ಪುತ್ತೂರು ಕಂಬಳ ಜಿಲ್ಲೆಗೇ ಮಾದರಿಯಾಗಲಿದೆ-ಕೋಟಿ ಚೆನ್ನಯ ಜೋಡುಕರೆ ಕಂಬಳ ಪೂರ್ವಭಾವಿ ಸಭೆಯಲ್ಲಿ ವಿನಯ ಕುಮಾರ್ ಸೊರಕೆ

0

ಜ.27,28ರಂದು 31ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ

ಪುತ್ತೂರು:ದ.ಕ.ಜಿಲ್ಲೆಯ ಜನಪದ ಕ್ರೀಡೆಗಳಲ್ಲೊಂದಾದ,ಇತಿಹಾಸ ಪ್ರಸಿದ್ದ ಪುತ್ತೂರು ಕೋಟಿಚೆನ್ನಯ ಜೋಡುಕರೆ ಕಂಬಳವು ಜ.27 ಮತ್ತು 28ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದ್ದು, ಕಂಬಳದ ಯಶಸ್ಸಿಗಾಗಿ ಪೂರ್ವಭಾವಿ ಸಭೆಯು ಮಂಜಲ್ಪಡ್ಪುವಿನ ಉದಯಗಿರಿ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ಮಾತನಾಡಿ ನಮ್ಮ ಜಿಲ್ಲೆಯ ಜನಪದ ಕ್ರೀಡೆಯಾಗಿರುವ ಕಂಬಳವು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದು ದೇಶ ವಿದೇಶಗಳಿಗೆ ನಮ್ಮ ಕಂಬಳದ ಮಹತ್ವ ಪಸರಿಸಿದೆ.ಬೆಂಗಳೂರು ಕಂಬಳ, ಪುತ್ತೂರು ಕಂಬಳ, ಉಪ್ಪಿನಂಗಡಿ ಕಂಬಳ ಒಟ್ಟಿಗೆ ನಡೆಯುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ.ಪುತ್ತೂರಿನಲ್ಲಿ ನಡೆಯುವ 31ನೇ ವರ್ಷದ ಕೋಟಿ ಚೆನ್ನಯ ಕಂಬಳವು ಅತ್ಯಂತ ಯಶಸ್ವಿಯಾಗಿ ನಡೆದು ಇಡೀ ಜಿಲ್ಲೆಗೇ ಮಾದರಿ ಕಂಬಳವಾಗಿ ಮೂಡಿ ಬರಲಿದೆ ಎಂದು ಹೇಳಿದರು.ಪುತ್ತೂರಿನಲ್ಲಿ ಹಿಂದೆ ನಿಂತು ಹೋಗಿದ್ದ ಕಂಬಳವನ್ನು 31 ವರ್ಷಗಳ ಹಿಂದೆ ದಿ.ಜಯಂತ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆಸಿಕೊಂಡು ಬರಲಾರಂಭಿಸಿದ್ದು, ಬಳಿಕ ಮುತ್ತಪ್ಪ ರೈ ಅವರ ಸಾರಥ್ಯದಲ್ಲಿ ಮುಂದುವರಿಸಲಾಗಿತ್ತು. ಇದೀಗ 31ನೇ ವರ್ಷಕ್ಕೆ ಕಾಲಿಡುತ್ತಿದ್ದು ಈ ಅವಧಿಯಲ್ಲಿ ಕಂಬಳದ ಕ್ರೀಡೆ ಯಶಸ್ವಿಯಾಗಿ ಪುತ್ತೂರಿನಲ್ಲಿ ನಡೆಸಿಕೊಂಡು ಬಂದಿದ್ದ ಎನ್.ಸುಧಾಕರ್ ಶೆಟ್ಟಿ ಸಹಿತ ಹಲವಾರು ಗಣ್ಯರು ನಮ್ಮನ್ನು ಅಗಲಿದ್ದಾರೆ ಎಂದು ವಿನಯ ಕುಮಾರ್ ಸೊರಕೆ ಹೇಳಿದರು.

ಪುತ್ತೂರಿನಲ್ಲಿ ನಡೆಸಿಕೊಂಡು ಬರುತ್ತಿದ್ದ ಈ ಕಂಬಳವನ್ನು ವಿರೋಧಿಗಳು ನಿಲ್ಲಿಸಲು ಭಾರೀ ಪ್ರಯತ್ನ ಮಾಡಿದರೂ ಮಹಾಲಿಂಗೇಶ್ವರನ ಅನುಗ್ರಹದಿಂದ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.ಮುಂದೆಯೂ ಈ ಕಂಬಳ ಅತ್ಯಂತ ಯಶಸ್ವಿಯಾಗಿ ಮುಂದುವರಿದು ಕೊಂಡು ಹೋಗಲಿದೆ ಎಂದು ಅವರು ಹೇಳಿದರು.ಶಕುಂತಳಾ ಶೆಟ್ಟಿಯವರು ಬಿಜೆಪಿಯ ಶಾಸಕರಾಗಿದ್ದ ಸಂದರ್ಭದಲ್ಲಿ ಪುತ್ತೂರು ಕೋಟಿ ಚೆನ್ನಯ ಕಂಬಳಕ್ಕೆ ಅತಿಥಿಯಾಗಿ ಬಂದ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಏಕೈಕ ಬಿಜೆಪಿ ಮಹಿಳೆಯಾಗಿದ್ದ ಶಕುಂತಳಾ ಶೆಟ್ಟಿಯವರಿಗೆ ಬಳಿಕದ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೇಟ್ ನೀಡದೆ ವಂಚಿಸಲಾಯಿತು.ಮಹಾಲಿಂಗೇಶ್ವರನ ಅನುಗ್ರಹದಿಂದ ಶಕುಂತಳಾ ಶೆಟ್ಟಿಯವರು ಕಾಂಗ್ರೆಸ್‌ಗೆ ಬಂದು ಮತ್ತೊಮ್ಮೆ ಶಾಸಕರಾಗಿ ನಮ್ಮ ಕಂಬಳದ ಯಶಸ್ವಿಗೆ ಕೈಜೋಡಿಸಲು ಅವಕಾಶವಾಯಿತು ಎಂದು ಹೇಳಿದ ವಿನಯ ಕುಮಾರ್,ಪುತ್ತೂರಿನ ಕಂಬಳಕ್ಕೆ ಸರ್ವರ ಸಹಕಾರ ಬೇಕೆಂದು ಹೇಳಿದರು.


ಅಶೋಕ್ ರೈ ಅಭಿನಂದನಾರ್ಹರು-ಚಂದ್ರಹಾಸ ಶೆಟ್ಟಿ:
ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿಯವರು ಮಾತನಾಡಿ ಪುತ್ತೂರಿನ ಸರ್ವ ಕಂಬಳಾಭಿಮಾನಿಗಳ ಸಹಕಾರದಿಂದ ರಾಜಧಾನಿಯಲ್ಲಿ ನಮ್ಮ ಶಾಸಕ ಅಶೋಕ್ ಕುಮಾರ್ ರೈ ಅವರು ಬೆಂಗಳೂರು ಕಂಬಳವನ್ನು ಅದ್ದೂರಿಯಾಗಿ ನಡೆಸಿಕೊಟ್ಟು ದೇಶ ವಿದೇಶಗಳಲ್ಲಿ ಕೀರ್ತಿ ಪತಾಕೆಯನ್ನು ಹಾರಿಸಿದ್ದು ಅವರಿಗೆ ಹಾಗು ಬೆಂಗಳೂರು ಕಂಬಳ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮುರಳೀಧರ ರೈ ಮಠಂತಬೆಟ್ಟು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.ಪುತ್ತೂರಿನಲ್ಲಿ 31ನೇ ವರ್ಷದ ಕಂಬಳ ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯವಿದೆ ಎಂದ ಅವರು, ಕಳೆದ ಬಾರಿ ಪುತ್ತೂರು ಕಂಬಳಕ್ಕೆ 32 ಲಕ್ಷ ರೂಪಾಯಿಗೂ ಮೇಲ್ಪಟ್ಟು ವೆಚ್ಚ ತಗಲಿದ್ದು, ಈ ವರ್ಷ ಪುತ್ತೂರನಲ್ಲಿ ನಡೆಯುವ ಕಂಬಳಕ್ಕೆ ಇನ್ನೂ ಹೆಚ್ಚಿನ ವೆಚ್ಚ ತಗಲಲಿದೆ.ಕಂಬಳದ ಜೊತೆಗೆ ಪುತ್ತೂರಿನಲ್ಲಿ ಪಿಲಿರಂಗ್,ಕಬಡ್ಡಿ ನಡೆಸಿಕೊಂಡು ಬರುತ್ತಿದ್ದು, ಪ್ರತಿಯೊಬ್ಬರ ಸಹಕಾರದಿಂದ ಈ ಎಲ್ಲಾ ಕ್ರೀಡೆಗಳು ಯಶಸ್ವಿಯಾಗಿ ನಡೆಯುತ್ತಾ ಬರುತ್ತಿದೆ ಎಂದು ಅವರು ಹೇಳಿದರು.


ಕೋಟಿ ಚೆನ್ನಯ ಕಂಬಳ ಸಮಿತಿ ಖಜಾಂಜಿ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ ಕಂಬಳದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ. ಎಲ್ಲಾ ಕಾರ್ಯಕರ್ತರು ಬೆಳಗ್ಗಿನಿಂದ ಕಂಬಳ ಮುಗಿಯುವ ತನಕ ಅಲ್ಲೇ ಇದ್ದು ಸಹಕಾರ ನೀಡಬೇಕೆಂದು ಹೇಳಿದರು.ಕಂಬಳದ ಜೊತೆಗೆ ಪಿಲಿರಂಗ್,ಕಬಡ್ಡಿ ಕೂಡಾ ನಡೆದಿದೆ.ಬೆಂಗಳೂರಿನಲ್ಲಿ ನಮ್ಮ ಕಂಬಳ ಯಶಸ್ವಿಯಾಗಿ ಸಾಗಿದೆ. ಪುತ್ತೂರಿನಲ್ಲೂ ಬೆಂಗಳೂರಿನಂತೆ ಕಂಬಳ ಯಶಸ್ವಿಯಾಗಿ ನಡೆಯಲು ಸರ್ವ ಸದಸ್ಯರ ಸಹಕಾರ ಅಗತ್ಯ ಎಂದರು.


ಪುತ್ತೂರು ಕಂಬಳಕ್ಕೆ ಶಾಶ್ವತ ಟ್ರ್ಯಾಕ್, ವೇದಿಕೆ ಆಗಬೇಕು- ಮಠಂತಬೆಟ್ಟು:
ಪುತ್ತೂರು ಕೋಟಿ ಚೆನ್ನಯ ಕಂಬಳಕ್ಕೆ ಶಾಶ್ವತ ಟ್ರ್ಯಾಕ್ ಹಾಗು ಶಾಶ್ವತ ವೇದಿಕೆ ಆಗಬೇಕಾಗಿದ್ದು, ಶಾಸಕ ಅಶೋಕ್ ಕುಮಾರ್ ರೈ ಹಾಗು ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ಮೂಲಕ ಸರಕಾರದಿಂದ ಅನುದಾನ ತರುವ ಕೆಲಸ ಆಗಬೇಕೆಂದು ಮುರಳೀಧರ ರೈ ಮಠಂತಬೆಟ್ಟು ಹೇಳಿದರು.ಉಪಾಧ್ಯಕ್ಷ ಸುದರ್ಶನ್ ನಾಕ್ ಕಂಪ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಮಾಜಿ ತಾ.ಪಂ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ರಂಜಿತ್ ಬಂಗೇರ, ಕೃಷ್ಣಪ್ರಸಾದ್ ಆಳ್ವ ಸಹಿತ ಹಲವಾರು ಮಂದಿ ಮಾತನಾಡಿ ವಿವಿಧ ಸಲಹೆ ಸೂಚನೆ ನೀಡಿದರು.ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ, ಕಂಬಳದ ಅಭಿಮಾನಿಯಾಗಿರುವ ಉದಯಗಿರಿ ಕಟ್ಟಡದ ಮಾಲಕ ರಾಧಾಕೃಷ್ಣ ನಾಕ್, ಜೆ.ಕೆ. ವಸಂತ್ ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಭೆಯಲ್ಲಿ ಉದ್ಯಮಿ ಅಜಿತ್ ರೈ ಕಡಬ, ಬೇಬಿ ಜಾನ್, ಉಮಾಶಂಕರ್ ಪಾಂಗ್ಲಾಯಿ, ಜಗದೀಶ್ ಜೀತ್ ಸ್ಟುಡಿಯೋ, ರೋಶನ್ ರೈ ಬನ್ನೂರು, ಮಂಜುನಾಥ್ ಗೌಡ ತೆಂಕಿಲ, ಶಶಿಕಿರಣ್ ರೈ ನೂಜಿಬೈಲು, ಖಾದರ್ ಪೋಳ್ಯ ಮಹಾಬಲ ಗೌಡ ತೆಂಕಿಲ, ಪ್ರೇಮಾನಂದ ನಾಕ್, ಸಂಮ್ಮಿತ್ ರೈ, ಪ್ರಣಾಮ್ ಶೆಟ್ಟಿ ಕೈಕಾರ, ಚಂದ್ರಹಾಸ ಶೆಟ್ಟಿ ಬನ್ನೂರು, ವಿಕ್ರಂ ಶೆಟ್ಟಿ ಅಂತರ, ವಿಶ್ವಜೀತ್ ಅಮ್ಮುಂಜ, ಅಸ್ವಿಜ್ ಮೇಲಂಟ, ಪ್ರವೀಣ್ ಶೆಟ್ಟಿ ಅಳಕೆಮಜಲು, ರಾಕೇಶ್ ರೈ ಬೋಳೋಡಿ, ಗಂಗಾಧರ್ ಶೆಟ್ಟಿ ಕೈಕಾರ, ಹಸೈನಾರ್ ಬನಾರಿ, ರಾಜೇಶ್ ಬನಾರಿ, ಶಬರಿ ಶಶಿ ನೆಲ್ಲಿಕಟ್ಟೆ, ಹರೀಶ್ ಪಕ್ಕಳ, ಚಂದ್ರಶೇಖರ್ ರೈ, ಕೃಷ್ಣ ನಾಯ್ಕ್, ಯೋಗೀಶ್ ಸಾಮಾನಿ, ಕಿರಣ್ ಡಿಸೋಜ, ವಿಜೇತ್ ಗೌಡ, ಗಂಗಾಧರ ರೈ, ಕೀರ್ತನ್ ಗೌಡ, ರಮೇಶ್ ಗೌಡ, ಜಿನ್ನಪ್ಪ ಪೂಜಾರಿ ಮುರ, ಪ್ರಶಾಂತ್ ಗೌಡ, ಸುಂದರ ಸಪಲ್ಯ, ದಿಲೀಪ್ ಶೆಟ್ಟಿ,ದಾಮೋದರ ಶೆಟ್ಟಿ ಕೋಡಿಂಬಾಡಿ, ದಾಮೋದರ್ ನಲ್ಕೆ ಮುರ, ಯತೀಶ್ ಶೆಟ್ಟಿ ಬರಮೇಲು, ದಿನೇಶ್ ಶೆಟ್ಟಿ ಬರಮೇಲು, ಪ್ರಭಾಕರ ಸಾಮಾನಿ, ಶಂಕರ ಸಾಮಾನಿ, ವಿಲ್ರೆಡ್ -ರ್ನಾಂಡೀಸ್ ಉರ್ಲಾಂಡಿ, ರಫೀಕ್ ಎಮ್.ಕೆ, ಸೂರಜ್ ಗೌಡ ಕೊಡಿಪ್ಪಾಡಿ, ಅಬೂಬಕ್ಕರ್ ಮುಲಾರ್, ಇಸ್ಮಾಯಿಲ್ ಎಮ್.ಬಿ.ಬಲ್ನಾಡು, ಆನಂದ ಆಚಾರ್ಯ, ಸಚಿನ್ ಸರೋಳಿ, ನವೀನ್ ನಾಕ್ ಬೆದ್ರಾಳ, ಕಿಶನ್ ಸರೋಳಿ, ಸಂತೋಷ್ ಗೌಡ, ಲಿಖಿತ್ ರೈ, ವಿಕ್ರಂ ಶೆಟ್ಟಿ ಅಂತರ, ಹರ್ಷ ಶೆಟ್ಟಿ ಮೊದಲಾದವರು ವಿವಿಧ ಸಲಹೆ ಸೂಚನೆ ನೀಡಿದರು.ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ.ಕಾರ್ಯಕ್ರಮ ನಿರ್ವಹಿಸಿದರು.


ಸುಧಾಕರ್ ಶೆಟ್ಟಿಯವರಿಗೆ ಶ್ರದ್ದಾಂಜಲಿ:
ಕೋಟಿ ಚೆನ್ನೆಯ ಜೋಡುಕರೆ ಕಂಬಳ ಸಮಿತಿ ಸಂಚಾಲಕರಾಗಿದ್ದು ಇತ್ತೀಚೆಗೆ ನಿಧನರಾಗಿರುವ, ಶ್ರೀ ದೇವತಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿಯವರಿಗೆ ಸಭೆಯಲ್ಲಿ ಮೌನಪ್ರಾರ್ಥನೆ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಲಾಯಿತು.ಸುಧಾಕರ್ ಶೆಟ್ಟಿಯವರ ಕುರಿತು ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿಯವರು ಮಾತನಾಡಿ, ಅವರು ಸಲ್ಲಿಸಿದ್ದ ಸೇವೆಯನ್ನು ಕೊಂಡಾಡಿದರು.

ಗೌರವ ಸಂಚಾಲಕರಾಗಿ ಅಶೋಕ್ ಕುಮಾರ್ ರೈ,ಸಂಚಾಲಕರಾಗಿ ವಸಂತ ಕುಮಾರ್ ರೈ ಆಯ್ಕೆ
ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಗೆ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರನ್ನು ಗೌರವ ಸಂಚಾಲಕರಾಗಿ ಆಯ್ಕೆ ಮಾಡಲಾಯಿತು.ಸಂಚಾಲಕರಾಗಿ ಜೆ.ಕೆ ವಸಂತ ಕುಮಾರ್ ರೈ ಅವರನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿದ್ದ ಸದಸ್ಯರ ಒಕ್ಕೊರಳ ಆಗ್ರಹದಂತೆ ಅಶೋಕ್ ಕುಮಾರ್ ರೈ ಅವರನ್ನು ಗೌರವ ಸಂಚಾಲಕರಾಗಿ ಆಯ್ಕೆ ಮಾಡಲಾಯಿತು. ಕಂಬಳ ಸಮಿತಿ ಸಂಚಾಲಕರಾಗಿದ್ದ ಎನ್.ಸುಧಾಕರ್ ಶೆಟ್ಟಿಯವರು ಇತ್ತೀಚೆಗೆ ನಿಧನ ಹೊಂದಿದ್ದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ವಸಂತ ಕುಮಾರ್ ರೈ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here