮಸ್ಯೆಗಳು ಇದ್ದು ಅದನ್ನು ಕೂಡ ಶೀಘ್ರದಲ್ಲಿ ಶಾಸಕರು ಬಗೆಹರಿಸಲಿದ್ದಾರೆ ಎಂದು ಅವರು ಹೇಳಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ 13 ಅಕಾಂಕ್ಷಿಗಳಿದ್ದು ಕೊನೆಗೆ ಅಶೋಕ್ ಕುಮಾರ್ ರೈ ರವರಿಗೆ ಟಿಕೆಟ್ ಸಿಕ್ಕಿದ ಬಳಿಕ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರು ಗೆದ್ದು ಬರುವಂತಾಗಿದೆ ಮುಂದೆ ಲೋಕಸಭಾ ಚುನಾವಣೆಯಲ್ಲಿ ಕೂಡ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಕಾರ್ಯಗಳನ್ನು ಮಾಡಿದಾಗ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಬರುವಂತೆ ಆಗಲಿದೆ ಎಂದು ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಜಿಲ್ಲೆಯ ಎಲ್ಲಾ ಬ್ಲಾಕ್‌ಗಳಿಗೆ ಮಾದರಿ ಆಗಿದೆ- ಶಶಿಧರ ಹೆಗಡೆ: ತನ್ನ ಕಾರ್ಯ ಚಟುವಟಿಕೆಗಳ ಮೂಲಕ ಪುತ್ತೂರು ಬ್ಲಾಕ್ ಕಾಂಗ್ರೆಸ್ ಜಿಲ್ಲೆಯ ಎಲ್ಲಾ ಬ್ಲಾಕ್ ಗಳಿಗೆ ಮಾದರಿ ಬ್ಲಾಕ್ ಆಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಶಶಿಧರ ಹೆಗಡೆ ರವರು ಹೇಳಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಯವರು ಪಕ್ಷದ ಸಂಘಟನೆಗಾಗಿ ಮಾಡುವ ಮಾಸಿಕ ಸಭೆಗಳಾಗಲಿ ಅಥವಾ ಪ್ರತಿ ವಲಯ ಮಟ್ಟದಲ್ಲಿ ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪಕ್ಕದ ಸಂಘಟನೆಗಾಗಿ ಮಾಡುವ ಪ್ರತಿಯೊಂದು ಕೆಲಸ ಕಾರ್ಯ ಚಟುವಟಿಕೆಗಳು ಗುರುತಿಸುವಂತೆ ಮಾಡಿದೆ ಎಂದು ಹೇಳಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವು ಅತ್ಯುತ್ತಮ ಸಾಧನೆ ಮಾಡಿದೆ ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹಿಂದುಳಿದಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಎರಡು ಜಿಲ್ಲೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಸಂಘಟನಾತ್ಮಕವಾಗಿ ನಾವೆಲ್ಲರೂ ಶಕ್ತಿಮೀರಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮುಹಮ್ಮದ್ ಆಲಿ ಅವರು ಮಾತನಾಡಿ ಕೆಲವೊಂದು ಕಾರ್ಯಕರ್ತರು ತಮ್ಮ ಸಮಸ್ಯೆಗಳಿಗೆ ಸ್ಪಂದನೆ ಸಿಗಲಿಲ್ಲವೆಂದು ಅಸಮಾಧಾನಗೊಳ್ಳದೆ ನೇರವಾಗಿ ಶಾಸಕರನ್ನು ಅಥವಾ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ವಿಚಾರ ವಿನಿಮಯ ಮಾಡಿಕೊಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೇ ವಿನಹ ಹೊರಗೆ ಮಾತಾಡಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು. ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕರ್ತರ ಮನವಿಗೆ ಸದಾ ಸ್ಪಂದಿಸುವ ಮನೋಭಾವನೆ ಹೊಂದಿವರಾಗಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಜಯಪ್ರಕಾಶ್ ರೈ, ಪುತ್ತೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ, ಕೆಪಿಸಿಸಿ ವತ್ತಾರ ಅಮಲ ರಾಮಚಂದ್ರ ,ಭಾಸ್ಕರ ಗೌಡ ಕೋಡಿಂಬಾಳ .ದುರ್ಗಾಪ್ರಸಾದ್ ರೈ ಕುಂಬ್ರ ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನೂರು, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜಾ ,ಜಿಲ್ಲಾ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ರಂಜಿತ್ ಬಂಗೇರ , ಅಬ್ದುಲ್ ರಹಿಮಾನ್ ಮೇನಾಲ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ರಹೀಮಾನ್ ಆಜಾದ್, ಸೈಯದ್ ಗಪೂರ್ ಸಾಹೇಬ್ ಪಾಲ್ತಾಡ್, ಎ ಕೆ ಜಯರಾಮ ರೈ, ದಿನೇಶ್ ಪಿ ವಿ, ಶಶಿಕಿರಣ ರೈ ನೂಜಿಬೈಲು , ವಿಶಾಲಾಕ್ಷಿ ಬನ್ನೂರು ಜೆಸಿಂತಾ ಗೊಸ್ವಾಲೀಸ್ ವೆಂಕಟರಮಣ ಗೌಡ ಕೊಳ್ತಿಗೆ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆಮ್ಮಾರ ಬಾಲಕೃಷ್ಣ ಗೌಡ ಕೃಷ್ಣಪ್ರಸಾದ್ ಆಳ್ವಾ, ಬೋಲೋಡಿ ಚಂದ್ರಹಾಸ ರೈ ಕಾಂಗ್ರೆಸ್ ಜಾಲತಾಣದ ಸಿದ್ದಿಕ್ ಸುಲ್ತಾನ್, ಆಲಿಕುಂಞ ಕೊರಂಗಿಲ, ಹಬೀಬ್ ಕಣ್ಣೂರು, ಹಾರಿಸ್ ಸಂಖ್ಯಾರು, ಎನ್‌ಎಸ್‌ಯುಐಯ ಎಡ್ವರ್ಡ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಕೆ.ಎಂ. ಆಲಿ ಆರ್ಲಪದವು, ನಗರಸಭಾ ಸದಸ್ಯ ರಾಬಿನ್ ತಾವ್ರೋ, ಮಹಾಬಲ ರೈ, ಗೋಪಾಲಕೃಷ್ಣ ಪಾಟಾಳಿ ಕಾವು, ಅಶೋಕ್ ಪೂಜಾರಿ, ಇಬ್ರಾಹಿಂ ಮುಲಾರ್, ಯಾಕೂಬ್ ಮುಳಾರ್, ಮುಕೇಶ್ ಕೆಮ್ಮಿಂಜೆ, ದಿನೇಶ್ ಕಾಮತ್, ಪವನ್ ಡಿ.ಜಿ ದೊಡ್ಡಮನೆ, ಎಸ್.ಡಿ ವಸಂತ, ಸೀತಾರಾಮ, ಶಾಪಿ ಕಂಚಿಲ್ಕುಂಜ, ವೆಂಕಟರಮಣ ಭಟ್ ಕೊಳ್ತಿಗೆ, ಶೀನಪ್ಪ ಮೊದಲಾದವರು ಉಪಸ್ಥಿತರಿದ್ದು ವಿವಿಧ ಸಮಸ್ಯೆಗಳ ಬಗ್ಗೆ ವಿವರಿಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಮುಹಮ್ಮದ್ ರಿಯಾಜ್ ಸ್ವಾಗತಿಸಿ ವರದಿ ಮಂಡಿಸಿದರು.

LEAVE A REPLY

Please enter your comment!
Please enter your name here