ಡಿ.6: ಗೋಳಿತ್ತಡಿಯಲ್ಲಿ ಶ್ರೀ ದುರ್ಗಾ ಎಂಟರ್‌ಪ್ರೈಸಸ್ ಶಾಮಿಯಾನ, ಸರ್ವೀಸಸ್ ಶುಭಾರಂಭ

0

ರಾಮಕುಂಜ: ಶ್ರೀ ದುರ್ಗಾ ಎಂಟರ್‌ಪ್ರೈಸಸ್ ಶಾಮಿಯಾನ ಮತ್ತು ಸರ್ವೀಸಸ್ ಕೇಂದ್ರ ಹಳೆನೇರೆಂಕಿ ಇದರ ಶಾಖೆ ರಾಮಕುಂಜ ಗ್ರಾಮದ ಗೋಳಿತ್ತಡಿ ಜನನಿ ಎನ್‌ಕ್ಲೇವ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.


ಜನನಿ ಎನ್‌ಕ್ಲೇವ್ ಕಟ್ಟಡ ಮಾಲಕರೂ, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕಾರ್ಯದರ್ಶಿಯೂ ಆದ ಕೆ.ಸೇಸಪ್ಪ ರೈಯವರು ಉದ್ಘಾಟಿಸಲಿದ್ದಾರೆ. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ಕೆ.ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಲ್ಲಾ ಸಮಾರಂಭಗಳಿಗೆ ವಿವಿಧ ವಿನ್ಯಾಸಗಳ ಪೆಂಡಲ್, ಶಾಮಿಯಾನ, ಸ್ಟೇಜ್ ಸೆಟ್ಟಿಂಗ್, ಟ್ರಸ್ಸ್ ಶೀಟ್, ಚಯರ್, ವಿಐಪಿ ಕುರ್ಚಿಗಳು, ಫ್ಯಾನ್ ಮತ್ತು ಕೂಲರ್ ಫ್ಯಾನ್, ವಾಟರ್ ಟ್ಯಾಂಕ್, ಮ್ಯಾಟ್, ಅಡುಗೆ ಪಾತ್ರೆಗಳು, ಸೌಂಡ್ಸ್, ಲೈಟಿಂಗ್ಸ್ ಮತ್ತು ಡೆಕೋರೇಶನ್ ಸೇವೆಗಳು ಲಭ್ಯವಿದೆ ಎಂದು ಮಾಲಕರಾದ ರಮ್ಯ ನವೀನ್ ಮತ್ತು ಪದ್ಮಯ ಪೂಜಾರಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here