@ ಪದ್ಮಾ ಕೆ.ಆರ್.ಆಚಾರ್ಯ
ಸಾಂಸ್ಕೃತಿಕ ಚಟುವಟಿಕೆಗಳ ಆಗರವೆನಿಸಿದ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಮಡಿಲಲ್ಲಿ ಚಿಗುರೊಡೆದ ಯಕ್ಷಲತೆ, ಧೀಶಕ್ತಿ ಮಹಿಳಾ ಯಕ್ಷ ಬಳಗಕ್ಕೆ ಇದೀಗ ಹತ್ತರ ಹರೆಯದ ಸಂಭ್ರಮ. ನಮಗೆ ಪಾರಂಪರಿಕವಾಗಿ ಬಂದಂತಹ ಈ ಕ್ಷೇತ್ರದಲ್ಲಿ, ತಮ್ಮನ್ನು ತಾವು ತೊಡಗಿಸಿ ಕೊಳ್ಳುವುದರಿಂದ ಜ್ಞಾನಾರ್ಜನೆಯೊಂದಿಗೆ ಮುಂದಿನ ಪೀಳಿಗೆಯವರಿಗೆ ಯಕ್ಷಗಾನದ ಅರಿವು ಮೂಡಿಸುವ ಉದ್ದೇಶದೊಂದಿಗೆ ಪುತ್ತೂರಿನ ಧೀಶಕ್ತಿ ಮಹಿಳಾ ಯಕ್ಷಬಳಗ ಮುನ್ನಡೆಯುತ್ತಿದೆ. ಪದ್ಮಾ ಕೆ ಆರ್ ಆಚಾರ್ಯ ಇವರ ನೇತೃತ್ವದಲ್ಲಿ, ದಶಂಬರ 2013ರಲ್ಲಿ ಸ್ಥಾಪಿತವಾದ ಧೀಶಕ್ತಿ ಮಹಿಳಾ ಯಕ್ಷ ಬಳಗಕ್ಕೆ ಹತ್ತರ ಸಾರ್ಥಕತೆಯ ಸಂಭ್ರಮದ ಸಮಯ. ಕೇವಲ ಐದು ಸದಸ್ಯೆಯರಿಂದ ಪ್ರಾರಂಭವಾದಂತಹ ಧೀಶಕ್ತಿ ಮಹಿಳಾ ಯಕ್ಷಬಳಗದಲ್ಲಿ ಇದೀಗ ಮೂವತ್ತಕ್ಕೂ ಮಿಕ್ಕಿ ಹಿರಿಯ-ಕಿರಿಯ ಸದಸ್ಯೆಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹತ್ತು ಹಲವು ಹೊಸತನ, ಸಾಧನೆಗಳೊಂದಿಗೆ ಯಶಸ್ವಿಯಾಗಿ ತಂಡ ಮುನ್ನಡೆಯುತ್ತಿದೆ. ಸುದರ್ಶನ ವಿಜಯ ಪ್ರಸಂಗದ ಮೂಲಕ ಪ್ರಾರಂಭವಾದ ತಂಡ, ಮತ್ತೆ ಒಂದರ ನಂತರ ಒಂದು ಅವಕಾಶಗಳನ್ನು ಪಡೆಯುತ್ತಾ ಹೋಯಿತು. ಇದೀಗ ತಾಳಮದ್ದಳೆ ಕಾರ್ಯಕ್ರಮಗಳ ಪ್ರದರ್ಶನವನ್ನು ನೀಡುವುದರ ಜೊತೆಗೆ, ಇಲ್ಲಿ ತರಬೇತಿಯ ಮೂಲಕ, ಕಲಾ ಪ್ರತಿಭೆಗಳನ್ನು ಮಾತಿನ ಮಂಟಪವನ್ನೇರಲು ಸಿದ್ಧಪಡಿಸುವ ಕಾಯಕವನ್ನೂ ಮಾಡಲಾಗುತ್ತಿದೆ. ಅದಲ್ಲದೇ, ಇಲ್ಲಿಂದ ತಾಳಮದ್ದಲೆಯ ಕಲೆಯನ್ನು ಕರಗತ ಮಾಡಿಕೊಂಡು, ತಾಳಮದ್ದಳೆಗಳ ಪ್ರದರ್ಶನ ನೀಡುವ ಕಲಾವಿದೆಯರು ತಯಾರಾಗಿದ್ದಾರೆ. ಈ ಮಹಿಳಾ ಯಕ್ಷ ಬಳಗ ಯಶಸ್ವಿಯಾಗಿ ಮುನ್ನಡೆಯಲು ಕಾರಣಕರ್ತರಾದವರು ಬಹಳಷ್ಟು ಮಂದಿಗಳಿದ್ದಾರೆ. ಭಾಗವತರಾದ ,ಗೋವಿಂದ ನಾಯಕ್ ಪಾಲೆಚ್ಚಾರು, ಕಾವ್ಯಶ್ರೀ ಅಜೇರು, ಅಮೃತ ಅಡಿಗ, ಸುಬ್ರಾಯ ಸಂಪಾಜೆ, ಸತ್ಯನಾರಾಯಣ ಅಡಿಗ, ಶ್ರೀಪತಿ ನಾಯಕ್ ಆಜೇರು, ಟಿ .ಡಿ .ಗೋಪಾಲಕೃಷ್ಣ ಭಟ್, ಮುರಳೀಧರ ಕಲ್ಲೂರಾಯ, ಪಿ.ಜಿ .ಜಗನ್ನಿವಾಸ ರಾವ್, ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯ ಪದ್ಯಾಣ, ಚಿನ್ಮಯ ಕಲ್ಲಡ್ಕ, ಪುರುಷೋತ್ತಮ ಭಟ್ ನೆಡುವಾಜೆ, ತೆಂಕಬೈಲು ಮುರಳಿ, ಪ್ರದೀಪ್ ಕುಮಾರ್ ಗಟ್ಟಿ, ಸತೀಶ್ ಇರ್ದೆ, ಮಹೇಶ್ ಕನ್ಯಾಡಿ, ಪದ್ಯಾಣ ಶಂಕರನಾರಾಯಣ ಭಟ್, ಚಂದ್ರಶೇಖರ ಗುರುವಾಯನಕೆರೆ, ಶಿತಿಕಂಠ ಭಟ್, ರಚನಾ ಚಿದ್ಗಲ್, ಸಿಂಚನಾ ಮೂಡು ಕೋಡಿ, ಅಚಿಂತ್ಯ ಕೃಷ್ಣ, ಲಕ್ಷ್ಮೀಶ ಶಗ್ರಿತಾಯ, ಮಾ| ಅದ್ವೈತ್ ಕನ್ಯಾನ ಮೊದಲಾದವರು ಹಿಮ್ಮೇಳ ಕಲಾವಿದರಾಗಿ ಸಹಕಾರವನ್ನು ನೀಡುತ್ತಿದ್ದಾರೆ.
ಬೆಂಗಳೂರು, ಮೈಸೂರು,ಕುಶಾಲನಗರ,ಮಡಿಕೇರಿ,ಕುಂದಾಪುರ,ಉಡುಪಿ, ಮಂಗಳೂರು, ಸುರತ್ಕಲ್,ಸುಬ್ರಹ್ಮಣ್ಯ,ಸುಳ್ಯ,ಮೂಡಬಿದಿರೆ, ಕೇರಳದ ಗಡಿಭಾಗವಾದ ಪೆರ್ಲ, ಕಾಸರಗೋಡು,ಎಡನೀರು, ಮಧೂರು,ಕೂಡ್ಲು, ಮೊದಲಾದೆಡೆ, ಮಹಾರಾಷ್ಟ್ರದ ಮುಂಬೈ ಮಹಾನಗರಿ ಮುಂತಾದ ಕಡೆಗಳಲ್ಲಿ 500ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ಧೀಶಕ್ತಿಯದ್ದು. ಸತತ ಎರಡು ಬಾರಿ, ಮುಂಬಯಿಗೆ ತೆರಳಿ ವಾರ ಪೂರ್ತಿ ಅಲ್ಲಿದ್ದು, ಸುತ್ತ ಮುತ್ತಲಿನ ತಾಣಗಳಲ್ಲಿ ಸರಣಿ ತಾಳಮದ್ದಲೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಶ್ರೀ ಕೃಷ್ಣ ರಾಯಭಾರ, ಸುಧನ್ವ ಮೋಕ್ಷ, ಸಂಜಯ ರಾಯಭಾರ, ಸುದರ್ಶನ ವಿಜಯ, ಸುಭದ್ರಾ ಕಲ್ಯಾಣ,ಜಾಂಬವತಿ ಕಲ್ಯಾಣ, ಪಟ್ಟಾಭಿಷೇಕ, ಕರ್ಣಾವಸಾನ, ಶ್ರೀರಾಮ ನಿರ್ಯಾಣ, ದಕ್ಷ ಯಜ್ಞ, ವೀರಮಣಿ ಕಾಳಗ, ಸಮರ ಸೌಗಂಧಿಕಾ,ಇಂದ್ರಜಿತು ಕಾಳಗ, ಉತ್ತರನ ಪೌರುಷ, ಶ್ರೀರಂಗ ತುಲಾಭಾರ, ಶ್ರೀ ಸತ್ಯನಾರಾಯಣ ವ್ರತ ಕಥಾ,ಗಿರಿಜಾ ಕಲ್ಯಾಣ, ಕುಮಾರ ವಿಜಯ, ರುಕ್ಮಾಂಗದ ಚರಿತ್ರೆ,ಭಕ್ತ ಮಯೂರಧ್ವಜ, ಮೊದಲಾದ ಪ್ರಸಂಗಗಳನ್ನು ಆಯ್ದುಕೊಂಡು, ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಬಳಗದ ಸಂಸ್ಥಾಪಕ ಪದ್ಮಾ ಕೆ ಆರ್ ಆಚಾರ್ಯ ಅವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ, 2020ರಲ್ಲಿ, “ಧೀಶಕ್ತಿ ಬಾಲಿಕಾ ಯಕ್ಷ ಬಳಗ” ಎನ್ನುವ ತಂಡವನ್ನು ರಚಿಸಿ, ಶಾಲಾ ಕಾಲೇಜಿಗೆ ಹೋಗುತ್ತಿರುವ, ಹೆಣ್ಣು ಮಕ್ಕಳನ್ನು ಈ ಕಲೆಯಲ್ಲಿ ತೊಡಗಿಸಿಕೊಳ್ಳುವ ಕಾರ್ಯ ಮುನ್ನಡೆಯುತ್ತಿದೆ.
ಧೀಶಕ್ತಿ ಮಹಿಳಾ ಯಕ್ಷಬಳಗದಲ್ಲಿ, ಸದಸ್ಯೆಯರಾಗಿ ಜಯಲಕ್ಷ್ಮಿ ವಿ ಭಟ್, ಸುಮಂಗಲಾ ರತ್ನಾಕರ್,ಶಂಕರಿ ಶರ್ಮಾ, ಗೀತಾ ಕೊಂಕೋಡಿ, ಹೀರಾ ಉದಯ್, ಪ್ರೇಮಾ ಕಿಶೋರ್, ಶ್ರೀವಿದ್ಯಾ ಜೆ ರಾವ್, ಶುಭಾ ಪಿ. ಆಚಾರ್ಯ, ಪ್ರೇಮಾ ನೂರಿತ್ತಾಯ,ಶಾಲಿನಿ ಅರುಣ್ ಶೆಟ್ಟಿ,ಜ್ಯೋತಿ ರಾವ್, ಸ್ವಪ್ನ ಉದಯ್, ಶೃತಿ ವಿಸ್ಮಿತ್,ಬಲ್ನಾಡು, ವಿನಯಾ ಕೇಕುಣ್ಣಾಯ, ಮಮತಾ ಪ್ರಕಾಶ್, ಮಲ್ಲಿಕಾ ಜೆ ರೈ, ಗೀತಾ ರಾವ್ ಮೊದಲಾದವರು ಮತ್ತು ಬಾಲಿಕಾ ಯಕ್ಷಬಳಗದಲ್ಲಿ ಅನುಪಮಾ ತಲಂಜೇರಿ, ಅಭಿಜ್ಞಾ ದಾಳಿಂಬ, ಶರಣ್ಯಾ ರಾವ್, ವರ್ಷಾ ಕೆ. ಟಿ, ವಿಖ್ಯಾತಿ ಬೆಜ್ಜಂಗಳ, ಅನನ್ಯಾ ಕೊಡಂಕಿರಿ, ಅಭಿಕ್ಷಾ ರಾವ್, ಆಪ್ತಾ ಚಂದ್ರಮತಿ, ಮುಳಿಯ, ಇಶಾ ಸುಲೋಚನಾ ಮುಳಿಯ, ಧನ್ವಿ ರೈ, ಧಾತ್ರಿ ರೈ, ವೈಷ್ಣವೀ ರಾವ್, ನಯನಾ ಮೊದಲಾದವರು ಸದಸ್ಯೆಯರಾಗಿದ್ದಾರೆ. ‘ ಧೀಶಕ್ತಿ’ಯೊಂದನ್ನೇ ಆಧಾರ, ಆಕರವಾಗಿರಿಸಿ ಸಾಗುತ್ತಾ ನಿಸ್ವಾರ್ಥದಿಂಧ ಕಲಾ ಸೇವೆಯೊಂದಿಗೆ ಭವಿಷ್ಯದ ಹಲವು ಯೋಜನಗೆಳೊಂದಿಗೆ ಈ ಕ್ಷೇತ್ರಕ್ಕೆ ಇನ್ನಷ್ಟು ಸೇವೆ ಸಾಧನೆಗಳನ್ನು ನೀಡುವ ಉದ್ದೇಶದಿಂದ ಮುನ್ನಡೆಯುತ್ತಿರುವ ಈ ತಂಡವು ಇದೀಗ ದಶಮಾನೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿದೆ. ದ.10 ರಂದು ದಶಮಾನೋತ್ಸವ ಕಾರ್ಯಕ್ರಮಗಳು ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ.